Advertisement
ಗಾಂಧಿ ಜಯಂತಿಯ ದಿನವಾದ ಸೋಮವಾರವೇ ಸ್ವಚ್ಛ ಭಾರತ ಅಭಿಯಾನಕ್ಕೆ 3 ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸ್ವಚ್ಛ ಭಾರತದಲ್ಲಿ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದ್ದು ಹೀಗೆ. 2014ರ ಅ.2 ರಂದು ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಭಾರತವನ್ನು ಸ್ವಚ್ಛ ದೇಶವ ನ್ನಾಗಿ ಪರಿವರ್ತಿಸುವುದು, 2019ರೊಳಗೆ ದೇಶವನ್ನು ಬಯಲುಶೌಚ ಮುಕ್ತವಾಗಿಸುವುದು ಈ ಅಭಿಯಾನದ ಉದ್ದೇಶವಾಗಿತ್ತು.
Related Articles
ಎಂಬ ಪದಪ್ರಯೋಗ
ಬ್ರಿಟಿಷರಿಂದ ಭಾರತವನ್ನು ಸ್ವತಂತ್ರಗೊಳಿಸಲು ಅಹಿಂಸಾತ್ಮಕ ಜನಾಂದೋಲನ ರೂಪಿಸುವ ವೇಳೆ ಮಹಾತ್ಮ ಗಾಂಧಿ ಅವರು “ಸತ್ಯಾಗ್ರಹ’ ಎಂಬ ಪದವನ್ನು ಬಳಸಿದ್ದರು. ಈಗ ಇದೇ ಪದದ ಮಾದರಿಯಲ್ಲೇ ಹೊಸ ಪದ ಪ್ರಯೋಗ ಮಾಡಿದ್ದಾರೆ ಪ್ರಧಾನಿ ಮೋದಿ. ಅದೆಂದರೆ, “ಸ್ವಚ್ಛಾಗ್ರಹ’. ಸೋಮವಾರದ ಭಾಷಣದ ವೇಳೆ ಮೋದಿ ಅವರು, “ಸ್ವಚ್ಛಾಗ್ರಹಿಗಳ ಸಿದ್ಧಿ ಮತ್ತು ಬದ್ಧತೆಯಿಂ ದಾಗಿಯೇ ಸ್ವಚ್ಛ ಭಾರತವು ಜನಾಂದೋಲನ ವಾಗಿ ರೂಪುಗೊಂಡಿದೆ’ ಎಂದರು.
Advertisement
ರಾಜಕೀಯ ಬೇಡಸ್ವಚ್ಛ ಭಾರತದ ವಿಚಾರದಲ್ಲಿ ಯಾರೂ ರಾಜಕೀಯ ಮಾಡು ವುದುಸಲ್ಲ. ಮೋದಿ ಅವರನ್ನು ಟೀಕಿಸಲು ಬೇರೆ ಬೇರೆ ವಿಷಯಗಳು ಸಿಗುತ್ತವೆ. ಅಂಥ ಸಾವಿರಾರು ವಿಚಾರಗಳನ್ನು ಹುಡುಕಿಕೊಡುವವರೂ ಸಾಕಷ್ಟಿದ್ದಾರೆ. ಆದರೆ, ಯಾರಾದರೂ ಸ್ವಚ್ಛತೆಯ ಕೆಲಸದಲ್ಲಿ ತೊಡಗಿದ್ದರೆ ಅವರನ್ನು ಧೈರ್ಯಗುಂದಿ ಸುವ ಕೆಲಸವನ್ನು ಮಾತ್ರ ಮಾಡಬೇಡಿ ಎನ್ನುತ್ತಾ ಟೀಕಾಕಾರ ರಿಗೂ ಚುಚ್ಚಿದರು ಮೋದಿ. ಇದಕ್ಕೂ ಮೊದಲು ಮೋದಿ ಅವರು ರಾಜ್‌ಘಾಟ್ ಮತ್ತು ವಿಜಯ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರ ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಅವರೂ ಬಾಪೂಗೆ ಗೌರವ ಸಲ್ಲಿಸದರು. ವಿದೇಶಗಳಲ್ಲೂ ಬಾಪೂಗೆ ನಮನ
ಗಾಂಧೀಜಿಯವರ 148ನೇ ಜಯಂತಿಯನ್ನು ಭಾರತದಲ್ಲಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಹಲವೆಡೆ ಆಚರಿಸಲಾಯಿತು. ಚೀನಾದಲ್ಲಿ ಚಾವ್‌ಯಾಂಗ್ ಪಾರ್ಕ್‌ನಲ್ಲಿ ಸೇರಿದ್ದ ಸಾವಿರಾರು ಮಂದಿ ಭಜನೆಗಳ ಮೂಲಕ ಗಾಂಧೀಜಿಯನ್ನು ಸ್ಮರಿಸಿದರು. 2005ರಲ್ಲೇ ಇಲ್ಲಿ ಕಲಾವಿದ ಯುವಾನ್ ಕ್ಸಿಕುನ್ ಅವರು ಮಹಾತ್ಮನ ಪ್ರತಿಮೆಯೊಂದನ್ನು ರಚಿಸಿದ್ದು, ಅಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳೂ ಸೇರಿದ್ದರು. ಇದೇ ವೇಳೆ, ನೆದರ್ಲೆಂಡ್‌ನ ಹೇಗ್‌ನಲ್ಲಿ ವಿವಿಧ ದೇಶಗಳ, ವಯೋಮಾನದ 800ರಷ್ಟು ಮಂದಿ “ಗಾಂಧಿ ರ್ಯಾಲಿ’ ನಡೆಸಿ, ಅಹಿಂಸೆ ಮತ್ತು ಶಾಂತಿಯ ಸಂದೇಶವನ್ನು ಸಾರಿದರು. ಇಲ್ಲಿ ಭಾನುವಾರವೇ “ಫಾಲೋ ದಿ ಮಹಾತ್ಮ’ ಎಂಬ ಅಭಿಯಾನ ಆರಂಭವಾಗಿತ್ತು.