Advertisement
ಏನಿದು ಪ್ರಕರಣ:ಅಜ್ಮೀರ್‌ನ ಕ್ರಿಶ್ಚಿಯನ್ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ಇಬ್ಬರು ವೃದ್ಧ ಸಹೋದರಿಯರನ್ನು ಬೆಳಿಗ್ಗೆ ಸುಮಾರು ೭ ಗಂಟೆಯ ಸುಮಾರಿಗೆ ನಾಲ್ವರು ದುಷ್ಕರ್ಮಿಗಳ ತಂಡ ಮನೆಗೆ ಅಕ್ರಮ ಪ್ರವೇಶಿಸಿ ಕಾರಿನಲ್ಲಿ ಅಪಹರಿಸಿದ್ದಾರೆ. ವೃದ್ಧ ಸಹೋದರಿಯರನ್ನು ಅಪಹರಿಸುವುದನ್ನು ಅಲ್ಲಿನ ನೆರೆಮನೆಯವರು ಗಮನಿಸಿದ್ದು ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Related Articles
Advertisement
ಅಪಹರಣಕ್ಕೊಳಗಾದ ಮಹಿಳೆಯರ ಬಳಿ ಮಾಹಿತಿ ಕಲೆ ಹಾಕಿದಾಗ ನಾಲ್ವರು ಆರೋಪಿಗಳು ತಮ್ಮನ್ನು ಅಪಹರಿಸಿದ್ದರು ಅದರಲ್ಲಿ ಓರ್ವನ ಪರಿಚಯ ನಮಗಿದೆ ಆತ ನಮ್ಮ ಅಸ್ತಿ ಕಬಳಿಸಲು ಈ ಹಿಂದೆಯೂ ಯತ್ನಿಸಿದ್ದ ಜೊತೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಈ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ, ಇದೆ ವಿಚಾರಕ್ಕೆ ನಮ್ಮನ್ನು ಅಪಹರಿಸಿ ಅಸ್ತಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಎಂದು ಪದೇ ಪದೇ ಹೇಳುತಿದ್ದ ಬಳಿಕ ಕಾರಿನಲ್ಲಿ ಥಳಿಸಿದ್ದಾರೆ ಮತ್ತು ರಿವಾಲ್ವರ್ ಮತ್ತು ಕತ್ತರಿ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಹೆಚ್ಚುವರಿ ಎಸ್ಪಿ ದುರ್ಗ್ ಸಿಂಗ್, ಇಬ್ಬರು ಸಹೋದರಿಯರಾದ ಡಾ. ರಮಾರಾಣಿ ಜೈನ್ (72) ಮತ್ತು ನಿವೃತ್ತ ಪ್ರಾಂಶುಪಾಲರಾದ ಕುಂಕುಮ್ ಜೈನ್ (62) ಅವರನ್ನು ಶನಿವಾರ ಬೆಳಿಗ್ಗೆ ಕ್ರಿಶ್ಚಿಯನ್ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಹರಿಸಲಾಗಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದ ವಿಚಾರ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರಿಗೆ ಜಿಲ್ಲೆಯಲ್ಲಿ ದಿಗ್ಬಂಧನ ವಿಧಿಸಲಾಯಿತು. ಕ್ರಿಶ್ಚಿಯನ್ ಗಂಜ್, ಸಿವಿಲ್ ಲೈನ್ ಮತ್ತು ಕೊತ್ವಾಲಿ ಠಾಣೆ ಪೊಲೀಸರು ಆರೋಪಿಯನ್ನು ಬೆನ್ನಟ್ಟಿದ್ದಾರೆ. ಇದರಿಂದ ಆರೋಪಿಗಳು ಹೆದರಿ ಸಹೋದರಿಯರನ್ನು ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ. ಅದೇ ಸಮಯದಲ್ಲಿ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಆರೋಪಿ ಮುಖೇಶ್ ನನ್ನು ಬಂಧಿಸಿ ಆತನ ಬಳಿಯಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಹುಡುಕಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿ ಅಪಹರಣ ನಡೆಸಲಾಗಿದೆ ಎಂದು ಹೇಳಲಾಗಿದ್ದು ಈ ಕೃತ್ಯದ ಪ್ರಮುಖ ಆರೋಪಿಯನ್ನು ಆದಿಲ್ ಶೇಖ್ ಎಂದು ಹೇಳಲಾಗಿದೆ. ಆಸ್ತಿಗೆ ಸಂಬಂಧಿಸಿದಂತೆ ಈಗಾಗಲೇ ಕ್ರಿಶ್ಚಿಯನ್ ಗಂಜ್ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Thalapathy 69: ಕ್ರೀಡಾ ಜ್ಯೋತಿ ಹಿಡಿದ ದಳಪತಿ; 69ನೇ ಸಿನಿಮಾದ ಸ್ಪೆಷೆಲ್ ಅಪ್ಡೇಟ್ ಔಟ್