Advertisement

ವಿಶ್ವದಲ್ಲಿ ದೇಶದ ಹಿರಿಮೆ ಹೆಚ್ಚಲು ಹಿಂದಿ ಭಾರತದ ರಾಷ್ಟ್ರ ಭಾಷೆಯಾಗಬೇಕು; ಅಮಿತ್ ಶಾ

10:08 AM Sep 15, 2019 | Team Udayavani |

ನವದೆಹಲಿ: ಹಿಂದಿ ಭಾಷೆ ದೇಶವನ್ನು ಒಗ್ಗೂಡಿಸುತ್ತಿದ್ದು, ಈ ನಿಟ್ಟಿನಲ್ಲಿ ಭಾರತ ಒಂದು ಅಧಿಕೃತ ಭಾಷೆಯ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುವಂತಾಗಬೇಕು ಎಂದು ಹಿಂದಿ ದಿವಸ್ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

ದೇಶದಲ್ಲಿ ಅತೀ ಹೆಚ್ಚಾಗಿ ಬಳಸುವ ಭಾಷೆ ಹಿಂದಿ..ಇದು ಭಾರತವನ್ನು ಒಗ್ಗೂಡಿಸುತ್ತಿದೆ. ಹಿಂದಿಯನ್ನು ಪ್ರಥಮ ಭಾಷೆಯನ್ನಾಗಿ ಮಾಡಬೇಕು ಎಂದು ಮನವಿ ಮಾಡಿಕೊಂಡ ಶಾ, ಭಾರತ ಹಿಂದಿ ಭಾಷೆಯ ಮೂಲಕವೇ ಪ್ರತಿನಿಧಿಸುವ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಭಾರತ ವಿವಿಧ ಭಾಷೆಗಳನ್ನು ಮಾತನಾಡುವ ಜನರನ್ನು ಹೊಂದಿದೆ. ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಪ್ರಾಮುಖ್ಯತೆ ಇರುತ್ತದೆ. ಆದರೆ ಜಗತ್ತಿನಲ್ಲಿಯೇ ಭಾರತಕ್ಕೊಂದು ಗುರುತನ್ನು ತಂದುಕೊಡುವಲ್ಲಿ ಒಂದು ಪ್ರಮುಖ ಭಾಷೆಯೂ ಅಷ್ಟೇ ಮುಖ್ಯವಾಗಿದೆ. ಒಂದು ಭಾಷೆ ದೇಶವನ್ನು ಒಗ್ಗೂಡಿಸುತ್ತಿದೆ ಅಂದರೆ ಅದು ಎಲ್ಲೆಡೆ ಮಾತನಾಡುವ ಹಿಂದಿ ಭಾಷೆ ಎಂದು ಶಾ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಭಾರತೀಯರು ಹಿಂದಿ ಭಾಷೆಯನ್ನು ಹೆಚ್ಚಾಗಿ ಬಳಸಬೇಕು. ಈ ಮೂಲಕ ಮಹಾತ್ಮ ಗಾಂಧಿ ಮತ್ತು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಕನಸಿನ ಸತ್ಯ ದರ್ಶನವಾಗಲಿದೆ ಎಂದು ಮತ್ತೊಂದು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next