Advertisement

ಜಮ್ಮು ಕಾಶ್ಮೀರ ಏಕೀಕರಣ: ಪಾಕ್‌ ದಿನದಂದು ಭಾರತದ ಸ್ಪಷ್ಟ ಸಂದೇಶ

04:09 PM Mar 23, 2017 | Team Udayavani |

ಹೊಸದಿಲ್ಲಿ : ಪಾಕಿಸ್ಥಾನದ ಅಕ್ರಮ ವಶದಲ್ಲಿರುವ ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಗಿಲ್‌ಗಿಟ್‌ ಬಾಲ್ಟಿಸ್ಥಾನವನ್ನು ಭಾರತ ಸ್ವತಂತ್ರಗೊಳಿಸಿ ಅದನ್ನು ಜಮ್ಮು ಕಾಶ್ಮೀರದ ಜತೆಗೆ ಏಕೀಕರಿಸಿಯೇ ತೀರುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಪ್ರಧಾನಿ ಕಾರ್ಯಾಲಯದ ಕೇಂದ್ರ ಸಹಾಯಕ ಸಚಿವ ಜೀತೇಂದ್ರ ಸಿಂಗ್‌ ಅವರು ಇಂದಿನ “ಪಾಕಿಸ್ಥಾನ ದಿನಾಚರಣೆ’ಯಂದು ಇಸ್ಲಾಮಾಬಾದಿಗೆ ನೀಡಿದ್ದಾರೆ. 

Advertisement

ಗಿಲ್‌ಗಿಟ್‌ – ಬಾಲ್ಟಿಸ್ಥಾನ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರವನ್ನು ಅದರ ಮೂಲ ಅಖಂಡ ರೂಪದಲ್ಲಿ ಪುನಃಸ್ಥಾಪಿಸುವುದೇ ಭಾರತದ ಗುರಿಯಾಗಿದೆ ಎಂದು ಜೀತೇಂದ್ರ ಸಿಂಗ್‌ ಹೇಳಿದರು. 

1940ರ ಮಾರ್ಚ್‌ 23ರಂದು ಮುಸ್ಲಿಮರಿಗಾಗಿ ಪ್ರತ್ಯೇಕ ಮಾತೃಭೂಮಿಯನ್ನು ಆಗ್ರಹಿಸಿ ಲಾಹೋರ್‌ನಲ್ಲಿ ಕೈಗೊಳ್ಳಲಾದ ಠರಾವಿನ ಸ್ಮರಣಾರ್ಥ ಇಂದು ಪಾಕಿಸ್ಥಾನದಲ್ಲಿ ” ಪಾಕಿಸ್ಥಾನ ದಿನ’ ಅಥವಾ “ಪಾಕಿಸ್ಥಾನ ಗಣರಾಜ್ಯ ದಿನ’ವನ್ನು ಆಚರಿಸಲಾಗುತ್ತಿದೆ.

ಈ ತಿಂಗಳ ಆದಿಯಲ್ಲಿ  ಪಾಕ್‌ ವಿದೇಶ ನೀತಿಗಳ ಮುಖ್ಯಸ್ಥರಾಗಿರುವ ಸರ್ತಾಜ್‌ ಅಜೀಜ್‌ ಅವರು ಪಾಕ್‌ ಆಡಳಿತೆಯ ಕಾಶ್ಮೀರದಲ್ಲಿನ ನಿಯಂತ್ರಣ ರೇಖೆಯ ಉ¤ರದಲ್ಲಿರುವ ಗಿಲ್‌ಗಿಟ್‌ – ಬಾಲ್ಟಿಸ್ಥಾನವನ್ನು ಪಾಕಿಸ್ಥಾನದ ಐದನೇ ಪ್ರಾಂತವನ್ನಾಗಿ ರೂಪಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದರು. ಇದು ತನಗೆ ಸ್ವೀಕಾರಾರ್ಹವಲ್ಲ ಎಂದು ಭಾರತ ಆಗಲೇ ಪಾಕಿಸ್ಥಾನಕ್ಕೆ ತನ್ನ ಆಕ್ಷೇಪವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next