Advertisement

Jharkhand: ಅಧಿಕಾರಕ್ಕೆ ಬಂದ ಮೊದಲ ದಿನವೇ ಲಂಚಕ್ಕೆ ಬೇಡಿಕೆ ಇಟ್ಟ ಮಹಿಳಾ ಅಧಿಕಾರಿ…

09:06 AM Jul 18, 2023 | Team Udayavani |

ನವದೆಹಲಿ: ಈಗಿನ ಕಾಲದಲ್ಲಿ ಯಾವುದೇ ಸರಕಾರಿ ಕೆಲಸ ಆಗಬೇಕೆಂದರೆ ಲಂಚ ಕೊಡಲೇ ಬೇಕು ಇಲ್ಲದಿದ್ದಲ್ಲಿ ನಮಗೆ ಬೇಕಾದ ಸಮಯಕ್ಕೆ ಯಾವುದೇ ಕೆಲಸ ಆಗುವುದಿಲ್ಲ, ಇದು ಎಲ್ಲರಿಗೂ ಗೊತ್ತಿರುವ ವಿಚಾರ ಕೂಡಾ, ಅದೇ ರೀತಿ ಅಧಿಕಾರಕ್ಕೆ ಬಂದ ಅಧಿಕಾರಿಗಳು ಕೂಡಾ ಯಾವ ರೀತಿಯಲ್ಲಿ ದುಡ್ಡು ಮಾಡುವುದು ಎಂದು ಕಾದು ಕುಳಿತಂತೆ ಕೆಲವೊಂದು ಅಧಿಕಾರಿಗಳು ನಡೆದುಕೊಳ್ಳುತ್ತಾರೆ.

Advertisement

ಅದೇ ರೀತಿ ಜಾರ್ಖಂಡ್ ನ ಸರಕಾರಿ ಮಹಿಳಾ ಅಧಿಕಾರಿಯೊಬ್ಬರು ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟು ಇದೀಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.

ಮಿಥಾಲಿ ಶರ್ಮಾ ಎಂಬ ಅಧಿಕಾರಿ ಒಂದು ವಾರದ ಹಿಂದೆ ಜಾರ್ಖಂಡ್‌ನ ಕೊಡೆರ್ಮಾದಲ್ಲಿ ಸಹಕಾರಿ ಇಲಾಖೆಯ ಸಹಾಯಕ ರಿಜಿಸ್ಟ್ರಾರ್ ಆಗಿ ನಿಯೋಜನೆಗೊಂಡಿದ್ದರು ಇದು ಆಕೆಯ ಮೊದಲ ಕೆಲಸವೂ ಆಗಿತ್ತು.

ಇವರು ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಓರ್ವ ವ್ಯಕ್ತಿಯಿಂದ ಹತ್ತು ಸಾವಿರ ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಮಹಿಳಾ ಅಧಿಕಾರಿ ಲಂಚ ಪಡೆಯುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಏನಿದು ಪ್ರಕರಣ:
ಮಿಥಾಲಿ ಶರ್ಮಾ ಅವರು ಜಾರ್ಖಂಡ್‌ ರಾಜ್ಯದಲ್ಲಿ ಜೆಪಿಎಸ್‌ಸಿ ಪರೀಕ್ಷೆಯಲ್ಲಿ 108ನೇ ಶ್ರೇಯಾಂಕ ಪಡೆದು ಜಾರ್ಖಂಡ್‌ ರಾಜ್ಯದ ಕೊಡರ್ಮಾ ವೃತ್ತದ ಕೋ-ಆಪರೇಟಿವ್‌ ಸೊಸೈಟಿಯಲ್ಲಿ ಸಹಾಯಕ ರಿಜಿಸ್ಟ್ರಾರ್‌ ಒಂದು ವಾರದ ಹಿಂದೆಯಷ್ಟೇ ಅಧಿಕಾರಕ್ಕೆ ಬಂದಿದ್ದರು. ಈ ವೇಳೆ ಕೊಡೆರ್ಮಾ ವ್ಯಾಪಾರ್ ಮಂಡಲ್ ಸಹೋಗ್ ಸಮಿತಿ ಲಿಮಿಟೆಡ್‌ನ ನಿರ್ವಹಣಾ ಸಮಿತಿಯ ಸದಸ್ಯರಾಗಿರುವ ರಾಮೇಶ್ವರ ಪ್ರಸಾದ್‌ ಯಾದವ್‌ ಅವರ ಏಜೆನ್ಸಿ ಗೆ ಈ ಮಹಿಳಾ ಭೇಟಿ ನೀಡಿದ್ದಾರೆ ಈ ವೇಳೆ ಯಾದವ್ ಅವರಿಗೆ ಯಾವುದೋ ವಿಚಾರವಾಗಿ ಶೋಕಾಸ್ ನೊಟೀಸ್ ನೀಡುವ ವಿಚಾರ ತೆಗೆದಿದ್ದಾರೆ ಇದು ಯಾದವ್ ಅವರಿಗೆ ಅರ್ಥವಾಗಲಿಲ್ಲ ಇನ್ನೊಂದು ದಿನ ಯಾದವ್ ಅವರು ಮಿಥಾಲಿ ಶರ್ಮಾ ಅವರ ಕಚೇರಿಗೆ ಬಂದು ತನಗೆ ನೀಡುವ ನೊಟೀಸ್ ವಿಚಾರವಾಗಿ ಮಾತನಾಡಲು ಬಂದಿದ್ದಾರೆ. ಈ ವೇಳೆ ಮಿಥಾಲಿ ಶರ್ಮಾ ಅವರು ಯಾದವ್ ಅವರ ಬಳಿ ನಿಮಗೆ ನೀಡುವ ಶೋಕಾಸ್ ನೊಟೀಸ್ ನಿಂದ ಪರಾಗಬೇಕಾದರೆ ನೀವು ಇಪ್ಪತ್ತು ಸಾವಿರ ಲಂಚ ನೀಡಬೇಕು ಎಂದು ಹೇಳಿದ್ದಾರೆ.

Advertisement

ಲಂಚ ವಿಚಾರ ಬಂದಾಗ ಯಾದವ್ ಅವರು ತಾನು ಯಾವುದೇ ತಪ್ಪು ಮಾಡಲಿಲ್ಲ ಹಾಗಾಗಿ ನಾನು ಯಾವುದೇ ಕಾರಣಕ್ಕೂ ಲಂಚ ನೀಡುವುದಿಲ್ಲ ಎಂದುಕೊಂಡಿದ್ದರು ಅಲ್ಲದೆ ಈ ವಿಚಾರದ ಕುರಿತು ಜಾರ್ಖಂಡ್‌ನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ದೂರನ್ನು ನೀಡಿದ್ದರು ಅದರಂತೆ ಜುಲೈ 7 ರಂದು ಯಾದವ್ ಅವರು ಮಿಥಾಲಿ ಶರ್ಮಾ ಅವರ ಕಚೇರಿಯಲ್ಲಿ ಹತ್ತು ಸಾವಿರ ಲಂಚ ನೀಡುವ ವೇಳೆ ಎಸಿಬಿ ಅಧಿಕಾರಿಗಳು ಮಹಿಳಾ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಸಧ್ಯ ಮಹಿಳಾ ಅಧಿಕಾರಿ ಎಸಿಬಿ ಅಧಿಕಾರಿಗಳ ವಶದಲ್ಲಿದ್ದು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Kerala ಮಾಜಿ ಸಿ.ಎಂ. ಉಮ್ಮನ್‌ ಚಾಂಡಿ ನಿಧನ; ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

Advertisement

Udayavani is now on Telegram. Click here to join our channel and stay updated with the latest news.

Next