Advertisement

ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ಚಿತ್ರದಲ್ಲಿ ಒಬ್ಬ  ವ್ಯಕ್ತಿಗೆ 24 ಪಾತ್ರ!

01:04 PM Mar 07, 2022 | Team Udayavani |

ನವ ನಿರ್ದೇಶಕ ಸಂತೋಷ್‌ ಕೊಡಂಕೇರಿ ಸುಮ್ಮನೆ ಕೂರುವ ವ್ಯಕ್ತಿಯಲ್ಲ, ಹೊಸ ಯೋಚನೆಯೊಂದಿಗೆ ಏನಾದರೊಂದು ವಿಭಿನ್ನವಾಗಿ ಕಟ್ಟಿಕೊಡಲು ಪ್ರಯತ್ನಿಸುತ್ತಲೇ ಇರುತ್ತಾರೆ.  ಈ ಬಾರಿ ಸಂತೋಷ್‌ “ರಾಜ’ನ ಕಥೆ ಹೇಳಲು ಹೊರಟಿದ್ದಾರೆ! ಏನಿದು ಎಂದುನೀವು ಕೇಳಬಹುದು. ಸಂತೋಷ್‌ ಕೊಡಂಕೇರಿ “ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ ಎಂಬ ಸಿನಿಮಾ ನಿರ್ದೇಶಿಸಿದ್ದಾರೆ.

Advertisement

ಇದು ಕಮರ್ಷಿಯಲ್‌ ಸಿನಿಮಾವಲ್ಲ. ಒಂದು ಪ್ರಯೋಗಾತ್ಮಕ ಸಿನಿಮಾ. ರವಿಂದ್ರನಾಥ್‌ಟ್ಯಾಗೋರ್‌ ಅವರ “ದೇರ್‌ ವಾಸ್‌ ಎ ಕಿಂಗ್‌’ಎಂಬ ಕಾದಂಬರಿಯನ್ನಾಧರಿಸಿ ಈ ಸಿನಿಮಾಮಾಡಲಾಗಿದೆ. ವಿಶೇಷವೆಂದರೆ ಈ ಚಿತ್ರದಲ್ಲಿಬರುವ 24 ಪಾತ್ರಗಳನ್ನು ಒಬ್ಬರೇ ನಿರ್ವಹಿಸಿದ್ದಾರೆ.ರಂಗಭೂಮಿ ಕಲಾವಿದ, ಬರಹಗಾರ ಯೋಗೇಶ್‌ಮಾಸ್ಟರ್‌ 24 ಪಾತ್ರಗಳಿಗೂ ಜೀವ ತುಂಬಿದ್ದಾರೆ.ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡಿ, ಅದರಲ್ಲಿ ನಟಿಸಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ ಸಂತೋಷ್‌, “ಇದೊಂದು ಪ್ರಯೋಗಾತ್ಮಕ ಸಿನಿಮಾ. ಈಚಿತ್ರವನ್ನು ಕೇವಲ 11 ಜನರ ತಂಡದೊಂದಿಗೆ ನಿರ್ದೇಶನ ಮಾಡಿದ್ದು ವಿಶೇಷ.

ಗುಣಮಟ್ಟದಲ್ಲಿ ಎಲ್ಲಿಯೂ ಕಾಂಪ್ರಮೈಸ್‌ ಆಗದೆ ಸಿನಿಮಾ ತಯಾರಾಗಿದ್ದು, ಚಿತ್ರ ಈಗಾಗಲೇ ವಿಶ್ವದ ಹಲವಾರು ಚಿತ್ರೋತ್ಸವದಲ್ಲಿ ಪಾಲ್ಗೊಂಡುಹತ್ತಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ’ ಎಂದರು. ಯೋಗೇಶ್‌ಮಾಸ್ಟರ್‌ ಕೂಡಾ 24 ಪಾತ್ರಗಳನ್ನು ಮಾಡುವಾಗಿನ ಸವಾಲು,ತಂಡದ ಶ್ರಮದ ಬಗ್ಗೆ ಮಾತನಾಡಿದರು. ಈ ಚಿತ್ರವನ್ನು ದೃಷ್ಠಿ ಪ್ರೊಡಕ್ಷನ್ಸ್‌ನಡಿ ಸಂತೋಷ್‌ ನಿರ್ಮಿಸಿದ್ದಾರೆ.

ಬೆಂಗಳೂರು ಫೆಸ್ಟಿವಲ್‌ನಲ್ಲಿ ಆಯ್ಕೆಯಾಗದ ಬೇಸರ :

Advertisement

“ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ ಚಿತ್ರ ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಆದರೆ, ಬೆಂಗಳೂರುಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅವಕಾಶ ಸಿಕ್ಕಿಲ್ಲಎಂಬ ಬೇಸರ ಚಿತ್ರತಂಡದ್ದು. “ನಮ್ಮ ಚಿತ್ರವನ್ನುಚಿತ್ರೋತ್ಸವ ಆಯ್ಕೆ ಸಮಿತಿ ಮುಂದೆ ಕಳುಹಿಸಿದ್ದೆವು. ಆದರೆ,ಯಾವುದೇ ವಿಭಾಗದಲ್ಲೂ ಚಿತ್ರ ಆಯ್ಕೆಯಾಗಿಲ್ಲ. ನಮಗೆಆಯ್ಕೆಯಾಗಿಲ್ಲ ಎಂಬ ಬೇಸರಕ್ಕಿಂತ ಹೆಚ್ಚಾಗಿ ಯಾಕೆಆಯ್ಕೆಯಾಗಿಲ್ಲ ಎಂಬ ಬಗ್ಗೆ ಸ್ಪಷ್ಟತೆ ಬೇಕಿತ್ತು. ಒಂದು ಸಿನಿಮಾದಆಯ್ಕೆಯ ಮಾನದಂಡಗಳೇನು ಎಂಬುದನ್ನು ತಿಳಿದುಕೊಳ್ಳುವಕುತೂಹಲವಿತ್ತು. ಏಕೆಂದರೆ ಮುಂದಿನ ದಿನಗಳಲ್ಲಿ ತಿದ್ದಿಕೊಳ್ಳುವಎಂದು. ಆದರೆ, ನಮಗೆ ಆಯ್ಕೆ ಮಂಡಳಿಯಿಂದ ಈ ಬಗ್ಗೆ ಉತ್ತರ ಸಿಗಲಿಲ್ಲ’ ಎಂಬುದು ಸಂತೋಷ್‌ ಮಾತು.

Advertisement

Udayavani is now on Telegram. Click here to join our channel and stay updated with the latest news.

Next