ಹೊಸಬರೇ ಸೇರಿ ಮಾಡಿರುವ “ಒಂದಾನೊಂದು ಕಾಲದಲ್ಲಿ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ಪುನೀತ್ ರಾಜ್‌ಕುಮಾರ್ ಸಮಾಧಿ ಬಳಿ ಚಿತ್ರತಂಡ ಟ್ರೇಲರ್ ರಿಲೀಸ್ ಮಾಡಿದೆ. ಹಿರಿಯ ನಿರ್ದೇಶಕ ಭಗವಾನ್ ಬಳಿ ತರ ಬೇತಿ ಪಡದುಕೊಂಡಿರುವ ಎನ್.ಮಂಜುನಾಥ್ ಸಿನಿಮಾಕ್ಕೆ ಕಥೆ,ಚಿತ್ರಕತೆ, ಸಂಭಾಷಣೆ, ನಿರ್ದೇಶನದ ಜೊತೆಗೆ ನಾಯಕನಾಗಿ ಅಭಿನಯಿಸಿದ್ದಾರೆ.
ಟಿ.ಎಸ್. ಗೋಪಾಲ್ ಅವರು ಈ ಚಿತ್ರದ ನಿರ್ಮಾಪಕರು. 1980ರ ಕಾಲಘಟ್ಟದಲ್ಲಿ ನಡೆಯುವ ರೆಟ್ರೋ ಶೈಲಿಯ ಸಿನಿಮಾ. ಕರವಸ್ತ್ರ ಮೇಲಿನ ಪ್ರೀತಿ ಕತೆ ಇರಲಿದೆ. ನಾಯಕ ಮತ್ತು ನಾಯಕಿ ಒಬ್ಬರನ್ನೊಬ್ಬರು ಭೇಟಿಯಾಗಿರುವುದಿಲ್ಲ.
ಕರವಸ್ತ್ರವು ಇಬ್ಬರ ನಡುವೆ ಆಟವಾಡಿಸುತ್ತಿರುತ್ತದೆ. ಅದು ಇಬ್ಬರನ್ನು ಹೇಗೆ ಸೇರಿಸುತ್ತದೆ. ಪ್ರೀತಿಯ ಸಂದೇಶ ಯಾವ ರೀತಿ ರವಾನೆಯಾಗುತ್ತಿರುತ್ತದೆ ಎಂಬಂತ ವಿಷಯಗಳನ್ನು ಅಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ಹೇಳುವ ಪ್ರಯತ್ನ ಮಾಡಲಾಗಿದೆಯಂತೆ.
ಇದನ್ನೂ ಓದಿ;- ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಿಲ್ಲ: ಹೆಚ್ ಡಿಕೆ ಸ್ಪಷ್ಟನೆ
ಹರ್ಷ ಲಹನಿ ನಾಯಕಿ. ಉಳಿದಂತೆ ಶೋಭರಾಜ್, ಸಂಗೀತ, ನೀನಾಸಂ ಸತೀಶ್ ಮುಂತಾದವರು ನಟಿಸಿದ್ದಾರೆ. ಪ್ರಶಾಂತ್ ಹೊನ್ನಾವರ ಸಾಹಿತ್ಯದ ನಾಲ್ಕು ಗೀತೆಗಳಿಗೆ ಯಶವಂತ್ ಭೂಪತಿ ಸಂಗೀತ ಸಂಯೋಜಿಸಿದ್ದಾರೆ.
ಚಿತ್ರಕ್ಕೆ ಏಳುಕೋಟೆ ಚಂದ್ರು ಛಾಯಾಗ್ರಹಣ, ಸೆಲ್ವರಾಜು-ವಿನೋದ್ ಸಂಕಲನವಿದೆ. ಕನಕಪುರ, ಹಾರೋಹಳ್ಳಿ,ಆನೇಕಲ್, ತಟ್ಟಗೆರೆ, ಹೂಕ್ಲೇರಿ ಕಡೆಗಳಲ್ಲಿ ಚಿತ್ರೀಕರಣ ನಡೆದಿದ್ದು, ಕೊನೆಯ ಎರಡು ದಿನಗಳ ಕ್ಲೈ ಮ್ಯಾಕ್ಸ್ ಬಾಕಿ ಇದ್ದು, ಸಕಲೇಶಪುರದಲ್ಲಿ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.