Advertisement
ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿರುವ ಸೇವಾ ಗ್ರಾಮದಲ್ಲಿ ಮಂಗಳವಾರ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಮೋದಿ ನೇತೃತ್ವದ ಸರಕಾರದ ನಿಲುವುಗಳನ್ನು ಕಟುವಾಗಿ ಟೀಕಿಸಲಾಗಿದೆ. ಹಾಲಿ ಸರಕಾರ ಮಹಾತ್ಮಾ ಗಾಂಧಿಯವರ ತಣ್ತೀಗಳಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದೆ ಎಂದು ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಣದೀಪ್ ಸುರ್ಜೇವಾಲಾ ಮಾಹಿತಿ ನೀಡಿದರು.
ದೇಶ ಒಡೆಯುತ್ತಿದ್ದಾರೆ ಮೋದಿ: ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಹಾತ್ಮಾ ಗಾಂಧಿಯವರು ದೇಶ ಒಂದುಗೂಡಿಸಲು ಮುಂದಾಗಿದ್ದರು. ಪ್ರಧಾನಿ ಮೋದಿ ದೇಶ ಒಡೆಯುತ್ತಿದ್ದಾರೆ ಎಂದು ಟೀಕಿಸಿದರು. ಅದಕ್ಕೆ ಅವರು ಕೈಗೊಳ್ಳುತ್ತಿರುವ ನೀತಿಗಳೇ ಸಾಕ್ಷಿ ಎಂದರು. ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ರೈತರಿಗೆ ಸಂಕಷ್ಟದ ದಿನಗಳು ಬಂದಿವೆ. ಹಿಂದಿನ ಚುನಾವಣೆ ವೇಳೆ ತಾನು ಪ್ರಧಾನಿಯಾಗ ಬಯಸುವುದಿಲ್ಲ. ಕೇವಲ ದೇಶದ ಕಾವಲುಗಾರನಾಗುತ್ತೇನೆ ಎಂದಿದ್ದರು. ಗಾಂಧೀಜಿಯವರ ಬಗ್ಗೆ ಪತ್ರ ಬರೆದ ನೀವು 30 ಸಾವಿರ ಕೋಟಿ ರೂ.ಗಳನ್ನು ನಿಮ್ಮ ಸ್ನೇಹಿತನಿಗೆ (ಅನಿಲ್ ಅಂಬಾನಿ) ಏಕೆ ನೀಡಿದಿರಿ ಎಂದು ಪರೋಕ್ಷವಾಗಿ ರಫೇಲ್ ಡೀಲ್ ಪ್ರಸ್ತಾವಿಸಿದರು. ಸೇವಾ ಗ್ರಾಮದಲ್ಲಿ 75 ವರ್ಷಗಳ ಬಳಿಕ ಕಾಂಗ್ರೆಸ್‌ನ ಸಭೆ ನಡೆದಿದೆ. 1942ರಲ್ಲಿ ಮಹಾತ್ಮ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ‘ಬ್ರಿಟೀಷರೇ ಭಾರತ ಬಿಟ್ಟು ತೊಲಗಿ’ (ಕ್ವಿಟ್ ಇಂಡಿಯಾ) ಗೊತ್ತುವಳಿಯನ್ನು ಅಂಗೀಕರಿಸಲಾಗಿತ್ತು. ತಟ್ಟೆಗಳನ್ನು ತಾವೇ ತೊಳೆದರು
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಮಧ್ಯಾಹ್ನ ಊಟದ ಬಳಿಕ ತಮ್ಮ ತಟ್ಟೆಗಳನ್ನು ತಾವೇ ತೊಳೆದುಕೊಂಡರು. ಇಬ್ಬರು ನಾಯಕರು, ಪಕ್ಷದ ಕಾರ್ಯಕರ್ತರ ನಡುವೆ ನಳ ತಿರುಗಿಸಿ ತಟ್ಟೆ ಮತ್ತು ಕೈ ತೊಳೆದುಕೊಂಡಿದ್ದಾರೆ. ಅದರ ವೀಡಿಯೋ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಲ್ಲದೆ ರಾಹುಲ್ ಗಾಂಧಿಯವರು ಸೇವಾಶ್ರಮದಲ್ಲಿ ಗಿಡವನ್ನೂ ನೆಟ್ಟರು. 1986ರಲ್ಲಿ ರಾಜೀವ್ ಗಾಂಧಿಯವರೂ ಅಲ್ಲಿ ಗಿಡ ನೆಟ್ಟಿದ್ದರು.