ಅಳ್ವಾರ್(ರಾಜಸ್ಥಾನ್):ಪತಿಯಿಂದ ಪತ್ನಿ ಮೇಲೆ ಹಲ್ಲೆ, ಪತಿಯಿಂದ ಚಿತ್ರಹಿಂಸೆ ಹೀಗೆ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಆದರೆ ರಾಜಸ್ಥಾನದ ಸರ್ಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು ಪತ್ನಿಯ ಹೊಡೆತವನ್ನು ತಾಳಲಾರದೆ, ಸ್ಥಳೀಯ ಕೋರ್ಟ್ ಮೆಟ್ಟಿಲೇರಿರುವ ಘಟನೆ ನಡೆದಿದ್ದು, ಪ್ರಾಂಶುಪಾಲರಿಗೆ ಸೂಕ್ತ ಭದ್ರತೆ ನೀಡುವಂತೆ ಆದೇಶಿಸಿದೆ.
ಇದನ್ನೂ ಓದಿ:ಬನಶಂಕರಿ: ಸ್ಕೂಲ್ ಬಸ್ ಢಿಕ್ಕಿಯಾಗಿ 16 ವರ್ಷದ ಬಾಲಕಿ ಸ್ಥಳದಲ್ಲೇ ಸಾವು
ಪತ್ನಿ ಪತಿ(ಪ್ರಾಂಶುಪಾಲರಿಗೆ) ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹರ್ಯಾಣದ ಖಾರ್ಕರಾ ಸರ್ಕಾರಿ ಶಾಲೆಯ ಪ್ರಾಂಶುಪಾಲ ಅಜಿತ್ ಯಾದವ್ ಅವರನ್ನು ಪತ್ನಿ ಕ್ರಿಕೆಟ್ ಬ್ಯಾಟ್ ಮತ್ತು ಇತರ ವಸ್ತುಗಳಿಂದ ಬೆನ್ನಟ್ಟಿ ಹೊಡೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತನಗೆ ಪತ್ನಿ ಥಳಿತವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಸೂಕ್ತ ರಕ್ಷಣೆ ನೀಡಬೇಕೆಂದು ಕೋರಿ ಅಜಿತ್ ಯಾದವ್ ಕೋರ್ಟ್ ಮೆಟ್ಟಿಲೇರಿದ್ದು, ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ, ರಕ್ಷಣೆ ನೀಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.
ಮತ್ತೊಂದು ವಿಡಿಯೋದಲ್ಲಿ ಯಾದವ್ ಪತ್ನಿ, ಹರ್ಯಾಣದ ಸೋನಿಪತ್ ನಿವಾಸಿ ಸುಮನ್ ಯಾದವ್, ತಮ್ಮ ಮಗುವಿನ ಸಮ್ಮುಖದಲ್ಲಿಯೇ ಪತಿಗೆ ಹೊಡೆಯುತ್ತಿರುವ ದೃಶ್ಯ ದಾಖಲಾಗಿದೆ ಎಂದು ವರದಿ ವಿವರಿಸಿದೆ.
ಕಳೆದ ಒಂದು ವರ್ಷದಿಂದ ಪತ್ನಿ ಹೊಡೆಯುತ್ತಿರುವುದಾಗಿ ಯಾದವ್ ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಸಾಕ್ಷ್ಯವನ್ನು ಸಂಗ್ರಹಿಸಲು ಯಾದವ್ ಮನೆಗೆ ಸಿಸಿಟಿವಿ ಅಳವಡಿಸಿದ್ದರು ಎಂದು ವರದಿ ತಿಳಿಸಿದೆ. ಯಾದವ್ ಮತ್ತು ಸುಮನ್ ವಿವಾಹವಾಗಿ ಏಳು ವರ್ಷವಾಗಿದೆ ಎಂದು ವರದಿ ಹೇಳಿದೆ.