ನ್ಯೂಯಾರ್ಕ್/ನವದೆಹಲಿ: 2021ರ ಹೊಸ ವರ್ಷದಲ್ಲಿ ಜಗತ್ತಿನಾದ್ಯಂತ ಸುಮಾರು 3,71,504 ನವಜಾತ ಶಿಶುಗಳು ಜನಿಸಿದ್ದು, ಭಾರತದಲ್ಲಿಯೇ ಅಂದಾಜು 60,000 ಶಿಶುಗಳ ಜನನವಾಗಿದೆ ಎಂದು ಯೂನಿಸೆಫ್ (ವಿಶ್ವಸಂಸ್ಥೆಯ ಮಕ್ಕಳ ನಿಧಿ) ಶುಕ್ರವಾರ(ಜನವರಿ 01, 2021) ತಿಳಿಸಿದೆ.
2021ರಲ್ಲಿ ಜಗತ್ತಿನಾದ್ಯಂತ 140 ಮಿಲಿಯನ್ (14 ಕೋಟಿ) ಶಿಶುಗಳು ಜನಿಸಲಿವೆ ಎಂದು ವಿಶ್ವಸಂಸ್ಥೆ ಅಂದಾಜಿಸಿದ್ದು, ಈ ಮಕ್ಕಳ ಸರಾಸರಿ ಜೀವಿತಾವಧಿ 84 ವರ್ಷ ಎಂದು ನಿರೀಕ್ಷಿಸಲಾಗಿದೆ ಎಂದು ವರದಿ ವಿವರಿಸಿದೆ.
ಹೊಸ ವರ್ಷದ ಜನವರಿ 1ರಂದು ಜಾಗತಿಕವಾಗಿ ಹತ್ತು ದೇಶಗಳಲ್ಲಿ ಜನಿಸಿದ ಮಕ್ಕಳ ವಿವರ ಈ ರೀತಿ ಇದ್ದು, ಭಾರತ (59,995), ಚೀನಾ (35,615), ನೈಜೀರಿಯಾ (21,439), ಪಾಕಿಸ್ತಾನ (14,161), ಇಂಡೋನೇಷ್ಯಾ (12,336), ಇಥಿಯೋಪಿಯಾ (12,006), ಅಮೆರಿಕ (10,312), ಈಜಿಪ್ಟ್ (9,455), ಬಾಂಗ್ಲಾದೇಶ್ (9,236) ಹಾಗೂ ಡೆಮೊಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (8640).
ಇದನ್ನೂ ಓದಿ:ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಲಿದೆ ಮಾರುತಿ ಸುಜುಕಿ 800 ಸಿಸಿ ಕಾರು
ಇಂದು (2021, ಜನವರಿ 01) ಜನಿಸಿದ ಮಕ್ಕಳು ಒಂದು ವರ್ಷದ ಹಿಂದೆ ಜನಿಸಿದ್ದ ಮಕ್ಕಳಿಗಿಂತ ಹೊಸ ಲೋಕವನ್ನು ಪ್ರವೇಶಿಸಿದಂತಾಗಿದೆ. ಅಲ್ಲದೇ ಹೊಸ ವರ್ಷ ಇನ್ನು ಮುಂದೆ ಪುನರ್ ವಿವೇಚನೆಯ ಅವಕಾಶವನ್ನು ಒದಗಿಸಿಕೊಟ್ಟಿದೆ ಎಂದು ಯೂನಿಸಫೆ ಕಾರ್ಯಕಾರಿ ನಿರ್ದೇಶಕ ಹೆನ್ರಿಯೆಟ್ಟಾ ಪೊರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.