Advertisement

ರೂಪಾಂತರಿ ಭೀತಿ ನಡುವೆ “ಎ’ತಂಡಗಳ ಟೆಸ್ಟ್‌

11:23 PM Nov 29, 2021 | Team Udayavani |

ಬ್ಲೋಮ್‌ಫಾಂಟೇನ್‌: ದಕ್ಷಿಣ ಆಫ್ರಿಕಾದಲ್ಲೇ ಹುಟ್ಟಿಕೊಂಡಿತೆನ್ನಲಾದ ಒಮಿಕ್ರಾನ್‌ ವೈರಸ್‌ ಭೀತಿಯಿಂದಾಗಿ ಇಲ್ಲಿ ಹಾಗೂ ಜಿಂಬಾಬ್ವೆಯಲ್ಲಿ ನಡೆಯಬೇಕಿದ್ದ ಕೆಲವು ಕ್ರೀಡಾಕೂಟಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ.

Advertisement

ಆದರೆ ದಕ್ಷಿಣ ಆಫ್ರಿಕಾ “ಎ’ ಮತ್ತು ಪ್ರವಾಸಿ ಭಾರತ “ಎ’ ತಂಡಗಳ ನಡುವಿನ ದ್ವಿತೀಯ ಚತುರ್ದಿನ ಅನಧಿಕೃತ ಟೆಸ್ಟ್‌ ಪಂದ್ಯಕ್ಕೆ ಇದರಿಂದ ಯಾವುದೇ ಆತಂಕ ಎದುರಾದಂತಿಲ್ಲ. ಇದು ನಿಗದಿಯಂತೆ ಮಂಗಳವಾರ ಆರಂಭವಾಗಲಿದೆ.

ಭಾರತ “ಎ’ ತಂಡ ಬ್ಲೋಮ್‌ಫಾಂಟೇನ್‌ನಲ್ಲಿ ಜೈವಿಕ ಸುರಕ್ಷಾ ವಲಯದಲ್ಲಿರುವುದರಿಂದ ಟೆಸ್ಟ್‌ ಸರಣಿ ವೇಳಾಪಟ್ಟಿಯಂತೆ ಮುಂದುವರಿಯುವ ಸಾಧ್ಯತೆ ಇದೆ.

ಆದರೆ ಟೆಸ್ಟ್‌ ಸರಣಿ ಬಳಿಕ 3 ಏಕದಿನ, 4 ಟಿ20 ಪಂದ್ಯಗಳನ್ನು ಆಡಬೇಕಿದೆ. ಇವುಗಳ ತಾಣಗಳೆಂದರೆ ಜೊಹಾನ್ಸ್‌ ಬರ್ಗ್‌, ಸೆಂಚುರಿಯನ್‌, ಪಾರ್ಲ್ ಮತ್ತು ಕೇಪ್‌ಟೌನ್‌. ಆದರೆ ಇಲ್ಲಿನ ಪರಿಸ್ಥಿತಿ ಯನ್ನು ಅವಲೋಕಿಸಿದ ಬಳಿಕ ಬಿಸಿಸಿಐ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ:ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

Advertisement

ಬ್ಯಾಟಿಂಗ್‌ ಟ್ರ್ಯಾಕ್‌
ಮೊದಲ ಪಂದ್ಯ ಮಳೆಯ ಹೊಡೆತಕ್ಕೆ ಸಿಲುಕಿತ್ತು. ಆತಿಥೇಯ ತಂಡ 7 ವಿಕೆಟಿಗೆ 509 ರನ್‌ ಪೇರಿಸಿದರೆ, ಜವಾಬು ನೀಡಿದ ಭಾರತ “ಎ’ 4 ವಿಕೆಟಿಗೆ 308 ರನ್‌ ಮಾಡಿತ್ತು. ಅಭಿಮನ್ಯು ಈಶ್ವರನ್‌ 103, ನಾಯಕ ಪ್ರಿಯಾಂಕ್‌ ಪಾಂಚಾಲ್‌ 96 ಬಾರಿಸಿ ಮಿಂಚಿದ್ದರು. ಪೃಥ್ವಿ ಶಾ 48 ರನ್‌ ಮಾಡಿದ್ದರು. ನ್ಯೂಜಿಲ್ಯಾಂಡ್‌ ಎದುರಿನ ಟೆಸ್ಟ್‌ ಸರಣಿಗೆ ಆಯ್ಕೆಯಾಗದ ಹನುಮ ವಿಹಾರಿ ಪಾಲಿಗೆ ಇದು ಮಹತ್ವದ ಸರಣಿ.

 

Advertisement

Udayavani is now on Telegram. Click here to join our channel and stay updated with the latest news.

Next