Advertisement

ನ.3ರಂದು ಖಾಸಗಿ ಆಸ್ಪತ್ರೆಗಳಲ್ಲಿ  ಒಪಿಡಿ ಬಂದ್‌

06:00 AM Nov 01, 2017 | Harsha Rao |

ಬೆಂಗಳೂರು: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ 2017ಕ್ಕೆ (ಕೆಪಿಎಂಇ) ತಿದ್ದುಪಡಿಯಲ್ಲಿನ ಕೆಲವು ಅಂಶಗಳು ವೈದ್ಯರು, ಸಾರ್ವಜನಿಕರಿಗೆ ಮಾರಕವಾಗಿದ್ದು, ಇವುಗಳನ್ನು ಕೈಬಿಡುವಂತೆ ಒತ್ತಾಯಿಸಿ ಭಾರತೀಯ ವೈದ್ಯ ಸಂಘದ (ಐಎಂಎ) ರಾಜ್ಯ  ಘಟಕ  ನ.3ಕ್ಕೆ ಹೊರ ರೋಗಿ ಚಿಕಿತ್ಸಾ ಸೇವೆಯನ್ನು 24 ಗಂಟೆ ಸ್ಥಗಿತಗೊಳಿಸಿ ಪ್ರತಿಭಟನೆಗೆ ಕರೆ ನೀಡಿದೆ.

Advertisement

ಸರಕಾರದೊಂದಿಗೆ ಮುಕ್ತ ಚರ್ಚೆಗೆ ಸಿದ್ಧವಿರುವುದಾಗಿ ತಿಳಿಸಿರುವ ಸಂಘವು ಸ್ಪಂದನೆ ಸಿಗದಿದ್ದರೆ ನ.9 ಇಲ್ಲವೇ ನ.10ರಂದು ವೈದ್ಯ ವೃತ್ತಿ ಯನ್ನೇ ತ್ಯಜಿಸುವ ಘೋಷಣೆ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಈ ನಡುವೆ ನ. 2ರಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ.

ಸಂಘದ ಕಚೇರಿಯಲ್ಲಿ ಮಂಗಳ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ|ಎಚ್‌. ಎನ್‌.ರವೀಂದ್ರ, “ಕೆಪಿಎಂಇ ಕಾಯ್ದೆ ತಿದ್ದುಪಡಿ ಪ್ರಸ್ತಾವದಲ್ಲಿನ ಕೆಲ ಅಂಶಗಳು ಖಾಸಗಿ ಆಸ್ಪತ್ರೆ ವೈದ್ಯರು, ಸಾರ್ವಜನಿಕರಿಗೆ ಮಾರಕವಾಗಿದ್ದು, ಅವುಗಳನ್ನು ಕೈಬಿಡಬೇಕೆಂದು ಈಗಾಗಲೇ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಈ ಅಂಶ ಗಳಿಂದಾಗುವ ಅನಾಹುತಗಳ ಬಗ್ಗೆ ಮಂಡಿಸಿದ ವಿಚಾರಗಳನ್ನು ನಿವೃತ್ತ ನ್ಯಾ| ವಿಕ್ರಮ್‌ಜಿತ್‌ ಸೇನ್‌ ನೇತೃತ್ವದ ಸಮಿತಿ ಸರಿ ಎಂದಿತ್ತು. ಇಷ್ಟಾದರೂ ಆ ಸಮಿತಿ ವರದಿ ಕಡೆಗಣಿಸಿ ತಿದ್ದುಪಡಿಗೆ ಮುಂದಾಗಿರುವುದು ಖಂಡನೀಯ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next