Advertisement
ಕೊರೊನಾ ಸೋಂಕು ಹಿನ್ನೆಲೆ ಕಳೆದ ಎರಡು ವರ್ಷಗಳ ಕಾಲ ಅರಮನೆಗಷ್ಟೇ ಸೀಮಿತವಾಗಿದ್ದ ನಾಡಹಬ್ಬ ಮೈಸೂರು ದಸರಾ, ಈ ಬಾರಿ ವಿಜೃಂಭಣೆಯಿಂದ ನಡೆಯುತ್ತಿದೆ. ಚಾಮುಂಡೇಶ್ವರಿಯ ಅಗ್ರಪೂಜೆಯೊಡನೆ ಆರಂಭವಾಗಿದ್ದ ನವರಾತ್ರಿ ಉತ್ಸವ ಜಂಬೂಸವಾರಿ ಮತ್ತು ಪಂಜಿ ಕವಾಯತಿನೊಂದಿಗೆ 10 ದಿನದ ದಸರಾ ಉತ್ಸವಕ್ಕೆ ತೆರೆ ಬೀಳಲಿದೆ. ಜಂಬೂ ಸವಾರಿ ವೀಕ್ಷಿಸಲು ದೇಶವಿದೇಶದ ಲಕ್ಷಾಂತರ ಪ್ರವಾಸಿಗರು ಆಗಮಿಸುವುದರಿಂದ ಅರಮನೆ ಆವರಣ ಸೇರಿದಂತೆ ಜಂಬೂ ಸವಾರಿ ಸಾಗುವ ರಾಜಮಾರ್ಗದಲ್ಲಿ ಆಸನದ ವ್ಯವಸ್ಥೆ ಸೇರಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
Related Articles
ವೃತ್ತ, ಹೈವೈ ಸರ್ಕಲ್ ಸೇರಿ ಪ್ರಮುಖ ವೃತ್ತ ಸೇರಿ ಅಂಬಾರಿ ಸಂಚರಿಸುವ ಮಾರ್ಗ, ವಿವಿಧೆಡೆಗಳಲ್ಲಿ 13 ಸಾವಿರಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
Advertisement
ಅಂತಿಮ ತಾಲೀಮು: ಜಂಬೂ ಸವಾರಿಯಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿ 55 ದಿನದಿಂದ ವಿವಿಧ ಹಂತದ ತಾಮೀಲು ನಡೆಸಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಸೋಮವಾರ ಅಂತಿಮ ಹಂತದ ತಾಲೀಮು ನಡೆಸಿತು. ಅರಮನೆ ಆವರಣದಲ್ಲಿ ಜಂಬೂ ಸವಾರಿಯ ಪುಷ್ಪಾರ್ಚನೆ ತಾಲೀಮು ನಡೆಸಲಾಯಿತು. ಚಿನ್ನದ ಅಂಬಾರಿ ಹೊತ್ತು ಸಾಗುವ ಆನೆಯ ಸುತ್ತಲೂ ಸಾರ್ವಜನಿಕರ ಪ್ರವೇಶ ತಡೆಯಲು ವಿಶೇಷ ಪೊಲೀಸ್ ತುಕಡಿನಿಯೋಜಿಸಲಾಗುತ್ತದೆ. ಇದಲ್ಲದೆ, ಅರಮನೆಯಲ್ಲಿ ಭದ್ರತಾ ದೃಷ್ಟಿಯಿಂದ ಕಮಾಂಡೋ ಪಡೆ ತುಕಡಿಗಳನ್ನು ನೇಮಿಸಲಾಗಿದೆ. ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳು, ಅಶ್ವಪಡೆ, ಶಸ್ತ್ರಸಜ್ಜಿತ ಪೊಲೀಸ್ ತುಕಡಿಗಳು ಅಂತಿಮ ಪೂರ್ವಭ್ಯಾಸ ನಡೆಸಿದವು. ತಾತ್ಕಾಲಿಕ ಬಸ್ ನಿಲ್ದಾಣ ವ್ಯವಸ್ಥೆ
ಅ.4 ಮತ್ತು 5ರಂದು ಸಾರಿಗೆ ಸಂಸ್ಥೆ ಬಸ್‌ಗಳಿಗೆ ತಾತ್ಕಾಲಿಕ ನಿಲ್ದಾಣಗಳನ್ನು ಮಾಡಲಾಗಿದೆ. ಬೆಂಗಳೂರಿನಿಂದ ಆಗಮಿಸುವ ಬಸ್‌ಗಳು ಸಾತಗಳ್ಳಿ ಕೆಎಸ್ ಆರ್‌ಟಿಸಿ ನಿಲ್ದಾಣ, ಹುಣಸೂರು, ಬೋಗಾದಿ ಹಾಗೂ ಎಚ್.ಡಿ.ಕೋಟೆ ಕಡೆಯಿಂದ ಆಗಮಿಸುವ ಬಸ್‌ಗಳು ಮಹಾರಾಜ ಕಾಲೇಜು ಮೈದಾನದಲ್ಲಿ ನಿಲ್ಲಿಸಬೇಕು. ನಂಜನಗೂಡು ಕಡೆಯಿಂದ ಆಗಮಿಸುವ ಬಸ್‌ಗಳಿಗೆ ಗುಂಡೂರಾವ್ ನಗರ ಮೈದಾನ ಹಾಗೂ ಬನ್ನೂರು, ತಿ.ನರಸೀಪುರ ರಸ್ತೆ ಮೂಲಕ ಆಗಮಿಸುವ ಬಸ್‌ಗಳು ಲಲಿತಮಹಲ್ ಮೈದಾನದಲ್ಲಿ ನಿಲ್ಲಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಂಚಾರ ಮಾರ್ಗ ಬದಲಾವಣೆ
ಅ.5ರವರೆಗೆ ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಅರಮನೆ ಸುತ್ತಮುತ್ತಲ ರಸ್ತೆಗಳು, ನ್ಯೂ ಎಸ್.ಆರ್.ರಸ್ತೆ, ಬಿ.ಎನ್.ರಸ್ತೆ, ಬನುಮಯ್ಯ ರಸ್ತೆ, ತ್ಯಾಗರಾಜ ರಸ್ತೆ, ಚಂದ್ರಗುಪ್ತ ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಸದರಿ ರಸ್ತೆಗಳ ಬದಿಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿಷೇಧಿಸಲಾಗಿದೆ. ಕೆಎಸ್‌ಆರ್‌ಟಿಸಿ ಗ್ರಾಮಾಂತರ ಮತ್ತು ನಗರ ಬಸ್‌ಗಳ ಸಂಚಾರ ಮಾರ್ಗ ಬದಲಾವಣೆ
ಮಾಡಲಾಗಿದೆ. ಕಾರ್ಯಕ್ರಮಗಳು ನಡೆಯುವ ಸ್ಥಳದಲ್ಲಿಯೇ ಸಾಧ್ಯವಾದಷ್ಟು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಹಾಯ ಕೇಂದ್ರಗಳ ಸ್ಥಾಪನೆ
ಸಾರ್ವಜನಿಕರ ಸುರಕ್ಷತೆಯ ಸೂಚನೆಗಳಿರುವ ಮತ್ತು ಪೊಲೀಸರ ಪಾತ್ರದ ಕುರಿತು ಕಿರು ಹೊತ್ತಿಗೆ ಹೊರತರಲಾಗುತ್ತಿದೆ. ಪ್ರವಾಸಿಗರ ಸಹಾಯಕ್ಕಾಗಿ ಪೊಲೀಸ್ ಸಹಾಯ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ. ಅ.5ವರೆಗೆ ನಗರದ ಜಗಜೀವನ್‌ರಾಮ್ ವೃತ್ತ(ಮಂಡಿ ಠಾಣೆ), ಅರಮನೆ ವರಾಹ ಗೇಟ್, ಕೆ.ಆರ್.ವೃತ್ತ(ದೇವರಾಜ ಠಾಣೆ), ಸೆಂಟ್ ಫಿಲೋಮಿನ ಚರ್ಚ್, ಗ್ರಾಮಾಂತರ ಬಸ್ ನಿಲ್ದಾಣ, ಗಾಂಧಿ ವೃತ್ತ(ಲಷ್ಕರ್ ಠಾಣೆ), ಮೈಸೂರು ಮೃಗಾಲಯ, ದಸರಾ ವಸ್ತು ಪ್ರದರ್ಶನ(ನಜರ್‌ಬಾದ್ ಠಾಣೆ) ಈ 8 ಸ್ಥಳಗಳಲ್ಲಿ ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ ಸಾರ್ವಜನಿಕರಿಗೆ ಅಗತ್ಯ ಮಾರ್ಗದರ್ಶನ ನೀಡುವರು. ಪಂಜಿನ ಕವಾಯತಿಗೆ ಸಕಲ ಸಿದ್ಧತೆ
ಚಾಮುಂಡಿಬೆಟ್ಟದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಚಾಮುಂಡೇಶ್ವರಿಗೆ ಅಗ್ರ ಪೂಜೆ ಹಾಗೂ ಪುಷ್ಪಾರ್ಚನೆ ಮೂಲಕ ಆರಂಭವಾಗಿದ್ದ ನವರಾತ್ರಿ ಉತ್ಸವ ಜಂಬೂಸವಾರಿ ಹಾಗೂ ಬನ್ನಿಮಂಟಪದ ಮೈದಾನದಲ್ಲಿ ನಡೆಯುವ ಪಂಜಿನ ಕವಾಯತಿನ ಮೂಲಕ ದಸರೆಗೆ ತೆರೆ ಬೀಳಲಿದೆ. ವಿಜಯ ದಶಮಿಯಂದು ರಾತ್ರಿ ನಡೆಯುವ ಪಂಜಿನ ಪವಾಯತಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅ.5ರಂದು ರಾತ್ರಿ 7.30ರಿಂದ ಪಂಜಿನಕವಾಯತು(ಟಾರ್ಚ್‌ಲೈಟ್ ಪೆರೇಡ್) ಆರಂಭವಾಗಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು. ನಾಡಗೀತೆ ಬಳಿಕ ಎರಡು ಗಂಟೆ ಪೊಲೀಸ್ ಸಿಬ್ಬಂದಿ ಸಾಹಸಮಯ ಪ್ರದರ್ಶನ ನೀಡಲಿದ್ದು, ಮೈನವಿರೇಳಿಸುವ ಬೈಕ್, ಅಶ್ವಾರೋಹಿ ಪಡೆಗಳ ಸಾಹಸ ಪ್ರದರ್ಶನ ಮಾಡಲಿದ್ದಾರೆ. ಕೊನೆಗೆ ಪಂಜಿನ ಕವಾಯತಿನ ಮೂಲಕ ಹತ್ತು ದಿನಗಳ ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ. ಅನ್ನಪೂರ್ಣ ಕ್ಯಾಂಟೀನ್, ದಸರಾ ಸ್ತಬ್ಧಚಿತ್ರ ಪರಿಶೀಲಿಸಿದ ಸಚಿವರು
ಮೈಸೂರು ಬಂಡಿಪಾಳ್ಯದ ಎಪಿಎಂಸಿ ಆವರಣದಲ್ಲಿ ಸಹಕಾರ ಇಲಾಖೆಯಿಂದ ನೂತನವಾಗಿ ಆರಂಭಿ ಸಿರುವ ಕ್ಯಾಂಟೀನ್‌ಗೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ.ಸೋಮಶೇಖರ್ ಚಾಲನೆ ನೀಡಿದರು. ಶ್ರೀಅನ್ನಪೂರ್ಣ ಕ್ಯಾಂಟೀನ್ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಸಚಿವರು, ಕ್ಯಾಂಟೀನ್‌ನಲ್ಲಿ ದಸರಾವರೆಗೆ ಉಚಿತ ಊಟ ನೀಡಲಾಗುತ್ತದೆ. ನಂತರದ ದಿನಗಳಲ್ಲಿ ಹತ್ತು ರೂ.ಗೆ ಊಟ ನೀಡಲಾಗುತ್ತದೆ ಎಂದರು. ದಾನಿಗಳ ನೆರವಿನಿಂದ ರೈತ ಬಾಂಧವರಿಗೆ ರುಚಿ ಮತ್ತು ಶುಚಿಯಾದ ಊಟ ನೀಡುವ ಕೆಲಸವನ್ನು ವರ್ತಕರು ಮಾಡುತ್ತಿದ್ದಾರೆ. ಸಹಕಾರ ಕ್ಷೇತ್ರದಿಂದ ಈ ಕ್ಯಾಂಟೀನ್ ಆರಂಭಿಸಲಾಗಿದೆ. ದಾನಿಗಳು ಮುಂದೆ ಬಂದರೆ ರಾಜ್ಯದ ವಿವಿಧೆಡೆಯ ಎಪಿಎಂಸಿಗಳಲ್ಲಿ ಕೂಡ ಕ್ಯಾಂಟೀನ್ ತೆರೆಯುವ ಚಿಂತನೆ ಮಾಡಲಾಗುವುದು ಎಂದರು. ಈ ವೇಳೆ ದಸರಾ ಜಂಬೂಸವಾರಿಯಲ್ಲಿ ಸಾಗಲಿರುವ ಸ್ತಬ್ಧಚಿತ್ರಗಳನ್ನು ವೀಕ್ಷಿಸಿದ ಸಚಿವರು, ಪ್ರತಿ ಜಿಲ್ಲೆಯಿಂದ ಸ್ತಬ್ಧಚಿತ್ರಗಳು ಆಗಮಿಸಿವೆ. ಆಯಾ ಜಿಲ್ಲೆಯ ಕಲೆ, ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ. ಸಧ್ಯಕ್ಕೆ ಎಲ್ಲಾ ಸ್ತಬ್ಧಚಿತ್ರಗಳು ಶೇ.99ರಷ್ಟು ಪೂರ್ಣಗೊಂಡಿದ್ದು, ಅಂತಿಮ ಹಂತದಲ್ಲಿದೆ. ಸಧ್ಯಕ್ಕೆ ಯಾವುದೇ ಕೊರತೆ ಇಲ್ಲ. ಕಲಾತಂಡಗಳ ಆಗಮನವಾಗಿದೆ ಎಂದರು. ಈ ಸಂದರ್ಭ ಶಾಸಕರಾದ ನಿರಂಜನ್ ಕುಮಾರ್, ಜಿ.ಟಿ.ದೇವೇಗೌಡ, ಮೂಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಉಪಸ್ಥಿತರಿದ್ದರು. ಸತೀಶ್ ದೇಪುರ