Advertisement

ಒಮ್ಮೆ ಪಕ್ಷಕ್ಕೆ ಬಂದ ಮೇಲೆ ಎಲ್ಲರೂ ಮೂಲ ಬಿಜೆಪಿಯವರು: ಜಿ.ಎಂ. ಸಿದ್ದೇಶ್ವರ್

02:59 PM Aug 28, 2020 | Mithun PG |

ದಾವಣಗೆರೆ: ಮುಖ್ಯಮಂತ್ರಿ ಯಡಿಯೂರಪ್ಪ ಭ್ರಷ್ಟಾಚಾರರಹಿತ ಆಡಳಿತ ನಡೆಸುತ್ತಿದ್ದಾರೆ. ಮುಂದಿನ ಮೂರು ವರ್ಷ ಅವರೇ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ವಿಜಯೇಂದ್ರ ವಿರುದ್ದದ ಆರೋಪದ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ಪಕ್ಷದ ಶಾಸಕರು ಸಹ ವಿಜಯೇಂದ್ರ ಅವರ ಕುರಿತು ಪತ್ರ ಬರೆದಿಲ್ಲ. ವಿರೋಧ ಪಕ್ಷದವರು ಮಾತನಾಡಬೇಕು ಮಾತನಾಡಿದ್ದಾರೆ. ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದರು.

ನಮ್ಮಲ್ಲಿ ಮೂಲ ವಲಸೆ ಬಂದವರು ಎಂಬುದೇ ಇಲ್ಲ. ಒಮ್ಮೆ ಪಕ್ಷಕ್ಕೆ ಬಂದ ಮೇಲೆ ಎಲ್ಲರೂ ಮೂಲ ಬಿಜೆಪಿಯವರು. ಎಚ್. ವಿಶ್ವನಾಥ್ ಪಕ್ಷದ ಸಿದ್ದಾಂತ ತಿಳಿದಿದೆ. ಮಾಧ್ಯಮದವರು ಏನೇನೋ ಕೇಳಿದಾಗ ಏನೋ ಹೇಳಿರಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲ ನಮ್ಮ ಜಿಲ್ಲೆಯವರೇ ಮುಖ್ಯಮಂತ್ರಿ ಆದರೆ ಬೇಡ ಅನ್ನಲಿಕ್ಕಾಗುವುದಿಲ್ಲ. ಹಾಗೆ ನಮ್ಮ ಜಿಲ್ಲೆಯವರೇ ಉಸ್ತುವಾರಿ ಆದರೆ ಬೇಡ ಎನ್ನುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಕುರಿತಂತೆ ರೇಣುಕಾಚಾರ್ಯ ನಿವಾಸದಲ್ಲಿ ನಡೆದ ಸಭೆಯ ಬಗ್ಗೆ ನನಗೆ ಗೊತ್ತೇ ಇಲ್ಲ. ಸಭೆಗೆ ನನಗೆ ಕರೆದೂ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next