Advertisement

ವಾರದಿಂದ ಅಮೆರಿಕದಲ್ಲಿ ವಲಸಿಗರ ಬಂಧನ ಕಾರ್ಯಾಚರಣೆ

03:45 AM Feb 13, 2017 | |

ವಾಷಿಂಗ್ಟನ್‌: ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಸೂಕ್ತ ದಾಖಲೆಗಳಿಲ್ಲದ ನಿವಾಸಿಗಳನ್ನು ದೇಶದಿಂದ ಹೊರಗಟ್ಟುವ ಬೃಹತ್‌ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಗಿದೆ. 

Advertisement

ಒಂದು ವಾರದಿಂದ ಶಿಕಾಗೋ, ನ್ಯೂಯಾರ್ಕ್‌, ಕ್ಯಾಲಿಫೋರ್ನಿಯಾ, ಆಸ್ಟಿನ್‌, ಲಾಸ್‌ ಏಂಜಲೀಸ್‌ನಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು,  ಪರವಿರೋಧ ಪ್ರತಿಕ್ರಿಯೆಗಳು ಬಂದಿವೆ. ಇನ್ನೊಂದೆಡೆ ಕಾರ್ಯಾಚರಣೆ ನಡೆಸಿರುವ ಐಸಿಇ (ವಲಸೆ ಮತ್ತು ಸುಂಕ ನಿರ್ದೇಶನಾಲಯ) ಇದು ಮಾಮೂಲಿ ಕಾರ್ಯಾಚರಣೆ, ಈ ಬಗ್ಗೆ ಬರುತ್ತಿರುವ ಋಣಾತ್ಮಕ ವರದಿಗಳು ಅಪಾಯಕಾರಿ ಎಂದು ಹೇಳುವ ಮೂಲಕ ಟ್ರಂಪ್‌ರನ್ನು ಸಮರ್ಥಿಸಿಕೊಂಡಿದೆ.

ಟ್ರಂಪ್‌ ಅಧಿಕಾರಕ್ಕೆ ಬಂದ ನಂತರ ಸೂಕ್ತ ದಾಖಲೆಗಳಿಲ್ಲದ ವಲಸಿಗರನ್ನು ಅಮೆರಿಕದಿಂದ ಹೊರಹಾಕುವ ಕಾರ್ಯಾಚರಣೆಗೆ ಸಹಿಹಾಕಿದ್ದರು. ಆರಂಭಿಕ ಹಂತದಲ್ಲಿ ಅಪರಾಧಿಗಳೆಂದು ಘೋಷಿಸಲ್ಪಟ್ಟ ಅಥವಾ ಕ್ರಿಮಿನಲ್‌ ಪ್ರಕರಣದಲ್ಲಿ ಆರೋಪಿಗಳಾಗಿರುವ ಪುರುಷರನ್ನು ಹೊರಹಾಕುವುದಕ್ಕೆ ಆದ್ಯತೆ ಎನ್ನಲಾಗಿತ್ತು. 

ಹಿಂದೆಯೂ ನಡೆದಿತ್ತು: ದಾಖಲೆಗಳಿಲ್ಲದ ವ್ಯಕ್ತಿಗಳನ್ನು ದೇಶದಿಂದ ಹೊರಹಾಕುವ ಪ್ರಕ್ರಿಯೆ ಹಿಂದೆ ಒಬಾಮಾ ಅಧಿಕಾರದಲ್ಲಿದ್ದಾಗಲೂ ನಡೆದಿವೆ. 2015ರಲ್ಲಿ ಭಾರೀ ಕಾರ್ಯಾಚರಣೆ ನಡೆಸಿದ್ದ ಐಸಿಇ ಒಟ್ಟು 2059 ಮಂದಿಯನ್ನು ಬಂಧಿಸಿತ್ತು.

ಅಮೆರಿಕಕ್ಕೆ ಸೆಡ್ಡು?: ಮತ್ತೂಂದು ಬೆಳವಣಿಗೆಯಲ್ಲಿ  ಕೊರಿಯಾ ಕ್ಷಿಪಣಿ ಅತ್ಯಾಧುನಿಕ ಬ್ಯಾಲೆಸ್ಟಿಕ್‌ ಕ್ಷಿಪಣಿ ಪರೀಕ್ಷೆ ನಡೆಸಿದೆ. ಬಾಂಗ್ಯಾನ್‌ ವಾಯುನೆಲೆಯಿಂದ  ಜಪಾನ್‌ ಸಮುದ್ರದೆಡೆಗೆ ಕ್ಷಿಪಣಿ ಪರೀಕ್ಷೆ ನಡೆಸಿದೆ. ಅಮೆರಿಕಕ್ಕೆ ತನ್ನ ಶಕ್ತಿಯನ್ನು ತಿಳಿಸಲು ಉತ್ತರ ಕೊರಿಯಾ ನಡೆಸಿರುವ ಯತ್ನ ಇದೆಂದು ದಕ್ಷಿಣ ಕೊರಿಯಾ ಬಣ್ಣಿಸಿದೆ. ಮತ್ತೂಂದು ಕಡೆ ಅಮೆರಿಕ ಪ್ರವಾಸದಲ್ಲಿರುವ ಜಪಾನ್‌ ಪ್ರಧಾನಿ ಶಿಂಜೋ ಅಬೆ, ತನ್ನ ಕಡೆಗೆ ಗುರಿಯಾಗಿಸಿಕೊಂಡು ಉತ್ತರ ಕೊರಿಯಾ ಮಾಡಿರುವ ಕ್ಷಿಪಣಿ ಉಡಾವಣೆಯನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next