ನವದೆಹಲಿ: ತಮ್ಮ ಫೋನ್ ಅನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಉಪರಾಷ್ಟ್ರಪತಿ ಚುನಾವಣೆಯ ಪ್ರತಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಆರೋಪ ಮಾಡಿದ್ದಾರೆ. ಆದರೆ, ಈ ಆರೋಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.
ಮಾರ್ಗರೇಟ್ ಆಳ್ವಾ ಮಂಗಳವಾರ ಮಾಡಿದ್ದ ಟ್ವೀಟ್‌ನಲ್ಲಿ ಭಾನುವಾರ ರಾತ್ರಿ ಬಿಜೆಪಿಯ ಕೆಲ ಸ್ನೇಹಿತರಿಗೆ ಕರೆ ಮಾಡಿದ ನಂತರ ಎಂಟಿಎನ್‌ಎಲ್ ಸಿಮ್‌ನಿಂದ ಕರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬರೆದುಕೊಂಡಿದ್ದರು.
ಜತೆಗೆ ಎಂಟಿಎನ್‌ಎಲ್‌ನಿಂದ ಬಂದದ್ದು ಎಂದು ಹೇಳಲಾಗಿರುವ ಕೈವೈಸಿ ಕೇಳಿದ ವಿವರದ ಪತ್ರವನ್ನೂ ಅಪ್‌ಲೋಡ್ ಮಾಡಿದ್ದಾರೆ.
“ನಿಮ್ಮ ಸಿಮ್‌ನ ಕೆವೈಸಿ ತೆಗೆದುಹಾಕಲಾಗಿದೆ. 24 ಗಂಟೆಗಳೊಳಗೆ ಸಿಮ್ ನಿಷ್ಕ್ರಿಯವಾಗಲಿದೆ’ ಎಂದು ಅದರಲ್ಲಿ ಮುದ್ರಿತವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, “ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ.
ಹೀಗಾಗಿ, ಅವರ ಕರೆ ಕದ್ದಾಲಿಸುವ ಅವಶ್ಯಕತೆ ಇಲ್ಲ. ಅವರು ಯಾರಿಗೆ ಬೇಕಾದರೂ ಕರೆ ಮಾಡಬಹುದು’ ಎಂದಿದ್ದಾರೆ.