Advertisement

ಎರಡನೇ ದಿನ ಲಾಲ್‌ಬಾಗ್‌ಗೆ ಬಂದಿದ್ದವರ ಸಂಖ್ಯೆ 20,000

11:48 AM Aug 06, 2017 | |

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರೊéàತ್ಸವ ಫ‌ಲಪುಷ್ಪ ಪ್ರದರ್ಶನದಡಿ ಪುಷ್ಪಗಳಿಂದಲೇ ಅನಾವರಣಗೊಂಡಿರುವ ರಾಷ್ಟ್ರಕವಿ ಕುವೆಂಪು ನಿವಾಸದ ಪ್ರತಿಕೃತಿ ವೀಕ್ಷಣೆಗೆ ಶನಿವಾರ 20,000ಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ವೀಕ್ಷಕರು ಟಿಕೆಟ್‌ ಖರೀದಿಗೆ ಕ್ರೆಡಿಟ್‌/ ಡೆಬಿಟ್‌ ಕಾರ್ಡ್‌ ಬಳಸಲು ಅನುಕೂಲಕ್ಕಾಗಿ ಉದ್ಯಾನದ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ರಜಾದಿನವಾದ ಭಾನುವಾರ ಸ್ವೆ„ಪಿಂಗ್‌ ಯಂತ್ರ ಅಳವಡಿಕೆಗೆ ಇಲಾಖೆ ಮುಂದಾಗಿದೆ.

Advertisement

ಹಿಂದೆಲ್ಲಾ ಲಾಲ್‌ಬಾಗ್‌ ಮುಖ್ಯದ್ವಾರ ಹಾಗೂ ಕೆ.ಎಚ್‌.ರಸ್ತೆ ಪ್ರವೇಶ ದ್ವಾರದಿಂದಲೇ ಹೆಚ್ಚು ಮಂದಿ ವೀಕ್ಷಕರು ಭೇಟಿ ನೀಡುತ್ತಿದ್ದರು. ಈ ಬಾರಿ ಲಾಲ್‌ಬಾಗ್‌ ಪಶ್ಚಿಮ ದ್ವಾರಕ್ಕೆ ಮೆಟ್ರೋ ಸಂಪರ್ಕವಿರುವುದರಿಂದ ಈ ದ್ವಾರದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸುತ್ತಿದ್ದಾರೆ. ಹಾಗಾಗಿ ಹಿಂದೆಲ್ಲಾ 2- 3 ಟಿಕೆಟ್‌ ಕೌಂಟರ್‌ಗಳಿರುತ್ತಿದ್ದ ಪಶ್ಚಿಮ ದ್ವಾರದಲ್ಲಿ ಈಗ ಐದು ಕೌಂಟರ್‌ ತೆರೆಯಲಾಗಿದೆ.

ಬೈಕ್‌ ಆ್ಯಂಬುಲೆನ್ಸ್‌ ಬಳಕೆ
ಪ್ರದರ್ಶನದ ವೇಳೆ ಯಾವುದೇ ಅವಘಡ ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಇಲಾಖೆ ಇದೇ ಪ್ರಥಮ ಬಾರಿಗೆ 108 ಆ್ಯಂಬುಲೆನ್ಸ್‌ ಜತೆಗೆ ಐದು ಬೈಕ್‌ ಆ್ಯಂಬುಲೆನ್ಸ್‌ ಸೇವೆ ಬಳಸಿಕೊಂಡಿದೆ. ಈ ಬೈಕ್‌ ಆ್ಯಂಬುಲೆನ್ಸ್‌ಗಳು ಉದ್ಯಾನದಾದ್ಯಂತ ಸಂಚರಿಸುತ್ತಾ ಅಗತ್ಯಬಿದ್ದವರಿಗೆ ಶುಶ್ರೂಷೆ ನೀಡಲಿದೆ. ಶನಿವಾರ ಉದ್ಯಾನದಲ್ಲಿ ಸುತ್ತಾಡಿ ಅಸ್ವಸ್ಥಗೊಂಡಿದ್ದ 8 ವರ್ಷದ ಮಗುವಿಗೆ ಬೈಕ್‌ ಆ್ಯಂಬುಲೆನ್ಸ್‌ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿದರು. ಸಂಜೆ ವೇಳೆಯಲ್ಲೂ ನಿತ್ರಾಣಗೊಂಡಿದ್ದ ವಯಸ್ಕರೊಬ್ಬರಿಗೆ ಸಿಬ್ಬಂದಿ ಶುಶ್ರೂಷೆ ನೀಡಿದರು. ಈ ಸೇವೆಯ ಬಗ್ಗೆ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಸ್ವೆ„ಪಿಂಗ್‌ ಯಂತ್ರ ಅಳವಡಿಕೆ
ಲಾಲ್‌ಬಾಗ್‌ನ ಮುಖ್ಯದ್ವಾರದಲ್ಲಿ 8 ಟಿಕೆಟ್‌ ಕೌಂಟರ್‌ಗಳು, ಕೆ.ಎಚ್‌.ರಸ್ತೆಯ ಪ್ರವೇಶ ದ್ವಾರದಲ್ಲಿ 8, ಸಿದ್ದಾಪುರ ದ್ವಾರದಲ್ಲಿ 3 ಹಾಗೂ ಪಶ್ಚಿಮ ದ್ವಾರದಲ್ಲಿ 5 ಕೌಂಟರ್‌ಗಳಿವೆ. ಫ‌ಲಪುಷ್ಪ ಪ್ರದರ್ಶನ ವೀಕ್ಷಣೆಗೆ ಬರುವವರ ಅನುಕೂಲಕ್ಕಾಗಿ ಉದ್ಯಾನದ ನಾಲ್ಕೂ ಪ್ರವೇಶ ದ್ವಾರದಲ್ಲಿ ಭಾನುವಾರ ತಲಾ ಒಂದೊಂದು ಸ್ವೆ„ಪಿಂಗ್‌ ಟಿಕೆಟ್‌ ಕೌಂಟರ್‌ ಅಳವಡಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಆರ್‌.ಚಂದ್ರಶೇಖರ್‌ ತಿಳಿಸಿದರು.

ಶನಿವಾರ ಉದ್ಯಾನಕ್ಕೆ 20,000ಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದು, ಇದರಲ್ಲಿ 17,000 ಮಂದಿ ಟಿಕೆಟ್‌ ಪಡೆದು ವೀಕ್ಷಿಸಿದ್ದಾರೆ. ಒಟ್ಟಾರೆ 9.04 ಲಕ್ಷ ರೂ.ಗಿಂತ ಹೆಚ್ಚು ಹಣ ಸಂಗ್ರಹವಾಗಿದೆ. ಭಾನುವಾರ ವಯಸ್ಕರಿಗೆ 60 ರೂ., ಮಕ್ಕಳಿಗೆ 20 ರೂ. ಟಿಕೆಟ್‌ ದರವಿದೆ. ಶನಿವಾರ, ಭಾನುವಾರ ಹೆಚ್ಚು ಜನಸಂದಣಿಯಿರುವುದರಿಂದ ಶಾಲಾ ಮಕ್ಕಳಿಗೆ ಈ ದಿನಗಳಲ್ಲಿ ಉಚಿತ ಪ್ರವೇಶವಿರುವುದಿಲ್ಲ.

Advertisement

ಎರಡು ಬಾರಿ ಹೂಗಳ ಬದಲಾವಣೆ
ಕುವೆಂಪು ಅವರ ಮನೆಯ ಪ್ರತಿಕೃತಿಗೆ 3.50 ಲಕ್ಷ ಗುಲಾಬಿ ಹಾಗೂ ಇತರೆ ಹೂಗಳನ್ನು ಬಳಸಲಾಗಿದೆ. ಹೂಗಳು ಬಾಡದೆ ಸದಾ ನಳನಳಿಸುವಂತೆ ಮಾಡಲು ಹಿಮಸಿಂಚನ ವ್ಯವಸ್ಥೆ ಕಲ್ಪಿಸಿದ್ದರೂ ನಾಲ್ಕೈದು ದಿನದ ನಂತರ ಹೂವುಗಳು ಕಳಾಹೀನವಾಗುವುದರಿಂದ ಆ.7 ಮತ್ತು 8ರಂದು ಎಲ್ಲ ಹೂಗಳನ್ನು ತೆಗೆದು ಹೊಸ ಹೂವುಗಳನ್ನು ಜೋಡಿಸಲಾಗುವುದು. ಆ.11 ಮತ್ತು 12ರಂದು ಮತ್ತೂಂದು ಬಾರಿ ಹೂಗಳನ್ನು ಬದಲಾಯಿಸಿ ಆಕರ್ಷಣೆ ಹೆಚ್ಚಿಸಲಾಗುವುದು.
-ಎಂ.ಆರ್‌.ಚಂದ್ರಶೇಖರ್‌, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

ಲಾಲ್‌ಬಾಗ್‌ನಲ್ಲಿ ಇಂದು
ಸಂಜೆ 4 ಗಂಟೆಗೆ “ಶ್ರೀ ರಾಮಾಯಣ ದರ್ಶನಂನಲ್ಲಿ ರಾವಣ ಪಾತ್ರ ಚಿತ್ರಣದ ವೈಶಿಷ್ಟéತೆ’ ಕುರಿತು ಡಾ.ಎಲ್‌.ಜಿ.ಮೀರಾ ಅವರಿಂದ ಉಪನ್ಯಾಸ. ಬಳಿಕ ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್‌ ವತಿಯಿಂದ “ಶೂದ್ರ ತಪಸ್ವಿ’ ನಾಟಕ ಪ್ರದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next