Advertisement
ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಶಾಲಾ ಬಳಿ ನಿವಾಸಿ ಆಮ್ನಿ ಚಾಲಕ ರಾಜೇಶ್ ಶೆಟ್ಟಿ (50) ಮೃತಪಟ್ಟವರು. ಅವರು ಹೆದ್ದಾರಿಯಲ್ಲಿ ಬಿ.ಸಿ. ರೋಡಿನಿಂದ ಬ್ರಹ್ಮರಕೂಟ್ಲು ಕಡೆಗೆ ತೆರಳುತ್ತಿದ್ದು, ತಲಪಾಡಿ ತಲುಪುತ್ತಿದ್ದಂತೆ ಪಿಕಪ್ ಚಾಲಕ ಇರ್ಷಾದ್ ರಾಂಗ್ ಸೈಡಿನಿಂದ ವಾಹನ ಚಲಾಯಿಸಿದ್ದು, ಈ ವೇಳೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾಲಿಗೆ ಗಂಭೀರ ಗಾಯಗೊಂಡಿದ್ದ ರಾಜೇಶ್ ಅವರನ್ನು ತತ್‌ಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪಿಕಪ್ ವಾಹನ ರಾಂಗ್ ಸೈಡಿನಿಂದ ತೆರಳಿ ಈ ರೀತಿ ಅಪಘಾತಕ್ಕೆ ಕಾರಣವಾಗಿರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಬೆಕ್ಕನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಹಿಂದಿರುಗುವ ವೇಳೆ ಘಟನೆ ನಡೆದಿದ್ದು, ತಮ್ಮ ಪ್ರಾಣಪಕ್ಷಿಯೇ ಹಾರಿ ಹೋಗಿದೆ. ಆಮ್ನಿಯಲ್ಲಿದ್ದ ಬೆಕ್ಕು ಕೂಡ ಸ್ಥಳದಲ್ಲೇ ಮೃತಪಟ್ಟಿದೆ. ಬೆಕ್ಕಿನ ಮೃತದೇಹವೂ ಅ ಬಿದ್ದಿಕೊಂಡಿದ್ದು, ಮನ ಕಲುಕುವಂತಿತ್ತು. ಪಂಪ್‌ಹೌಸ್ ಆಪರೇಟರ್ ಮೃತ ರಾಜೇಶ್ ಶೆಟ್ಟಿ ಅವರು ಮನಪಾ ತುಂಬೆ ಪಂಪ್‌ಹೌಸ್‌ನಲ್ಲಿ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದು, ವಿವಾಹಿತರಾಗಿದ್ದ ಅವರಿಗೆ ಮಕ್ಕಳಿಲ್ಲ. ಪರೋಪಕಾರಿ ವ್ಯಕ್ತಿತ್ವದ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು.