Advertisement

ಐದನೇ ದಿನವೂ ಹೊಸಮಠ ಸೇತುವೆ ಮುಳುಗಡೆ

01:15 PM Jul 15, 2018 | |

ಕಡಬ : ಇಲ್ಲಿನ ಹೊಸಮಠ ಸೇತುವೆಯ ಮೇಲೆ ಕಳೆದೈದು ದಿನಗಳಿಂದ ಸತತವಾಗಿ ನೆರೆನೀರು ಹರಿಯುತ್ತಿರುವುದರಿಂದ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಂಗಳವಾರದಿಂದ ಮುಳುಗಡೆಯಾಗಿರುವ ಹೊಸಮಠ ಸೇತುವೆಯ ಮೇಲೆ ಶನಿವಾರ ರಾತ್ರಿಯ ತನಕವೂ ನೆರೆ ನೀರು ಹರಿಯುತ್ತಿತ್ತು. ಸೇತುವೆ ಮುಳುಗಡೆಯಾಗಿರುವ ಕಾರಣದಿಂದಾಗಿ ಹೊಸಮಠ ಸೇತುವೆಯ ಮೂಲಕ ಉಪ್ಪಿನಂಗಡಿ-ಕಡಬ ನಡುವೆ ಸಂಚರಿಸುತ್ತಿದ್ದ ಸರಕಾರಿ ಬಸ್‌ಗಳು ಓಡಾಟ ಸ್ಥಗಿತಗೊಳಿಸಿದ್ದು, ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

Advertisement

ನಿರ್ಮಾಣ ಹಂತದ ಸೇತುವೆಯೇ ಆಸರೆ
ಹಳೆಯ ಸೇತುವೆ ಮುಳುಗಡೆಯಾಗಿರುವುದರಿಂದ ಹೆಚ್ಚಿನ ಜನರು ನಿರ್ಮಾಣ ಹಂತದಲ್ಲಿರುವ ಹೊಸ ಸೇತುವೆಯ ಮೇಲೆ ನಡೆದುಕೊಂಡು ಹೋಗುವ ಮೂಲಕ ಹೊಳೆ ದಾಟುತ್ತಿದ್ದಾರೆ. ಸಂಪರ್ಕ ರಸ್ತೆಯ ಕಾಮಗಾರಿ ಪೂರ್ತಿಯಾಗದೇ ಇರುವುದರಿಂದ ಹೊಸ ಸೇತುವೆಯ ಮೇಲೆ ವಾಹನ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಆದರೂ ಕೆಲ ದ್ವಿಚಕ್ರ ವಾಹನ ಸವಾರರು ಕಷ್ಟಪಟ್ಟು ಹೊಸ ಸೇತುವೆಯ ಮೇಲೆ ತಮ್ಮ ವಾಹನಗಳನ್ನು ದಾಟಿಸುತ್ತಿದ್ದಾರೆ.

ವಿಘ್ನ ಸಂತೋಷ
ನಿರ್ಮಾಣ ಹಂತದಲ್ಲಿರುವ ಹೊಸ ಸೇತುವೆಯ ಮೇಲೆ ವಾಹನಗಳನ್ನು ಹತ್ತಿಸಲು ಕಷ್ಟವಾಗುತ್ತಿದ್ದ ಕಾರಣದಿಂದಾಗಿ ಸ್ಥಳೀಯ ವ್ಯಕ್ತಿಯೊಬ್ಬರು ಹಲಗೆಯೊಂದನ್ನು ಇಟ್ಟು ಮಳೆ, ಕೆಸರು ಎನ್ನದೇ ಜನರಿಗೆ ಬೈಕ್‌ ದಾಟಿಸಲು ಸಹಕರಿಸುತ್ತಿದ್ದರು. ಜನರು ಸಂತೋಷದಿಂದ ಅಲ್ಪ ಮೊತ್ತ ನೀಡುತ್ತಿದ್ದರು. ಆದರೆ ಕೆಲ ವಿಘ್ನ ಸಂತೋಷಿಗಳು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಹೊಸ ಸೇತುವೆಯ ಮೇಲೆ ದ್ವಿಚಕ್ರ ವಾಹನ ಹೋಗಲು ಪೊಲೀಸರ ಎದುರೇ ದುಡ್ಡು ಕೀಳಲಾಗುತ್ತಿದೆ ಎಂದು ಅಪಪ್ರಚಾರ ಮಾಡಿದ್ದರಿಂದ ಆ ಸೇವೆಯೂ ಸ್ಥಗಿತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next