ನವದೆಹಲಿ: ಭಾರತದಲ್ಲಿ ಓಮಿಕ್ರಾನ್ ಮತ್ತು ಅದರ ಉಪ ತಳಿಗಳ ಸೋಂಕು ಹರಡುತ್ತಿರುವುದರಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ಇಂಡಿಯನ್ ಸಾರ್ಸ್ Cov-2 ಜೆನೋಮಿಕ್ಸ್ ಕಾನ್ಸೋರ್ಟಿಯಂ (ಐಎನ್ ಎಸಿಎಜಿ) ವಾರದ ಪರಿಶೀಲನಾ ಸಭೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಮಲೆನಾಡಲ್ಲಿ ಮಳೆಯ ಅಬ್ಬರ : ನಾಟಿಗೆ ಸಜ್ಜಾಗಿದ್ದ ಭತ್ತದ ಗದ್ದೆಯಲ್ಲಿ ಭೂಕುಸಿತ, ಕಂಗಾಲಾದ ರೈತ
“ನಾವು ಪ್ರತಿ ವಾರ ಅಂಕಿಅಂಶವನ್ನು ಪರಿಶೀಲಿಸುತ್ತೇವೆ. ಆದರೆ ಕೋವಿಡ್ ಸೋಂಕಿನ ಬಗ್ಗೆ ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಈವರೆಗೂ ಹೊಸ ತಳಿಗಳು ಕೂಡಾ ಪತ್ತೆಯಾಗಿಲ್ಲ” ಎಂದು ವಿವರಿಸಿದೆ.
ಐಎನ್ ಎಸಿಎಜಿ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಭಾರತದಲ್ಲಿ ಈಗ ಓಮಿಕ್ರಾನ್ ಮತ್ತು ಅದರ ಉಪ ತಳಿಗಳು ಹೆಚ್ಚಾಗಿ ಹರಡುತ್ತಿರುವುದಾಗಿ ಹೇಳಿದೆ. BA.2.75 ಉಪ ತಳಿ ಅಧಿಕವಾಗಿ ರೂಪಾಂತರ ಹೊಂದುತ್ತಿದ್ದು, ಇದರ ಬಗ್ಗೆ ಸೂಕ್ಷ್ಮವಾಗಿ ನಿಗಾವಹಿಸಲಾಗಿದೆ ಎಂದು ತಿಳಿಸಿದೆ.
ಕೋವಿಡ್ 19 ಇತರ ಸೋಂಕಿನ ರೀತಿ ಆವರ್ತಕ ಕಾಯಿಲೆಯಾಗಿದೆ. ದಡಾರ ಅಥವಾ ಚಿಕನ್ ಪಾಕ್ಸ್ ವೈರಸ್ ಗಳಿಗಿಂತ ಕೋವಿಡ್ ಸೋಂಕಿನಲ್ಲಿ ರೋಗನಿರೋಧಕ ಅಲ್ಪಕಾಲದ್ದಾಗಿರುತ್ತದೆ. ಈ ಬಗ್ಗೆ ಜನರು ಹೆಚ್ಚಿನ ನಿಗಾ ವಹಿಸಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕೋವಿಡ್ ಟಾಸ್ಕ್ ಪೋರ್ಸ್ ನ ಅಧ್ಯಕ್ಷ ಡಾ. ರಾಜೀವ್ ಜಯದೇವನ್ ತಿಳಿಸಿದ್ದಾರೆ.