Advertisement

Abu Dhabi: ಅಬುಧಾಬಿಯಲ್ಲಿ ಬಿಯರ್‌ ಅಂಗಡಿ!

12:39 PM May 18, 2024 | Team Udayavani |

ಅಬುಧಾಬಿ: ಇಸ್ಲಾಮಿಕ್‌ ರಾಷ್ಟ್ರಗಳಲ್ಲಿ ಮದ್ಯ ಕುರಿತು ಸಾಕಷ್ಟು ಕಟ್ಟುನಿಟ್ಟಾದ ನಿಯಮಗಳು ಜಾರಿಯಲ್ಲಿವೆ. ಇದಕ್ಕೆ ಯುಎಇ ಕೂಡ ಹೊರತಾಗಿಲ್ಲ. ಆದರೆ, ಈಗ ಕಾಲ ಬದಲಾಗಿದೆ. ಯುಎಇ ತನ್ನ ಮದ್ಯ ನೀತಿಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮಾಡಿದ್ದು, ದೇಶದಲ್ಲೇ ಮದ್ಯ ತಯಾರಿಕೆಗೆ ಒಪ್ಪಿಗೆ ನೀಡಿದೆ. ಪರಿಣಾಮ, ಅಬುಧಾಬಿ ಯಲ್ಲಿ ಮೊದಲ ಚಾಡ್‌ ಮ್ಯಾಕ್‌ à ಬಿಯರ್‌ ಅಂಗಡಿಯನ್ನು ತೆರೆಯಲಾಗಿದೆ.

Advertisement

ಈ ಮೊದಲು ಮದ್ಯ ಮಾರಾಟಕ್ಕೆ ಅವಕಾಶ ವಿತ್ತಾದರೂ, ತಯಾರಿಸುವಂತಿರಲಿಲ್ಲ. ಆಗ ಚಾಡ್‌ ಮ್ಯಾಕ್‌ à, ಅಮೆರಿಕದಲ್ಲಿ ತಯಾರಿಸಿ ಯುಎಇಗೆ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಪ್ರವಾಸಿಗರನ್ನು ಹೆಚ್ಚಿಸು ವುದಕ್ಕಾಗಿ ಯುಎಇ ತನ್ನ ಒಟ್ಟು ಮದ್ಯ ನೀತಿಯನ್ನು ಪರಿಷ್ಕರಿಸಿದೆ. ಇಷ್ಟಾ ಗಿಯೂ ಕುಡಿದು ವಾಹನ ಚಾಲನೆ ಮತ್ತು ಸಾರ್ವಜನಿಕ ಕುಡಿದು ನಶೆಯಲ್ಲಿ ತೂರಾ ಡು ವುದಕ್ಕೆ ಸಂಬಂಧಿಸಿದಂತೆ ಈಗಲೂ ಕಠಿಣ ನಿಯಮಗಳು ಜಾರಿಯಲ್ಲಿವೆ.

2020ರ ಬಳಿಕ ಅಬುಧಾಬಿ ತನ್ನ ಮದ್ಯ ನೀತಿಗಳಲ್ಲಿ ಬದಲಾವಣೆಗಳನ್ನು ತರಲು ಶುರು ಮಾಡಿತು. ಮದ್ಯ ಖರೀದಿಗೆ ಇದ್ದ ಅನುಮತಿ ವ್ಯವಸ್ಥೆಯನ್ನು ತೆಗೆದು ಹಾಕಿತು.

Advertisement

Udayavani is now on Telegram. Click here to join our channel and stay updated with the latest news.

Next