Advertisement
ಆದರೆ ಇಂದು ಕೈಯಲ್ಲಿ ತಯಾರಿಸಿದ ಗೆಜ್ಜೆ ಸಿಗುವುದು ಬಲು ಅಪರೂಪ. ಯಾಂತ್ರಿಕ ಜೀವನದಲ್ಲಿ ಇಂದು ಎಲ್ಲವೂ ಯಂತ್ರಗಳನ್ನೇ ಅವಲಂಬಿಸಿದೆ. ಅಂತೆಯೇ ಇಂದು ಯಂತ್ರದಿಂದ ತಯಾರಿಸಿದ ಗೆಜ್ಜೆಯೇ ಎಲ್ಲೆಡೆ ಬಳಸಲ್ಪಡುತ್ತದೆ. ಕೈಗಳಿಂದ ತಯಾರಿಸಿದ ಗೆಜ್ಜೆ ವಿರಳ ಮಾತ್ರವಲ್ಲದೆ ದುಬಾರಿ ಕೂಡ..Related Articles
Advertisement
ಜೇನುಮೇಣದ ಲೇಪನದ ಮೂಲಕ ಗೆಜ್ಜೆಗೆ ಬೇಕಾದ ಆಕಾರ ತಂದು ಒಂದೊಂದಾಗಿ ಮಣ್ಣಿನ ತಗಡಿನಲ್ಲಿಟ್ಟು ಮಣ್ಣಿನಿಂದಲೇ ಮುಚ್ಚಲಾಗುತ್ತದೆ. ಬೆಂಕಿಯ ಕೆನ್ನಾಲಗೆಯನ್ನು ಸೃಷ್ಟಿಸಿ ಜೇನುಮೇಣವನ್ನು ಒಳಗಿನಿಂದಲೇ ಕರಗುವಂತೆ ಮಾಡಲಾಗುತ್ತದೆ. ಅದೇ ಸಂದರ್ಭದಲ್ಲಿ ಬೆಳ್ಳಿ ಕಂಚನ್ನು ಬೆಂಕಿಯಲ್ಲಿ ಕರಗಿಸಿ ಎರಕ ಹೊಯ್ಯಲಾಗುತ್ತದೆ. ಎರಕ ಹೊಯ್ದ ಕಂಚಿನ ರಸವನ್ನು ಕೆಲವು ಗಂಟೆಗಳ ಕಾಲ ಹಾಗೆಯೇ ಬಿಟ್ಟು ಮಣ್ಣನ್ನು ತೆಗೆದಾಗ ರೂಪಕ ತಯಾರಾಗುತ್ತದೆ. ಅನಂತರ ಕೆಲವು ಕುಸುರಿ ಕೆಲಸಗಳು ನಡೆದು ಪೂರ್ಣ ಪ್ರಮಾಣದ ಗೆಜ್ಜೆ ರೂಪುಗೊಳ್ಳುತ್ತದೆ. ಪಾರಂಪರಿಕ ಜ್ಞಾನದಿಂದ ಮಾತ್ರ ಇದು ಸಾಧ್ಯ.
ಪ್ರಾತ್ಯಕ್ಷಿಕೆಯಲ್ಲಿ ಡಾ| ಶಿವರಾಮ ಕಾರಂತ ಥೀಂ ಪಾರ್ಕಿನ ಮಾಲಿನಿ ಮಲ್ಯ, ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್‌ನ ಪ್ರೊ| ಮುರಳೀಧರ ಉಪಾಧ್ಯ, ನೃತ್ಯ ನಿಕೇತನ ಕೊಡವೂರು ಸಂಸ್ಥೆಯ ಗುರು ಸುಧೀರ್ ರಾವ್ ಮತ್ತು ಮಾನಸೀ ಸುಧೀರ್ ಉಪಸ್ಥಿತರಿದ್ದರು.
ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ಆರಂಭಗೊಂಡ `ರಜತಪಥ ಸರಣಿ’ಯಲ್ಲಿ ಭರತನಾಟ್ಯ, ಕೂಚುಪುಡಿ, ಒಡಿಸ್ಸಿ, ಕಥಕ್, ಬ್ಯಾಲೆ, ಸಂಗೀತ, ನೃತ್ಯನಾಟಕ, ಪ್ರಾತ್ಯಕ್ಷಿಕೆ, ದಶ ದಿನಗಳ ನಾಟ್ಯಶಾಸ್ತ್ರ ಪ್ರವಚನ, ನೃತ್ಯವಾತ್ಸಲ್ಯ, ಚಿತ್ರಾ ನೃತ್ಯ ನಾಟಕ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವರ್ಷದ ಕೊನೆಗೆ ಸರಣಿ ಮುಕ್ತಾಯಗೊಳ್ಳಲಿದೆ.
ಎನ್. ರಾಮ ಭಟ್