Advertisement
ಇದನ್ನೂ ಓದಿ:ಕಿರಿಯ ವಯಸ್ಸಿನಲ್ಲೇ ವಿಶ್ವದಾಖಲೆ ಪುಟಕ್ಕೆ ಸೇರ್ಪಡೆಯಾದ ಯಕ್ಷ ಕಲಾವಿದೆ ತುಳಸಿ ಹೆಗಡೆ ಹೆಸರು
Related Articles
Advertisement
ಕಾನೂನು ಬಾಹಿರವಾಗಿ ಜನರನ್ನು ಮತಾಂತರಗೊಳಿಸುತ್ತಿರುವ ಆರೋಪ ಕೈಲಾಶ್ ಮೇಲಿದ್ದು, ದೆಹಲಿಯಲ್ಲಿ ನಡೆದ ಸಾಮಾಜಿಕ ಕಾರ್ಯಕ್ರಮಕ್ಕೆ ನನ್ನ ಸಹೋದರ ರಾಮ್ ಪಾಲ್ ಹಾಗೂ ಗ್ರಾಮದ ಇತರ ಜನರನ್ನು ಕೈಲಾಶ್ ಕರೆದೊಯ್ದಿದ್ದು, ಅವರೆಲ್ಲರನ್ನೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿರುವುದಾಗಿ ರಾಮ್ ಕಲಿ ಪ್ರಜಾಪ್ರತಿ ದೂರು ದಾಖಲಿಸಿದ್ದರು.
ಎಫ್ ಐಆರ್ ದಾಖಲಾದ ನಂತರ ಪೊಲೀಸರು ಕೈಲಾಶ್ ನನ್ನು ಬಂಧಿಸಿದ್ದರು. ನನ್ನ ಕಕ್ಷಿದಾರ ದೂರುದಾರನ ಸಹೋದರನನ್ನು ಮತಾಂತರ ಮಾಡಿಲ್ಲ ಎಂದು ವಕೀಲರು ವಾದಿಸಿದ್ದು, ಈ ಕಾರ್ಯಕ್ರಮವನ್ನು ಪಾಸ್ಟರ್ ಸೋನು ಆಯೋಜಿಸಿದ್ದು, ಆತನೇ ಮತಾಂತರಗೊಳಿಸಿದ್ದು ಎಂದು ತಿಳಿಸಿದ್ದರು.
ಇಂತಹ ಕಾರ್ಯಕ್ರಮಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತಿದೆ ಎಂದು ಅಡಿಷನಲ್ ಅಡ್ವೋಕೇಟ್ ಜನರಲ್ ಪ್ರತಿವಾದ ಮಂಡಿಸಿದ್ದರು. ಇದರಲ್ಲಿ ಕೈಲಾಶ್ ಕೂಡಾ ಶಾಮೀಲಾಗಿದ್ದು, ಗ್ರಾಮದ ಜನರನ್ನು ಕರೆದೊಯ್ದು ಮತಾಂತರಕ್ಕೆ ಕುಮ್ಮುಕ್ಕು ನೀಡಿರುವುದಾಗಿ ವಾದ ಮಂಡಿಸಿದ್ದರು.