Advertisement

ಒಂದ್‌ ಕಾಲಲ್ಲಿ  ಬಿಳಿ ಮತ್ತೂಂದ್ರಲ್ಲಿ ಕೆಂಪು ! ?

03:45 AM Apr 18, 2017 | Harsha Rao |

ಒಂದು ಡಿಸೆಂಬರ್‌ ಬೆಳಗ್ಗೆ… ಚಳಿ ಜೋರಾಗಿತ್ತು. ಅರ್ಧ ಮುಚ್ಚಿದ ಕಣ್ಣು, ದಪ್ಪಸ್ವೆಟರ್‌ ಹೊದ್ದು ಇಬ್ಬನಿ ಸುರಿವ ಹಾದಿಯಲ್ಲಿ ಹಲ್ಲು ಕಟಕಟಿಸುತ್ತಾ ಟ್ಯೂಷನ್‌ ಮನೆ ಸೇರಿಕೊಂಡಿ¨ªೆವು. ಆಗ ಏನಾಯ್ತು ಅಂದ್ರೆ…

Advertisement

ವೃತ್ತಿ ಜೀವನ ನಿರ್ಧರಿಸುವ ದ್ವಿತೀಯ ಪಿಯುಸಿ ಬಂತೆಂದರೆ ಮಕ್ಕಳ ಜತೆ ತಂದೆತಾಯಿಯರಿಗೂ ದೊಡ್ಡ ಪರೀಕ್ಷೆ. ಹೆಚ್ಚು ಅಂಕ ಪಡೆದು ಒಳ್ಳೆಯ ಸೀಟು ಪಡೆಯಲು ನಡೆಸಲು ನಾನಾ ಸರ್ಕಸ್‌, ಕಸರತ್ತು. ಅವುಗಳಲ್ಲಿ ಮುಖ್ಯವಾದದ್ದು ಟ್ಯೂಷನ್‌. ನಾವು ಕಾಲೇಜಿನಲ್ಲಿರುವಾಗಲೇ ಸಿಇಟಿ ವಿಧಾನ ಜಾರಿಯಲ್ಲಿದ್ದು ಅದರ ವಿಶೇಷ ತರಬೇತಿಗಾಗಿ ಟ್ಯೂಷನ್‌ ಆರಂಭವಾಗಿತ್ತು. ಕಾಲೇಜು, ಬೆಳಿಗ್ಗೆ ಒಂಬತ್ತರಿಂದ ಆರಂಭವಾಗುತ್ತಿತ್ತು. ಹಾಗಾಗಿ ಟ್ಯೂಷನ್‌ ಬೆಳಿಗ್ಗೆ ಐದೂವರೆಗೆÇÉಾ ಶುರುವಾಗುತ್ತಿತ್ತು. ಶಾಲೆಗೆ ನಟರಾಜ ಸರ್ವೀಸ್‌ ಮತ್ತು ಕಾಲೇಜಿಗೆ ಸೈಕಲ… ಸವಾರಿ ಹೋಗುತ್ತಿದ್ದ ಜಮಾನಾ ಅದು. ಮನೆಯನ್ನು ಬೆಳಿಗ್ಗೆ ಐದು ಗಂಟೆಗೆ ಬಿಟ್ಟು ಸೈಕಲ… ತುಳಿದು ಟ್ಯೂಷನ್‌ಗೆ ಸಮಯಕ್ಕೆ ಸರಿಯಾಗಿ ಸೇರಬೇಕಿತ್ತು. ಅಲ್ಲಿಂದ ಮರಳಿ ಮನೆಗೆ ಬಂದು ತಯಾರಾಗಿ ತಿಂಡಿ ತಿಂದು ಕಾಲೇಜಿಗೆ ಓಡಾಟ. ಅದೇನು ಓದುತ್ತಿ¨ªೆವೋ ಅಥವಾ ಓಡುತ್ತಿ¨ªೆವೋ? ಈಗ ನೆನೆಸಿಕೊಂಡರೆ ಆಶ್ಚರ್ಯವೆನಿಸುತ್ತದೆ. ಆ ಟ್ಯೂಷನ್‌- ಕಾಲೇಜು- ಟೆÓr…- ಪರೀಕ್ಷೆ… ಈ ಧಾವಂತದಲ್ಲಿ ನಡೆದ ಪ್ರಸಂಗ ಇದು. ಚಳಿಗಾಲದಲ್ಲಿ ಅಂದರೆ ಡಿಸೆಂಬರ್‌ ತಿಂಗಳಲ್ಲಿ ಟ್ಯೂಷನ್‌ಗೆ ಹೋಗಲು ಬಲು ಕಷ್ಟವಾಗುತ್ತಿತ್ತು. ಮೈ ಕೊರೆವ ಮಲೆನಾಡ ಚಳಿಯಲ್ಲಿ ಎಲ್ಲರೂ ಮಲಗಿರುವಾಗ ನಾವು ಮಾತ್ರ ಸ್ವೆಟರ್‌ ಧರಿಸಿ ಸೈಕಲ… ತುಳಿಯುತ್ತಾ μಸಿಕ್ಸ್‌, ಕೆಮಿಸ್ಟ್ರಿ ಫಾರ್ಮುಲಾ ಕಲಿಯುವುದು ಆ ಹದಿಹರೆಯದ
ದಿನಗಳಲ್ಲಿ ರುಚಿಸುವುದು ಸಾಧ್ಯವೇ? ಆದರೆ ಟ್ಯೂಷನ್‌ ತಪ್ಪಿಸಲು ಅಸಾಧ್ಯವಾಗಿತ್ತು, ಏಕೆಂದರೆ ಮೇನಲ್ಲಿ ನಡೆವ
ಪರೀಕ್ಷೆಗೆ ರಿವಿಷನ್‌ ಜೋರಾಗಿ ನಡೆಯುತ್ತಿದ್ದದ್ದು ಅದೇ ತಿಂಗಳಿನಲ್ಲಿ. ಹೀಗಾಗಿ ಬರೀ ಚಳಿಗಾಳಿಯಲ್ಲ, ಬಿರುಗಾಳಿ-
ಚಂಡಮಾರುತವಿದ್ದರೂ ಯಾವುದನ್ನೂ ಲೆಕ್ಕಿಸದೇ ಸೈಕಲ… ತುಳಿದು ಟ್ಯೂಷನ್‌ಗೆ ಹೋಗುವ ಕರ್ಮಯೋಗಿಗಳು
ನಾವಾಗಿ¨ªೆವು.

ಒಂದು ಡಿಸೆಂಬರ್‌ ಬೆಳಗ್ಗೆ… ಚಳಿ ಜೋರಾಗಿತ್ತು. ಅರ್ಧ ಮುಚ್ಚಿದ ಕಣ್ಣು, ದಪ್ಪಸ್ವೆಟರ್‌ ಹೊದ್ದು ಇಬ್ಬನಿ ಸುರಿವ ಹಾದಿಯಲ್ಲಿ ಹಲ್ಲು ಕಟಕಟಿಸುತ್ತಾ ಟ್ಯೂಷನ್‌ ಮನೆ ಸೇರಿಕೊಂಡಿ¨ªೆವು. ಪಾಪ, ನಮ್ಮ ಲೆಕ್ಚರರ್‌ ಕೂಡಾ ತೂಕಡಿಸುತ್ತಾ
ಭಾರವಾದ ಕಣ್ಣುಗಳಿಂದಲೇ ಪಾಠ ಮುಗಿಸಿದ್ದರು. ಪಿಚ್ಚುಗಣ್ಣಿನ, ಆಗಾಗ್ಗೆ ಆಕಳಿಸುತ್ತಾ ನಿದ್ದೆ ವಿರುದ್ಧ ಹೋರಾಡುತ್ತಿದ್ದ ನಮ್ಮನ್ನು ಕಂಡು ಅವರಿಗೆ ಪಾಠ ಮಾಡುವ ಉತ್ಸಾಹವಾದರೂ ಎಲ್ಲಿಂದ ಬರಬೇಕು? ಬೇಗ ಟ್ಯೂಷನ್‌ ಮುಗಿಸಿ ಮನೆಗೆ ಹೋಗಿ ಮತ್ತೆ ಕಾಲೇಜಿಗೆ ಓಡುವ ಅವಸರ ಎಲ್ಲರಿಗೂ. ಪಾಠ ಕೇಳಿದ್ದು ತಲೆ ತುಂಬಿತ್ತೋ, ಇಲ್ಲವೋ… ಹೊಟ್ಟೆಯಂತೂ ಖಾಲಿಯಾಗಿ ಚುರುಗುಡುತ್ತಿತ್ತು. ಎಲ್ಲರೂ ಸೈಕಲ… ಹತ್ತಿ ಹೊರಡಲು ಸಿದ್ಧರಾದರೂ ಗೆಳತಿ ಸೀಮಾಳ ಪತ್ತೆ ಇಲ್ಲ. ಚಡಪಡಿಸಿ ಹೋಗಿ ನೋಡಿದರೆ ಒಂದು ಚಪ್ಪಲಿ ಮೆಟ್ಟಿ ನಿಂತು, ಇನ್ನೊಂದು ಚಪ್ಪಲಿ ಹುಡುಕುತ್ತಾ ನಿಂತಿದ್ದಳು.

ಬೆಳ್ಳಂಬೆಳಗ್ಗೆ ತನ್ನ ಚಪ್ಪಲಿ ಕಳುವಾಗಿದೆ ಎಂಬ ಗಲಾಟೆ ಅವಳದ್ದು. ಅಷ್ಟು ಬೆಳಿಗ್ಗೆ ಯಾವ ಕಳ್ಳ ಬಂದು ಒಂದೇ ಚಪ್ಪಲಿ ಒಯ್ಯಲು ಸಾಧ್ಯ ಅಂತ ನಮ್ಮ ವಾದ. ಏನೂ ತೋಚದೇ ಮತ್ತೆ ನಿ¨ªೆ ಮಾಡಲು ತಯಾರಾಗಿದ್ದ ಲೆಕ್ಚರರ್‌ ಅನ್ನು ಎಬ್ಬಿಸಿ¨ªಾಯ್ತು. ಅವರೂ ಅಲ್ಲಿ ಇಲ್ಲಿ ಎÇÉಾ ಕಡೆ ಹುಡುಕಿದರು. ಎಲ್ಲೂ ಸೀಮಾ ಹಾಕಿದ್ದಂಥ ಕೆಂಪು ಚಪ್ಪಲಿ ಇಲ್ಲ. ನಮ್ಮ ಕಾಲೇಜಿನ ಹುಡುಗರ ಕಿತಾಪತಿಯೇನೋ ಎಂಬ ಸಂಶಯ ಒಳಗೊಳಗೇ! ಆದರೆ ಎಷ್ಟೇ ತುಂಟರಾದರೂ ಈ ಗಡಿಬಿಡಿಯಲ್ಲಿ ಒಂದು ಚಪ್ಪಲಿಯನ್ನು ಹೊತ್ತೂಯ್ಯುವ ಪುರುಸೊತ್ತು- ಕೆಟ್ಟ ಬುದ್ಧಿ ಅವರಿಗೆ ಇಲ್ಲ ಅಂತ ನಮಗೆ ನಾವೇ
ಸಮಾಧಾನ ಹೇಳಿಕೊಂಡೆವು. ತುಂಬಾ ತಲೆ ಓಡಿಸಿ ನಮ್ಮ ಲೆಕ್ಚರರ್‌, ಕೆಲವು ಬಾರಿ ನಾಯಿ ಆಟವಾಡಲು ಚಪ್ಪಲಿ ಒಯ್ಯುತ್ತದೆ. ಅದರಲ್ಲೂ ಕಣ್ಸೆಳೆಯುವ ಬಣ್ಣದ ಚಪ್ಪಲಿಗಳನ್ನಂತೂ ಅದು ಬಿಡುವುದೇ ಇಲ್ಲ, ಅನ್ನೋ ಒಂದು ಸಾಧ್ಯತೆಯನ್ನು ಮುಂದಿಟ್ಟರು. ಒಂದು ವಿಚಾರ ನಮ್ಮ ತಲೆ ಕೊರೆಯುತ್ತಿತ್ತು. ಆ ಬೀದಿಯಲ್ಲಿ ಮನೆಗಳೇ ಇರಲಿಲ್ಲ. ಇನ್ನು ನಾಯಿ ಇರುವುದು ಅನುಮಾನವೇ. ಇದ್ದದ್ದು ಹಂದಿಗಳ ದೊಡ್ಡ ಸಂಸಾರ ಮಾತ್ರ. ಅದರಲ್ಲೂ ನಾವೆÇÉಾ
ಚಪ್ಪಲಿ ಹುಡುಕುತ್ತಿದ್ದಾಗ ದೊಡ್ಡ ಹಂದಿಯೊಂದು ಚರಂಡಿಯಿಂದ ಆಗಾಗ್ಗೆ ನಮ್ಮನ್ನೇ ಗಮನಿಸುತ್ತಿತ್ತು.

ನನಗೋ ನಾಯಿಯಂತೆ ಹಂದಿಯೂ ತನ್ನ ಅಥವಾ ಮಕ್ಕಳ ಆಟಕ್ಕೆ ಇವಳ ಕೆಂಪು ಚಪ್ಪಲಿ ಒಯ್ದಿರಬಹುದು ಎಂಬ ಸಂಶಯ. ಅಂತೂ ಎಲ್ಲರೂ ಕಂಡಕಂಡಲ್ಲಿ ಹುಡುಕಾಟ ನಡೆಸಿದೆವು.
ಅಷ್ಟರಲ್ಲಿ ಅÇÉೇ ಬಾಗಿಲ ಮೂಲೆಯಲ್ಲಿ ಒಂದು ಬಿಳಿ ಬಣ್ಣದ ಚಪ್ಪಲಿ ಕಂಡಿತು. ಅದನ್ನು ಕಂಡಿದ್ದೇ ಸೀಮಾ “ಅರೆ,
ಇದು ನಮ್ಮಮ್ಮನ ಚಪ್ಪಲಿ!’ ಎಂದು ಕೂಗಿದಳು. ಮಗಳ ಚಪ್ಪಲಿ ಹುಡುಕುವಾಗ ಅಮ್ಮನ ಒಂದು ಚಪ್ಪಲಿ ಅಲ್ಲಿ
ಬಂದಿ¨ªಾದರೂ ಹೇಗೆ? ಆ ರಹಸ್ಯವನ್ನು ನಾವೆÇÉಾ ಕೂಡಿ ಕಂಡು ಹಿಡಿದೆವು. ಬೆಳಗ್ಗೆ ಮನೆ ಬಿಡುವ ಆತುರದಲ್ಲಿ
ಸೀಮಾ ಒಂದು ಕಾಲಿಗೆ ತನ್ನದು, ಮತ್ತೂಂದು ಕಾಲಿಗೆ ಅಮ್ಮನ ಬಿಳಿ ಚಪ್ಪಲಿಯನ್ನು ಮೆಟ್ಟಿಕೊಂಡು ಬಂದಿದ್ದಳು.
ಆಗ ಅದನ್ನು ಯಾರೂ ಗಮನಿಸಿರಲಿಲ್ಲ. ನಂತರ ಟ್ಯೂಷನ್‌ ಮುಗಿದು ಬೆಳಕು ಹರಿದಾಗ ಸೀಮಾ ತನ್ನ ಇನ್ನೊಂದು
ಕೆಂಪು ಚಪ್ಪಲಿಗಾಗಿ ಹುಡುಕಿದ್ದಳು. ಆದರೆ ಅದನ್ನು ಮನೆಯಲ್ಲಿ ಬಿಟ್ಟಿದ್ದಳಲ್ಲ! ಇಲ್ಲಿದ್ದಿದ್ದು ಅಮ್ಮನ ಬಿಳಿ ಚಪ್ಪಲಿ.
ತನ್ನ ನಿ¨ªೆ ಹಾಳು ಮಾಡಿ ಈ ರೀತಿ ಚಪ್ಪಲಿ ಹುಡುಕಿಸಿದ ಬಗ್ಗೆ ಲೆಕ್ಚರರ್‌ಗೆ ಸಿಟ್ಟಿತ್ತು ಅಂತ ಕಾಣುತ್ತೆ. ಆ ಹೊತ್ತಿನಲ್ಲೂ
ಅವಸರ, ಶಿಸ್ತು, ತಾಳ್ಮೆ ಅಂತ ಭಾಷಣ ಬಿಗಿದು ಸಿಟ್ಟು ತೀರಿಸಿಕೊಂಡರು. ನಾವೂ ಬೇರೆ ಗತಿಯಿಲ್ಲದೆ ಸುಮ್ಮನೇ
ಕೇಳಿಸಿಕೊಂಡು, ಲೆಕ್ಚರರ್‌ ಮನೆಯೊಳಗೆ ಹೋದ ಮೇಲೆ ಕೆಂಪು- ಬಿಳಿ ಚಪ್ಪಲಿ ಹಾಕಿಕೊಂಡು ಪೆಚ್ಚಾಗಿ ನಿಂತಿದ್ದ
ಸೀಮಾಳ ಕಂಡು ಜೋರಾಗಿ ನಕ್ಕೆವು. ಅವಳೂ ನಕ್ಕಳು!

Advertisement

– ಡಾ. ಕೆ.ಎಸ್‌. ಚೈತ್ರಾ

Advertisement

Udayavani is now on Telegram. Click here to join our channel and stay updated with the latest news.

Next