Advertisement
ಕೃತಕವಾಗಿ ತಯಾರಿಸಲ್ಪಡುವ ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳಿಂದ ಬೆಳೆಗಳಿಗೆ ದೊರಕುವ ಪ್ರತಿಯೊಂದು ಪೋಷಕಾಂಶಗಳನ್ನು ನಿಸರ್ಗದಲ್ಲಿ ದೊರಕುವ ಜೈವಿಕ ಕ್ರಿಯೆಗಳಿಂದ ಯಾವ ರೀತಿ ಪಡೆದುಕೊಳ್ಳಬಹುದು ಎಂಬುದನ್ನು ಎಳೆ ಎಳೆಯಾಗಿ ರೈತ ಸಮೂಹಕ್ಕೆ ತಿಳಿಸಿಕೊಟ್ಟವರು ಮಹಾರಾಷ್ಟ್ರದ ಡಾ. ಸುಭಾಷ್ ಪಾಳೇಕಾರರವರು ಈ ಕೃಷಿ ಪದ್ಧತಿಯ ಆಧುನಿಕ ಹರಿಕಾರರಾಗಿದ್ದಾರೆ. ಅವರ ಸೂಚನೆಗಳನ್ನು, ಅವರು ಪ್ರಚುರಪಡಿಸಿದ ವಿಧಾನಗಳನ್ನು ಅನೇಕ ರೈತರು ಅಳವಡಿಸಿಕೊಂಡಿರುವುದಷ್ಟೇ ಅಲ್ಲದೆ, ಯಶಸ್ವಿಯೂ ಆಗಿದ್ದಾರೆ. ಈ ಪದ್ಧತಿಯಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಯೂ ಸಿಗುತ್ತದೆ. ಪಾಳೇಕರರಿಂದ ಪ್ರೇರಿತರಾದ ಅನೇಕ ರೈತರಲ್ಲಿ ರಾಮಣ್ಣ ತುಕಾರಾಮ ಕಡಕೋಳ ಅವರೂ ಒಬ್ಬರು.
ಭೂಮಿಯು ವರ್ಷದಿಂದ ವರ್ಷಕ್ಕೆ ಸಮತಟ್ಟಾಗುತ್ತಾ ಬಂದಿತು. ಅಷ್ಟೇ ಅಲ್ಲ, ಭೂಮಿ ಇಳಿಜಾರಿದ್ದರೂ ಮಣ್ಣಿನ ಕುಸಿತ ಸಂಭವಿಸಲಿಲ್ಲ. ನೈಸರ್ಗಿಕವಾಗಿಯೇ ತಮ್ಮ ಗುಡ್ಡಗಾಡು ಜಮೀನನ್ನು ಸಮತಟ್ಟಾಗಿಸಿ, ಸಂಪೂರ್ಣವಾಗಿ ಕೃಷಿಯೋಗ್ಯ ಭೂಮಿಯನ್ನಾಗಿ ಪರಿವರ್ತನೆ ಮಾಡಿದರು. ಇಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳನ್ನು ಬೆಳೆದು ಸುಸ್ಥಿರ ಬೇಸಾಯ ಕೈಗೊಂಡು ಸುತ್ತಮುತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ.
Related Articles
Advertisement
ಅಂತರ್ಜಲ ರೀಚಾರ್ಜ್ ಆಗಿದೆಅಲ್ಲಿ ನೀರಿನ ಸೌಕರ್ಯ ಚೆನ್ನಾಗಿಲ್ಲದಿದ್ದರೂ ಇರುವಷ್ಟನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿದ್ದಾರೆ. ಇವರ ಈ ಅದ್ಭುತ ಕಾರ್ಯವನ್ನು ಕೇಳಿ ಸುತ್ತಮುತ್ತಲಿನ ಹಲವಾರು ಗ್ರಾಮಗಳ ರೈತರು ಸ್ಥಳಕ್ಕೆ ಭೇಟಿ ಕೊಟ್ಟು ಅಗತ್ಯ ಮಾರ್ಗದರ್ಶನವನ್ನು ಪಡೆಯುತ್ತಿದ್ದಾರೆ. ಹರಿದು ವ್ಯರ್ಥವಾಗಿ ಹೋಗುತ್ತಿದ್ದ ಮಳೆನೀರನ್ನು ನಿಲ್ಲಿಸಿದ್ದರಿಂದ ಕೊಳವೆಬಾವಿಯೂ ರೀಚಾರ್ಜ್ ಆಗಿವೆ. ಇಂಗು ಗುಂಡಿಗಳು, ಕಸಗಳ ಸದುಪಯೋಗ ಸೇರಿದಂತೆ ಹಲವಾರು ಕೃಷಿ ಸಂಬಂಧಿ ಪ್ರಯೋಗಗಳನ್ನು ರಾಮಣ್ಣ ಯಶಸ್ವಿಯಾಗಿ ಕೈಗೊಂಡಿದ್ದಾರೆ. ನೆಲವನ್ನು ತಣ್ಣಗಿಟ್ಟಿದ್ದಾರೆ
ಬಹುವಾರ್ಷಿಕ ಬೆಳೆಗಳಿಂದ ಬರುವ ಕೃಷಿ ತ್ಯಾಜ್ಯವಸ್ತುಗಳಾದ ಕಬ್ಬು ಬೆಳೆಯ ಒಣಗಿದ ರವದಿ ಮತ್ತು ಬಾಳೆ ಬೆಳೆಯಿಂದ ಬಾಳೆ ಗೊನೆ ಕಟಾವಾದ ನಂತರ ಉಳಿಯುವ ಬಾಳೆ ಎಲೆ ಹಾಗೂ ಕಾಂಡಗಳನ್ನು ಅದೇ ಜಮೀನಿನಲ್ಲಿ ಅಚ್ಛಾದನೆ (ಹೊದಿಕೆ) ಮಾಡಿ ಮಣ್ಣಿನಲ್ಲಿ ತೇವಾಂಶ ಕಾಪಾಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ: 9448019516 – ಬಸವರಾಜ ಶಿವಪ್ಪ ಗಿರಗಾಂವಿ