Advertisement

ಶಿರಡಿ: ರಾತ್ರಿ 9ರ ಬಳಿಕ ದರ್ಶನ ಇಲ್ಲ

12:24 AM Dec 27, 2021 | Team Udayavani |

ಶಿರಡಿ: ಒಮಿಕ್ರಾನ್‌ ಆತಂಕದ ನಡುವೆ ಹೊಸ ವರ್ಷ ಮತ್ತು ಸರಣಿ ರಜೆ ಹಿನ್ನೆಲೆಯಲ್ಲಿ ಶಿರಡಿ ಸಾಯಿ ಮಂದಿರದಲ್ಲಿ ಜನಸಂದಣಿ ತಪ್ಪಿಸಲು ಮಂದಿರದ ಆಡಳಿತವು ಹೊಸ ನಿಯಮಗಳನ್ನು ಜಾರಿಗೊಳಿಸಿದೆ.

Advertisement

ಹೊಸ ನಿಯಮಗಳ ಪ್ರಕಾರ ಭಕ್ತರು ಬೆಳಗ್ಗೆ 6ರಿಂದ ರಾತ್ರಿ 9ರ ವರೆಗೆ ದರ್ಶನ ಪಡೆಯಬಹುದು. ರಾತ್ರಿ 9 ಗಂಟೆಯ ಅನಂತರ ರಾಜ್ಯದಲ್ಲಿ ಕರ್ಫ್ಯೂ ಹೇರಲಾಗಿರುವುದರಿಂದ ದೇಗುಲವನ್ನು ಮುಚ್ಚಲಾಗುತ್ತದೆ.

ಬೆಳಗಿನ ಕಾಕಡ್‌ ಆರತಿ ಮತ್ತು ಶೇಜ್‌ ಆರತಿಗೆ ಭಕ್ತರಿಗೆ ಪ್ರವೇಶ ನೀಡಲಾಗುವುದಿಲ್ಲ. ಕೆಲವು ಪುರೋಹಿತರ ಸಮ್ಮುಖದಲ್ಲಿ ಕಾಕಡ್‌ ಆರತಿ ನಡೆಯಲಿದೆ. ಭಕ್ತರು ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ದೇವಸ್ಥಾನ ಮತ್ತು ಜಿಲ್ಲಾಡಳಿತವು ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next