Advertisement

ಅ.19-20ರಂದು ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಗ್ರ್ಯಾಂಡ್‌ ಫಿನಾಲೆ

07:19 PM Oct 17, 2024 | Team Udayavani |

ಮನರಂಜನೆಯ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ಜೀ಼ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್’ ಶೋ ನ ಗ್ರಾಂಡ್ ಫಿನಾಲೆ ಇದೇ ಶನಿವಾರ (ಅ.19) ಮತ್ತು ಭಾನುವಾರ (ಅ.20) ರಾತ್ರಿ 9 ರಿಂದ 11 ಗಂಟೆಯವರೆಗೆ ಪ್ರಸಾರವಾಗಲಿದೆ.

Advertisement

25 ವಾರಗಳ ಕಾಲ ನಗೆ ಹಂಚಿರುವ ಈ ಐದು ತಂಡಗಳು ಫಿನಾಲೆ ವೇದಿಕೆಯಲ್ಲಿ ಮತ್ತಷ್ಟು ಮನರಂಜನೆ ನೀಡಲಿದ್ದಾರೆ. ಜೊತೆಗೆ ಜೂನಿಯರ್ ಅಮಿತಾಬ್ ಬಚ್ಚನ್ ಕೂಡ ಈ ವೇದಿಕೆಯಲ್ಲಿ ಇರಲಿದ್ದಾರೆ.

ನವರಸ ನಾಯಕ ಜಗ್ಗೇಶ್, ಅನುಶ್ರೀ, ಕುರಿ ಪ್ರತಾಪ್ ಸಮ್ಮುಖದಲ್ಲಿ ಈ ಫಿನಾಲೆ ನಡೆಯಲಿದ್ದು, ‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್’ ನ ಕಿರೀಟ ಯಾರ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next