Advertisement

ನಮ್ಮ ನಡೆ ಪಿಲಿಚಾಮುಂಡಿಕಲ್ಲು ಕಡೆ:  ಬೃಹತ್‌ ಪಾದಯಾತ್ರೆ

01:28 PM Jan 10, 2018 | Team Udayavani |

ಬೆಳ್ತಂಗಡಿ: ಗುರುವಾಯನಕೆರೆ ಸಮೀಪದ ಪಿಲಿಚಾಮುಂಡಿಕಲ್ಲು ಧಾರ್ಮಿಕ ಪ್ರದೇಶವನ್ನು ಅಪವಿತ್ರಗೊಳಿಸಿ ಬೇಲಿ ತೆಗೆಸಿದವರ ವಿರುದ್ಧ ಕ್ರಮ ಜರಗಿಸಬೇಕು. ಹಿಂದೂ ಧಾರ್ಮಿಕ ಕೇಂದ್ರಗಳಿಗೆ ರಕ್ಷಣೆ ಒದಗಿಸಬೇಕು. ಸರಕಾರ ಹಿಂದೂ ವಿರೋಧಿ ನೀತಿಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಪಿಲಿಚಾಮುಂಡಿಕಲ್ಲು ಸಂರಕ್ಷಣ ಸಮಿತಿ, ವಿಹಿಂಪ, ಬಜರಂಗ ದಳ ವತಿಯಿಂದ ಮಂಗಳವಾರ ಬೆಳ್ತಂಗಡಿಯಿಂದ ಗುರುವಾಯನಕೆರೆ ಪಿಲಿಚಾಮುಂಡಿಕಲ್ಲುವರೆಗೆ ಪಾದಯಾತ್ರೆ ನಡೆಯಿತು.

Advertisement

ಭಗವಾಧ್ವಜ ಹಸ್ತಾಂತರಿಸಿ ಪಾದಯಾತ್ರೆಗೆ ಚಾಲನೆ
ಹಿರಿಯ ನ್ಯಾಯವಾದಿ ಪ್ರತಾಪಸಿಂಹ ನಾಯಕ್‌ ಅವರು ಡಿಸಿಸಿ ಬ್ಯಾಂಕ್‌ ಬಳಿ ಮಮತಾ ಎಂ. ಶೆಟ್ಟಿ ಅವರಿಗೆ ಭಗವಾಧ್ವಜ ಹಸ್ತಾಂತರಿಸಿ ಪಾದಯಾತ್ರೆಗೆ ಚಾಲನೆ ನೀಡಿದರು.

ಇಲ್ಲಿನ ತಾ| ಕಚೇರಿ ಬಳಿ ಧಾರ್ಮಿಕ ಜಾಗೃತಿಗಾಗಿ ಜ. 1ರಿಂದ 8ರ ವರೆಗೆ ಪ್ರತಿದಿನ ಧರಣಿ ಸತ್ಯಾಗ್ರಹ ನಡೆದು ಮಂಗಳವಾರ ಪಾದಯಾತ್ರೆ ನಡೆಸಲಾಯಿತು. ಸಮಿತಿಯ ಕೋಶಾಧಿಕಾರಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್‌ ಪೂಂಜಾ, ಬಜರಂಗ ದಳ ಜಿಲ್ಲಾ ಸಂಚಾಲಕ, ರಕ್ಷಣ ಸಮಿತಿ ಸಂಚಾಲಕ ಭಾಸ್ಕರ ಧರ್ಮಸ್ಥಳ, ಪಾಡ್ಯಾರು ಬೀಡುವಿನ ಪ್ರವೀಣ್‌ ಕುಮಾರ್‌, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಬಿಜೆಪಿ ಅಧ್ಯಕ್ಷ ರಂಜನ್‌ ಜಿ. ಗೌಡ, ಪ್ರಧಾನ ಕಾರ್ಯದರ್ಶಿ ಸೀತಾರಾಮ ನಾಯ್ಕ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ತಾಲೂಕು ಯುವಮೋರ್ಚಾ ಅಧ್ಯಕ್ಷ ಸಂಪತ್‌ ಬಿ.
ಸುವರ್ಣ, ಸಮಿತಿಯ ಅಧ್ಯಕ್ಷ, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ತಿಮ್ಮಪ್ಪ ಗೌಡ ಬೆಳಾಲು, ವಿಹಿಂಪ ನಗರ ಅಧ್ಯಕ್ಷ ಮೋಹನ್‌, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ಸದಸ್ಯೆ ಮಮತಾ ಎಂ. ಶೆಟ್ಟಿ, ತಾ.ಪಂ. ಸದಸ್ಯರಾದ ಸುಧೀರ್‌ ಆರ್‌. ಸುವರ್ಣ, ಅಮಿತಾ, ಧನಲಕ್ಷ್ಮೀ, ಕೊರಗಪ್ಪ ಗೌಡ, ಕೃಷ್ಣಯ್ಯ ಆಚಾರ್ಯ, ಲೀಲಾವತಿ, ಶಶಿಧರ ಕಲ್ಮಂಜ, ಸುಧಾಕರ್‌ ಬಿ.ಎಲ್‌., ಸುಶೀಲಾ, ವಸಂತಿ ಲಕ್ಷ್ಮಣ್‌, ವೇದಾವತಿ, ವಿಜಯ ಗೌಡ, ಬಜರಂಗ ದಳದ ರಾಮ್‌ಪ್ರಸಾದ್‌ ಮರೋಡಿ, ಬಿಜೆಪಿ ಮುಖಂಡರಾದ ವಸಂತ ಮಜಲು, ಹರೀಶ್‌ ಸಾಲಿಯಾನ್‌, ಜಯಂತ್‌ ಕೋಟ್ಯಾನ್‌, ಸದಾನಂದ ಪೂಜಾರಿ ಉಂಗಿಲಬೈಲು, ಉದಯ ಹೆಗ್ಡೆ ನಾರಾವಿ, ಕುವೆಟ್ಟು ಪಂ. ಅಧ್ಯಕ್ಷ ಅಶೋಕ್‌ ಕೋಟ್ಯಾನ್‌, ರಾಜ್‌ಪ್ರಕಾಶ್‌, ಅಗರ್ತ ಸುಬ್ರಹ್ಮಣ್ಯ ಕುಮಾರ್‌, ನಾರಾಯಣ ಗೌಡ, ಸುಕೇಶ್‌ ಜೈನ್‌, ಧರ್ಮ ಜಾಗರಣ ಪ್ರಮುಖ್‌ ದಿನಕರ ಆದೇಲು, ದೊಂಪದ ಬಲಿ ಉತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ, ಪಾಡ್ಯಾರುಗುತ್ತಿನ ಪ್ರವೀಣ್‌ ಕುಮಾರ್‌, ಶ್ಯಾಮ್‌ ಸುಂದರ್‌ ನಡ, ಬಾಲಕೃಷ್ಣ ಶೆಟ್ಟಿ ಸವಣಾಲು, ವಾಸುದೇವ ರಾವ್‌ ಕಕ್ಕಿನೇಜಿ ಮತ್ತಿತರರು ಉಪಸ್ಥಿತರಿದ್ದರು.

ಕಲ್ಲಿಗೆ ಪ್ರಾರ್ಥನೆ
ಪಿಲಿಚಾಮುಂಡಿ ಕಲ್ಲಿನಲ್ಲಿ ಕಲ್ಲಿಗೆ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಪ್ರಾರ್ಥನೆ ಸಲ್ಲಿಸಿದರು. ಚೆಂಡೆ, ನಾಸಿಕ್‌ ಬ್ಯಾಂಡ್‌ ಸಹಿತ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಬಿಗಿ ಪೊಲೀಸ್‌ ಬಂದೋಬಸ್ತ್ ನೆರವೇರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next