ಮುಂಬೈ: ಕೋವಿಡ್ ಟಾಸ್ಕ್ ಫೋರ್ಸ್ ಆಕ್ಷೇಪ ವ್ಯಕ್ತಪಡಿಸಿದ ನಂತರ ಶಾಲೆಗಳನ್ನು ಪುನರಾರಂಭಿಸಬೇಕು ಎಂಬ ನಿರ್ಧಾರದ ಬಗ್ಗೆ ಮಹಾರಾಷ್ಟ್ರ ಶಿಕ್ಷಣ ಇಲಾಖೆ ಯೂ ಟರ್ನ್ ಹೊಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ನಟಿ ರಾಧಿಕಾ ‘ಇಂಟಿಮೇಟ್’ ಫೋಟೋ ವಿರುದ್ಧ ನೆಟ್ಟಿಗರು ಆಕ್ರೋಶ : ಬಹಿಷ್ಕಾರಕ್ಕೆ ಆಗ್ರಹ
ಆಗಸ್ಟ್ 10ರಂದು ಮಹಾರಾಷ್ಟ್ರ ಸರ್ಕಾರ, ಗ್ರಾಮೀಣ ಪ್ರದೇಶದ 5ನೇ ತರಗತಿಯಿಂದ 12ನೇ ತರಗತಿವರೆಗೆ ಹಾಗೂ ನಗರ ಪ್ರದೇಶದ 8ನೇ ತರಗತಿಯಿಂದ 12ನೇ ತರಗತಿವರೆಗೆ ಆಗಸ್ಟ್ 17ರಿಂದ ತರಗತಿಗಳನ್ನು ಪುನರಾರಂಭಿಸಲಾಗುವುದು ಎಂದು ಘೋಷಿಸಿತ್ತು. ಈ ಬಗ್ಗೆ ವಿಸ್ತ್ರತವಾದ ಮಾರ್ಗಸೂಚಿಯನ್ನು ಕೂಡಾ ಸಿದ್ದಪಡಿಸಿತ್ತು.
ಆದರೆ ಟಾಸ್ಕ್ ಫೋರ್ಸ್ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಧಾರವನ್ನು ತಡೆ ಹಿಡಿರುವುದಾಗಿ ತಿಳಿಸಿದೆ. ಬುಧವಾರ ರಾತ್ರಿ ಮಹಾರಾಷ್ಟ್ರ ಶಿಕ್ಷಣ ಇಲಾಖೆ ಮತ್ತು ಟಾಸ್ಕ್ ಫೋರ್ಸ್ ನಡುವೆ ಸಭೆ ನಡೆದಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡಾ ಹಾಜರಿದ್ದರು ಎಂದು ವರದಿ ವಿವರಿಸಿದೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇನ್ನೂ ಲಸಿಕೆ ನೀಡಿಲ್ಲ. ಇದರಿಂದಾಗಿ ಮೂರನೇ ಕೋವಿಡ್ ಅಲೆ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದಿರುವುದಾಗಿ ಸಭೆಯಲ್ಲಿ ಎಚ್ಚರಿಸಿರುವುದಾಗಿ ಟಾಸ್ಕ್ ಫೋರ್ಸ್ ಸದಸ್ಯರೊಬ್ಬರು ಎನ್ ಡಿಟಿವಿಗೆ ತಿಳಿಸಿರುವುದಾಗಿ ಹೇಳಿದೆ.
ಶಾಲೆಗಳಲ್ಲಿ ಟೆಂಪರೇಚರ್ ಪರೀಕ್ಷಿಸಲು, ಮಾಸ್ಕ್, ಬೆಂಚುಗಳ ಅಂತರದ ಜೋಡಣೆ, ಸಾಬೂನು, ಸ್ಯಾನಿಟೈಸರ್ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಅಗತ್ಯವಿದೆ. ಅಲ್ಲದೇ ಈ ಬಗ್ಗೆ ಶಾಲಾ ಸಿಬಂದಿಗಳಿಗೆ ನೀಡಲಾಗುತ್ತಿರುವ ತರಬೇತಿಯೂ ಪೂರ್ಣಗೊಂಡಿಲ್ಲ ಎಂದು ಟಾಸ್ಕ್ ಫೋರ್ಸ್ ತಿಳಿಸಿರುವುದಾಗಿ ವರದಿ ವಿವರಿಸಿದೆ.