ಕಲಬುರಗಿ: ಜೇವರ್ಗಿ ತಾಲೂಕಿನ ಜೈನಾಪುರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ನಂತರ ನಡೆದ ಗಲಾಟೆಯಲ್ಲಿ ತಾಯಿಯೊಂದಿಗೆ ಜೈಲು ಸೇರಿದ್ದ ಬಾಲಕಿ ಭಾರತಿ ಸಾವಿನ ಪ್ರಕರಣದಲ್ಲಿ ಜೇವರ್ಗಿ ಪಿಎಸ್‌ಐ ಮಂಜುನಾಥ ಹೂಗಾರಅವರನ್ನು ಸೋಮವಾರ ಅಮಾನತುಗೊಳಿಸಲಾಗಿದೆ. ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಪಿಎಸ್‌ಐ ಮಂಜುನಾಥ ಹೂಗಾರ ಅವರನ್ನು ಅಮಾನತುಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾರ್ಜ್ ಆದೇಶಿಸಿದ್ದಾರೆ.
ಜೈನಾಪುರದಲ್ಲಿ ಗ್ರಾಪಂ ಚುನಾವಣೆ ವಿಜೇತ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಜು ಸಾಯಿಬಣ್ಣ ತಳವಾರ ಮತ್ತು ಬೆಂಬಲಿಗರು ಪರಾಜಿತಗೊಂಡಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಂತೋಷ ತಳವಾರಮುಂದೆ ವಿಜಯೋತ್ಸವ ಮಾಡಿದ್ದರು. ಈ ವೇಳೆಗಲಾಟೆ ನಡೆದಿತ್ತು. ನಂತರ ಎರಡೂ ಕಡೆಗಳಿಂದದೂರು-ಪ್ರತಿದೂರು ದಾಖಲಾಗಿತ್ತು. ಆದರೆ, ಪ್ರಕರಣ ದಾಖಲಿಸುವಲ್ಲಿ ಮತ್ತು ಬಂಧಿಸುವಲ್ಲಿ ಪಿಎಸ್‌ಐ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಿಲ್ಲ. ಕೇವಲ ಸಂತೋಷ ತಳವಾರ ಕುಟುಂಬದವರನ್ನು ಮಾತ್ರ ಬಂಧಿಸಿದ್ದಾರೆ.
ಬಂಧಿತರಾದ ಸಂತೋಷ ಸಹೋದರ ರವಿ ಮತ್ತು ಅತ್ತಿಗೆ ಸಂಗೀತಾ ಅವರೊಂದಿಗೆ ಬಾಲಕಿ ಭಾರತಿಯನ್ನು ಜೈಲಿಗೆ ಕಳುಹಿಸಲಾಗಿತ್ತು. ಇದಕ್ಕೂ ಮುನ್ನ ಜೈಲಿನಲ್ಲಿ ಸಂಗೀತಾ ಪೊಲೀಸರು ಥಳಿಸುವಾಗ ಬಾಲಕಿಗೆ ಪೆಟ್ಟಾಗಿತ್ತು. ಹೀಗಾಗಿ ಜೈಲಿನಲ್ಲಿ ಅಸ್ವಸ್ಥಗೊಂಡು ಬಾಲಕಿ ಸಾವನ್ನಪ್ಪುವಂತೆ ಆಗಿದೆ. ಇದಕ್ಕೆ ಪಿಎಸ್‌ಐ ಮಂಜುನಾಥ ಹೂಗಾರ ಅವರೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದರು.
ಅಲ್ಲದೇ, ಜಿಲ್ಲಾಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ರವಿವಾರ 10 ಗಂಟೆ ಕಾಲ ಧರಣಿ ನಡೆಸಲಾಗಿತ್ತು.ಜೇವರ್ಗಿ ಶಾಸಕರಾದ ಕಾಂಗ್ರೆಸ್ ಮುಖ್ಯ ಸಚೇತಕಡಾ.ಅಜಯಸಿಂಗ್ ಮತ್ತು ಕೋಲಿ ಸಮಾಜದಮುಖಂಡರು ಹೋರಾಟದಲ್ಲಿ ಪಾಲ್ಗೊಂಡುಪಿಎಸ್‌ಐ ಅಮಾನತಿಗೆ ಆಗ್ರಹಿಸಿದ್ದರು. ಆದರೆ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕರಣದ ತನಿಖೆನಂತರ ಪಿಎಸ್‌ಐ ವಿರುದ್ಧ ಕ್ರಮ ಜರುಗಿಸುವುದಾಗಹೇಳಿದ್ದರು. ಇದಕ್ಕೆ ಒಪ್ಪದ ಕುಟುಂಬದವರು ಮತ್ತು ಮುಖಂಡರು ತಡರಾತ್ರಿವರೆಗೂ ಧರಣಿ ಕೈಗೊಂಡಿದ್ದರು.
ರಾತ್ರಿ 11 ಗಂಟೆ ಸುಮಾರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಶಾಸಕ ಡಾ.ಅಜಯಸಿಂಗ್‌ಮತ್ತು ಮಾಜಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌ಮತ್ತು ಮುಖಂಡರೊಂದಿಗೆ ದೂರವಾಣಿಯಲ್ಲಿಮಾತನಾಡಿದ್ದರು. 24 ಗಂಟೆಯೊಳಗೆ ಪಿಎಸ್‌ಐ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರುಭರವಸೆ ನೀಡಿದ್ದರು. ಹೀಗಾಗಿ ರಾತ್ರಿ ಧರಣಿಕೈಬಿಡಲಾಗಿತ್ತು. ಗೃಹ ಸಚಿವರ ಹೇಳಿಕೆಯಂತೆ 24ಗಂಟೆಯೊಳಗೆ ಕರ್ತವ್ಯ ಲೋಪ ವಹಿಸಿದ ಪಿಎಸ್‌ಐ ಮಂಜುನಾಥ ಅವರನ್ನು ಎಸ್‌ಪಿ ಅಮಾನತು ಮಾಡಿದ್ದಾರೆ. ಈ ಪ್ರಕರಣದ ತನಿಖೆಯನ್ನು ಹೆಚ್ಚುವರಿಎಸ್‌ಪಿ ಪ್ರಸನ್ನ ದೇಸಾಯಿ ನೇತೃತ್ವದಲ್ಲಿ ನಡೆಸುತ್ತಿದ್ದು,ತನಿಖೆ ಮುಂದುವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.