Advertisement

ಸಾವಿರ ದೇಗುಲಗಳ ದ್ವೀಪದಲ್ಲಿ…

03:45 AM May 28, 2017 | Harsha Rao |

ಇಂಡೋನೇಷ್ಯಾದ ಪ್ರಸಿದ್ಧ ಪ್ರವಾಸೀ ತಾಣ ಬಾಲಿಗೆ ಹೊರಟಾಗ  ಬಿಸಿಲು ಹೇಗಿದೆಯೋ?ಸಸ್ಯಾಹಾರಿಗಳಿಗೆ ಊಟ ಸಿಗಬಹುದೇ? ಬೀಚ್‌ ಬಿಟ್ಟರೆ ಮತ್ತೇನಿದೆ ?’ ಹೀಗೆ ನಾನಾ ರೀತಿಯ ಅನುಮಾನಗಳು ಕಾಡಿದ್ದವು.ಆದರೂ ಚಿತ್ರದಲ್ಲಿ ಕಂಡ ದಟ್ಟ ಕಾಡುಗಳು,ಅಗ್ನಿಪರ್ವತ,ಬೆಟ್ಟ ಗುಡ್ಡಗಳು ಕೈ ಬೀಸಿ ಕರೆದರೆ  ಹಿಂದೂ ಸಂಸ್ಕೃತಿಯ ನೆಲೆವೀಡು ಎಂದು ಹೆಸರಾಗಿ ಅದ್ಭುತ ದೇವಾಲಯಗಳನ್ನು ಹೊಂದಿದ ಈ ಪುಟ್ಟ ದ್ವೀಪ ಕುತೂಹಲ ಕೆರಳಿ ಸಿತ್ತು.ನೇರವಾದ ಸಂಪರ್ಕ ಇಲ್ಲವಾದ್ದರಿಂದ ಮಲೇಷ್ಯಾ ಮೂಲಕ ಪಯಣಿಸಿ ಬಾಲಿಯಲ್ಲಿ ಕೆಳಗಿಳಿದದ್ದೇ ಕಂಡದ್ದು ಗರುಡ ಏರ್‌ ಲೈನ್ಸ್‌ ಎಂಬ ಹೆಸರು ಹೊತ್ತ ವಿಮಾನಗಳು. ಅರೆ ನಮ್ಮ ಗರುಡ ಇಲ್ಲಿಗೂ ಹಾರಿ ಬಂದ ಎಂದು ಅಚ್ಚರಿ ಪಡುತ್ತಲೇ ಹೊರಗೆ ಬಂದರೆ ಎÇÉೆಲ್ಲೂ ದೇಗುಲಗಳು; ಪ್ರತೀ ಬೀದಿಗಲ್ಲ,ಪ್ರತೀ ಮನೆಗೆ ! ದಾರಿಯುದ್ದಕ್ಕೂಎತ್ತೆತ್ತರದ ಕೃಷ್ಣ, ರಾಮ, ಬರುಣ, ಗರುಡ, ಅರ್ಜುನ, ಭೀಮರ ,ಹನುಮನ ಮೂರ್ತಿಗಳು! ನಮ್ಮ ರಾಮಾಯಣ ಮಹಾಭಾರತ ಇಲ್ಲಿ ಪವಿತ್ರ ಮತ್ತು ಜನಪ್ರಿಯ. ಹಾದಿಬೀದಿಗಳಲ್ಲಿ ಮೂರ್ತಿಗಳಿದ್ದರೂ  ಇಲ್ಲಿಯ ಜನರಿಗೆ ಮೂರ್ತಿ ಪೂಜೆಯಲ್ಲಿ ನಂಬಿಕೆ ಕಡಿಮೆ. ನಿಸರ್ಗದ ಅಂಶಗಳಾದ ಕಲ್ಲು, ನೀರು, ಅಗ್ನಿ, ಮಣ್ಣು, ಗಾಳಿ ಅವರಿಗೆ ಶಕ್ತಿ ಸಂಕೇತಗಳು. ಹಾಗಾಗಿ, ಪ್ರತೀ ಮನೆಯಲ್ಲೂ ದೇಗುಲವಿದ್ದರೂ ಒಳಗೆ ಯಾವುದೇ ಮೂರ್ತಿಯಿಲ್ಲ: ದೇವರು,ಹಿರಿಯರು ಶಕ್ತಿ ಸ್ವರೂಪಿಗಳಾಗಿ  ಭಕ್ತಿಗೆ ಒಲಿದು ಆಗಮಿಸಿ, ಕುಳಿತು, ಹರಸುತ್ತಾರೆ ಎಂಬ ನಂಬಿಕೆ ಇಲ್ಲಿನ ಜನರದ್ದು. ಹಾಗೆಯೇ ದೇವರ ಹೆಸರನ್ನು ಮನುಷ್ಯರಿಗೆ ಇಡುವಂತಿಲ್ಲ, ಅದು ಅಗೌರವ ಎಂದು ನಂಬುತ್ತಾರೆ.

Advertisement

ಇಂಡೋನೇಷ್ಯಾದ ಹಣ, ರುಪೈಯ್ನಾ. ಅಲ್ಲಿಗೆ ಕಾಲಿಟ್ಟೊಡನೆ ಎಲ್ಲರೂ ಕೋಟ್ಯಾಧೀಶರು, ಏಕೆಂದರೆ ನಮ್ಮ ಒಂದು ರೂಪಾಯಿಗೆ ಅಲ್ಲಿ ಇನ್ನೂರಾಎಂಟು ರುಪೈಯ್ನಾ! ಹಾಗಾಗಿಯೇ ಎಳನೀರಿಗೆ ಮೂವತ್ತು ಸಾವಿರ ರುಪೈಯ್ನಾ! ಅಂತೂ ಲಕ್ಷಗಳಲ್ಲಿ ಖರ್ಚು ಮಾಡುತ್ತ, ರಾಜಧಾನಿ ಡೆನ್‌ಪಸಾರ್‌ನಿಂದ ಪಶ್ಚಿಮಕ್ಕೆ ಇಪ್ಪತ್ತು ಕಿ.ಮೀ. ದೂರಕ್ಕೆ , ತಬಾನನ್‌ ಪ್ರಾಂತ್ಯದ ಬೆರಬನ್‌ ಹಳ್ಳಿಯಲ್ಲಿರುವ ಜಗತ್ಪಸಿದ್ಧ ತನಾಹ್‌ ಲಾಟ್‌ ದೇವಾಲಯಕ್ಕೆ ನಮ್ಮ ಪಯಣ. ಅಲ್ಲಿ ಸೂರ್ಯಾಸ್ತ ನೋಡುವುದು ಅಪೂರ್ವ ಅನುಭವವಾದ್ದರಿಂದ ಮಧ್ಯಾಹ್ನವೇ ಹೊರಟಿ¨ªೆವು. ಬಿಸಿಲು ಜೋರಾಗಿತ್ತು ; ಸ್ವತ್ಛವಾದರೂ ಕಿರಿದಾದ ದಾರಿಯಲ್ಲಿ ವಾಹನಗಳ ಸಾಲು ಉದ್ದವಾಗಿತ್ತು. ತೆಂಗಿನ ಮರಗಳ ಜತೆ ದಾರಿಯುದ್ದಕ್ಕೂ ಬಣ್ಣ ಬಣ್ಣದ ಹೂವು ಅರಳಿಸಿ ನಿಂತ ದೇವಕಣಗಿಲೆ ಮರಗಳು. ಕಾಂಭೋಜ ಹೂವು ಎಂದು ಕರೆಯಲ್ಪಡುವ ಇವು ಅಲಂಕಾರ, ಪೂಜೆ, ಔಷಧಿ ಎಲ್ಲದಕ್ಕೂ ಬಳಕೆಯಾಗುವ ಜನಪ್ರಿಯ ಹೂವು.ಅಂತೂ ಒಂದು ತಾಸಿನ ಪಯಣದ ನಂತರ ತನಾಹ್‌ ಲಾಟ್‌ಗೆ ಪ್ರವೇಶ.

ಬಾಲಿ ಭಾಷೆಯಲ್ಲಿ ತನಾಹ್‌ ಎಂದರೆ ದ್ವೀಪ, ಲಾಟ್‌ ಎಂದರೆ ಸಮುದ್ರ ಹೀಗೆ ಶಬ್ದಾರ್ಥ ಸಮುದ್ರದಲ್ಲಿ ತೇಲುವ ದ್ವೀಪ ಎಂದಾಗುತ್ತದೆ. ಮುನ್ನೂರು ಭಾರತೀಯ ರೂಪಾಯಿ ಪ್ರವೇಶಧನ ಕೊಟ್ಟು ಒಳಹೊಕ್ಕರೆ ಅಲ್ಲಲ್ಲಿ ಚಿಕ್ಕ ಪುಟ್ಟ ದೇವಾಲಯಗಳು. ಹಸಿರು ಉದ್ಯಾನವನದಲ್ಲಿ ನಡೆಯುತ್ತ , ಜಾಜಾ ಕೆಲೆಪೋನ್‌ ಎಂಬ ತುರಿದ ಕೊಬ್ಬರಿಯಲ್ಲಿ ಅದ್ದಿದ್ದ ವಾಲೆ ಬೆಲ್ಲದ ಉಂಡೆಗಳನ್ನು  ನಮ್ಮ ಮೋದಕದಂತೆ ತಿನ್ನುತ್ತ ನಡೆವಾಗ ಕಂಡಿದ್ದು ಮೂರು ಎಕರೆ ವಿಶಾಲವಾದ ಬಂಡೆಕಲ್ಲಿನ ಮೇಲೆ ಐದಂತಸ್ತಿನ ಮುಖ್ಯ ದೇವಾಲಯ. ಇಲ್ಲಿ ಸಮುದ್ರ ದೇವತೆ ಬರುಣನಿಗೆ ಪೂಜೆ !

ಸ್ಥಳೀಯರ ಪ್ರಕಾರ ಯೋಗಿ ದಾಂಗ್‌ ಹ್ಯಾಂಗ್‌ ನಿರರ್ಥ ಈ ದೇವಾಲಯ ನಿರ್ಮಾಣಕ್ಕೆ ಕಾರಣಕರ್ತ. ಜಾವಾದ ಮಜಾಪಾಹಿತ್‌ ಪ್ರಾಂತ್ಯದ  ನಿರರ್ಥ 1489 ರಲ್ಲಿ ಬಾಲಿಗೆ ಹಿಂದೂ ಧರ್ಮದ ಪ್ರಚಾರಕನಾಗಿ ಆಗಮಿಸಿದ್ದ.ದ್ವೀಪವನ್ನು ಸುತ್ತುವಾಗ ಆತನ ಕಣ್ಣಿಗೆ ಬಿದ್ದದ್ದು ಈ ಸುಂದರ ಜಾಗ. ಇಲ್ಲಿಯೇ ಸಮುದ್ರ ದೇವತೆ ಬರುಣನಿಗೆ ಪೂಜೆ ಸಲ್ಲಿಸಿ, ವಿಶ್ರಮಿಸಿದ. ಹತ್ತಿರದ ಹಳ್ಳಿಯ ಗ್ರಾಮಸ್ಥರು ಈತನಿಗೆ ಗೌರವ ಸಲ್ಲಿಸಿ, ಉಪದೇಶ ಪಡೆದರು. ತನ್ನ ಅನುಯಾಯಿಗಳಾದ ಅವರಿಗೆ ಇದೇ ಜಾಗದಲ್ಲಿ ಸಮುದ್ರ ದೇವತೆಗೆ ದೇವಾಲಯ ನಿರ್ಮಿಸಲು ಸಲಹೆ ನೀಡಿದ ನಿರರ್ಥ. ಆದರೆ ಹಳ್ಳಿಯ ಮುಖಂಡನಿಗೆ ಇದು ಇಷ್ಟವಾಗಲಿಲ್ಲ.ಕೂಡಲೇ ತನ್ನ ಬೆಂಬಲಿಗರನ್ನು ಕರೆದು ಯೋಗಿಯನ್ನು ಓಡಿಸುವಂತೆ ಆದೇಶಿಸಿದ. ದೈವಶಕ್ತಿ ಹೊಂದಿದ್ದ ನಿರರ್ಥ , ದೊಡ್ಡ ಕಲ್ಲು ಬಂಡೆಯನ್ನು ಸಮುದ್ರದ ಅಂಚಿಗೆ ಪವಾಡಸದೃಶವಾಗಿ ಜರುಗಿಸಿ,ತನ್ನ ಅಂಗವಸ್ತ್ರವನ್ನು ಸರ್ಪಗಳಾಗಿ ಪರಿವರ್ತಿಸಿ ಅವುಗಳನ್ನು ಬಂಡೆಗಲ್ಲಿನ ತಳದಲ್ಲಿ ರಕ್ಷಣೆಗಾಗಿ ನೇಮಿಸಿದ.ಇದನ್ನು ಕಂಡು ಬೆರಗಾಗಿ ಹಳ್ಳಿಯ ಮುಖ್ಯಸ್ಥ ಕ್ಷಮೆ ಯಾಚಿಸಿ ಆತನಿಗೆ ಶರಣಾದ. ದೊಡ್ಡ ಬಂಡೆಯ ಮೇಲೆ ದೇವಾಲಯ ಕಟ್ಟಲಾಯಿತು. ಮುಖ್ಯಸ್ಥನಿಗೆ ಧರ್ಮಬೋಧನೆ ಮಾಡಿ ಅಲ್ಲಿಂದ ಹೊರಡುವ ಮುನ್ನ ನಿರರ್ಥ ಪವಿತ್ರ ಬಾಕು ಕೊಟ್ಟು ಆಶೀರ್ವದಿಸಿದ. ಈಗಲೂ ಈ ಬಾಕುವನ್ನು ಕೆದಿರಿ ಅರಮನೆಯಲ್ಲಿ ಸಂರಕ್ಷಿಸಿ ಇಡಲಾಗಿದ್ದು ಉತ್ಸವದ ದಿನಗಳಲ್ಲಿ ಮೆರವಣಿಗೆಯಲ್ಲಿ ತಂದು ಪೂಜಿಸಲಾಗುತ್ತದೆ.

ಕಲ್ಲುಬಂಡೆಗಳ ನಡುವೆ ಕೊರೆದ ಹಾದಿಯಿಂದ ಈ ದೇವಾಲಯಕ್ಕೆ ಪ್ರವೇಶ. ಸಮುದ್ರದಲ್ಲಿ ನೀರಿನ ಮಟ್ಟ ಹೆಚ್ಚಿದಾಗ ದಾಟಿ ಹೋಗಲು ಸಾಧ್ಯವಿಲ್ಲ. ಮಟ್ಟ ಕಡಿಮೆ ಇ¨ªಾಗ ಮಂದಿರದ ತಳದಲ್ಲಿರುವ ಸಿಹಿ ನೀರಿನ ಚಿಲುಮೆ “ಬೆಜಿ ಕಾರ್ಲೆ’ ಕಾಣಬಹುದು. ಇದರ ಪವಿತ್ರ ನೀರು ತೀರ್ಥವಾಗಿ ಜನರಿಗೆ ಪ್ರೋಕ್ಷಿಸಲ್ಪಡುತ್ತದೆ. ಹಾಗೆಯೇ ದೇವಾಲಯದ ರಕ್ಷಕ ಎಂದು ಪರಿಗಣಿಸುವ ಜೀವಂತ ಸರ್ಪವನ್ನು ಮುಟ್ಟಿ ಆಶೀರ್ವಾದವನ್ನೂ ಪಡೆಯಬಹುದು. ಆಶ್ಚರ್ಯವೆಂದರೆ ದೇಗುಲದ ಒಳಗೆ ಪ್ರವೇಶಿಸಲು ಪ್ರವಾಸಿಗರಿಗೆ ಅನುಮತಿ ಇಲ್ಲ. ಆದರೂ ಕುತೂಹಲ ಕೆರಳಿ ಒಳಗೆ ಯಾವ ದೇವರ ಮೂರ್ತಿ ಇದೆ ಎಂದದ್ದಕ್ಕೆ ಒಳಗೆ ಯಾವ ಮೂರ್ತಿಯೂ ಇಲ್ಲ. ಏಕೆಂದರೆ, ದೇವರಿರುವುದು ಮೂರ್ತಿಯಲ್ಲಿ ಅಲ್ಲ, ಬರುಣ ಇÇÉೆಲ್ಲ ಇ¨ªಾನೆ’ ಎಂದು ಇಡೀ ಸಮುದ್ರವನ್ನು ತೋರಿಸಿಬಿಟ್ಟ ನಮ್ಮ ಗೈಡ್‌ ವಯಾನ್‌. 

Advertisement

– ಡಾ. ಕೆ. ಎಸ್‌. ಚೈತ್ರಾ

Advertisement

Udayavani is now on Telegram. Click here to join our channel and stay updated with the latest news.

Next