ಆಗ್ರಾ: ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ವೇಳೆ ಯುವಕನೊಬ್ಬ ಇದ್ದಕಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ಗುರುವಾರ ಸಂಭವಿಸಿದೆ.
ಆಗ್ರಾದ ಕಮಲಾ ನಗರದಲ್ಲಿರುವ ಸಿಹಿತಿಂಡಿ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು ಘಟನೆಯ ದೃಶ್ಯ ಇಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲಿ ಕಾಣಿಸುವಂತೆ ಸಿಹಿತಿಂಡಿ ತಯಾರಿಕಾ ಅಂಗಡಿಯಲ್ಲಿ ಕೆಲವೊಂದು ಯುವಕರು ಸಿಹಿ ತಿಂಡಿಯನ್ನು ಪ್ಯಾಕ್ ಮಾಡುತ್ತಿರುವುದು ಕಾಣಬಹುದು ಈ ವೇಳೆ ಅಲ್ಲಿದ್ದ ಓರ್ವ ಯುವಕ ಇದ್ದಕಿದ್ದಂತೆ ಕುಸಿದು ಬೀಳುವುದು ಕಂಡು ಬಂದಿದೆ. ಆ ಕೂಡಲೇ ಅಲ್ಲಿದ್ದ ಇತರ ಸಹದ್ಯೋಗಿಗಳು ಯುವಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಅಷ್ಟೋತ್ತಿಗಾಗಲೇ ಯುವಕನ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದು ವೈದ್ಯರು ಹೇಳಿದ್ದಾರೆ.
ಘಟನೆ ಕುರಿತು ಆಗ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಮೃತ ಯುವಕನ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Gyanvapi ನೆಲಮಾಳಿಗೆಯಲ್ಲಿ ಹಿಂದೂಗಳ ಪೂಜೆಗೆ ತಡೆ ನೀಡಲ್ಲ: ಅಲಹಾಬಾದ್ ಹೈಕೋರ್ಟ್