Advertisement
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಜಿ ಪ್ರಭುಗೆ ಕರೆ ಮಾಡಿ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.
Related Articles
Advertisement
ಮುಂದುವರೆದು, ಆ ಪ್ರಭು ನಿನ್ನೆ ಕಾಲ್ ಮಾಡಿದಾಗ ಮೇಡಂ ಅಸ್ಪತ್ರೆ ಬರ್ತಾರೆ ಅಂದ್ರು. ಆಯ್ತಪ್ಪ ಅಂದೆ. ನಾನು ಬಂದಿದಿನಿ, ಯಾವೊಬ್ಬ ಅಧಿಕಾರಿನೂ ಇಲ್ಲ. ನೀವೇ ಹೇಳಿದ್ರಲ್ಲಮ್ಮ ಆಸ್ಪತ್ರೆಗೆ ಬರ್ತಿನಿ ಅಂದ್ರಲ್ಲ. ಆಯ್ತು ಬಾ ಅಮ್ಮ ಅಂದೆ. ನನ್ ಪ್ರಜೆನ್ಸಿಲಿ ಇರಬೇಕೋ ಬೇಡ್ವೋ? ನಾನು ಮಂತ್ರಿ ಅಲ್ವಾ? ಸೆಂಟ್ರಲ್ ಗೌರ್ನಮೆಂಟ್ ಲೆಕ್ಕ ಇಲ್ವಾ? ನಿಮಗೆಷ್ಟು ಭಯ ಇರಬೇಕು? ನನಗೆ ಹರ್ಟ್ ಆಯ್ತಮ್ಮ. ಬರ್ತಿನಿ ಅಂದು ಬರ್ಲಿಲ್ಲ. ಬರಬೇಕಾಗಿದ್ದು ನಿಮ್ ಡ್ಯೂಟಿ ಅಲ್ವಾ? ಜಿಲ್ಲಾಧಿಕಾರಿ ಅಂದ್ರೆ ಸ್ಟೇಟ್ ಅಷ್ಟೇ ಸೀಮಿತನಾ? ಸೆಂಟ್ರಲ್ ಗವರ್ನ್ಮೆಂಟ್ ಏನೇನು ಇಲ್ವಾ? ನನಗೆ ರಿಪೋರ್ಟ್ ಕಳುಹಿಸಿ ಸಂಜೆ ಒಳಗೆ ಎಂದು ಖಾರವಾಗಿಯೇ ಬೈದರು.
ಯಾವನೂ ಇಲ್ಲ, ಜಿಪಂ ಸಿಇಒಗೆ ಹಿಗ್ಗಾಮುಗ್ಗಾ ತರಾಟೆ: ಜಿಲ್ಲಾ ಪಂಚಾಯತ್ ಸಿಇಒಗೆ ಕರೆ ಮಾಡಿದ ವಿ.ಸೋಮಣ್ಣ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ನಾನು ಆಸ್ಪತ್ರೆಗೆ ಬಂದಿದಿನಿ. ಯಾವನೂ ಬಂದಿಲ್ಲ. ಡಿಎಚ್ಒಗೂ ಕುಡಿಯುವ ನೀರಿಗೂ ಏನ್ ಸಂಬಂಧ ಅಪ್ಪಾ? ನೀರು ಕೊಡೋರು ಯಾರಪ್ಪ? ಚಿನ್ನೇನಹಳ್ಳಿಗೆ ನಾನು ಬರ್ತಿನಿ ಅಂತಾ ಹೇಳಿಲ್ಲ. ಇಲ್ಲಿ ಯಾವನೂ ಗತಿ ಇಲ್ಲ. ನನಗೂ ಆದ ಇದಿದೆಯಪ್ಪಾ? ಒಬ್ಬ ಅಧಿಕಾರಿ ಇಲ್ಲ. ನನ್ ಟೂರ್ ಪ್ರೋಗ್ರಾಂ ನಲ್ಲಿ ಚಿನ್ನೇನಹಳ್ಳಿಗೆ ಬರ್ತಿನಿ ಅಂತೇಳಿಲ್ಲ. ಯಾವುದಕ್ಕೋ ಏನು ಯಾರೊ ಬರ್ತಾರಂತಾ ಹೋಗಿಬಿಟ್ಟು ನನಗೆ ಮಕ್ ಮಲ್ ಟೋಪಿ ಹಾಕ್ತಿದ್ದೀರಾ? ನನಗೆ ಹಂಗೆ ಮಾಡೊಕೆ ಆಗಲ್ಲ. ದಯವಿಟ್ಟು ಬೇಡ. ನಾನು ಎಂಪಿಯಾಗಿ ಮಾತಾಡುತ್ತಿದ್ದೇನೆ. ಇಬ್ಬರು ಬಿಟ್ರೆ ಯಾರೂ ಗತಿಯಿಲ್ಲ. ಇದಾಗಬಾರದು. ಇದು ಒಳ್ಳೆಯದಲ್ಲ. ಜನರಿಗೆ ಈ ತರ ಮಾಡಬೇಡಿ. ಬಾರಪ್ಪ ಅಂದೆ. ಇನ್ಯಾರೋ ಬರ್ತಾರಂತ ಹೋಗಿದಿರಾ? ನನಗೆ ಹೇಳಬೇಡಿ. ನೀವು ಕೂಡ ಬ್ಯಾಕ್ ರೌಂಡ್ ನಲ್ಲಿ ಬಂದಿದಿರಾ ಅನ್ನೊದನ್ನ ಅರ್ಥ ಮಾಡಿಕೊಳ್ಳಿ. ಡಿಸಿನೂ ಇಲ್ಲ. ಯಾವನೂ ಇಲ್ದ್ರಿ ಎಂದರು.