Advertisement
ಭಾರತದಲ್ಲಿ ಈಗಾಗಲೇ ಹಲವಾರು ಜನರು ಕೊರೊನಾ ಲಸಿಕೆ ಪಡೆದಿರುವುದರಿಂದ ಈ ರೂಪಾಂತರಿ ಅಂಥ ಅಪಾಯ ಉಂಟು ಮಾಡುವುದಿಲ್ಲ ಎಂದು “ಸೆಂಟರ್ ಫಾರ್ ಡಿಸೀಸ್ ಡೈನಮಿಕ್ಸ್’ನ ಮುಖ್ಯಸ್ಥರೂ ಆಗಿರುವ ಅವರು ಹೇಳಿದ್ದಾರೆ.
Related Articles
ಆದರೆ ಇವರಲ್ಲಿ ಹೆಚ್ಚಿನವರು ಆಸ್ಪತ್ರೆಗೆ ಹೋಗುವಂಥ ಸ್ಥಿತಿಗೆ ತಲುಪಿಲ್ಲ. ಇನ್ನು, ಆಸ್ಪತ್ರೆಗೆ ಸೇರಿದವರಲ್ಲಿ ಯಾರೂ ಐಸಿಯುನಲ್ಲಿ ಚಿಕಿತ್ಸೆ ಪಡೆದ ಬಗ್ಗೆ ವರದಿಗಳಾಗಿಲ್ಲ.
Advertisement
ಇದನ್ನೂ ಓದಿ:ತನ್ನ ಕಾರು ತಡೆದರೆಂದು ಪೊಲೀಸರಿಗೆ ಅಮಾನತು ಬೆದರಿಕೆ ಹಾಕಿದ ಬಿಹಾರ ಸಚಿವ !
ಒಮಿಕ್ರಾನ್ ಬಗ್ಗೆ ಎಚ್ಚರವಿರಲಿ: ಒಮಿಕ್ರಾನ್ ರೂಪಾಂತರಿ ಹೆಚ್ಚು ಪರಿಣಾಮಕಾರಿಯೋ ಅಥವಾ ಇಲ್ಲವೋ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಸದ್ಯ ಈ ವೈರಸ್ ಯುವಕರಲ್ಲಿ ಹೆಚ್ಚಾಗಿ ಪತ್ತೆಯಾಗಿದೆ. ಹೀಗಾಗಿ ಅವರಲ್ಲಿ ಇದರ ಪರಿಣಾಮ ಕಡಿಮೆ ಇರಬಹುದು. ಆದರೆ ವೃದ್ಧರಲ್ಲಿ ಇದು ಹೆಚ್ಚಾಗಿ ಕಂಡುಬಂದರೆ, ಅದರ ದುಷ್ಪರಿ ಣಾಮವೇನು ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಲಸಿಕೆ ಕಡ್ಡಾಯ: ದಿಲ್ಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದ 4 ಪ್ರಯಾಣಿಕರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಏರ್‌ಪೋರ್ಟ್ ನಲ್ಲಿ ಪರೀಕ್ಷೆ ಹೆಚ್ಚಳ ಮಾಡಲಾಗಿದೆ. ಅಲ್ಲದೆ, ಒಮಿಕ್ರಾನ್ ತಡೆಯುವ ಸಲುವಾಗಿ ಎಲ್ಲ ನಾಗರಿಕರು ಒಂದು ಡೋಸ್ ಆದರೂ ಲಸಿಕೆ ಪಡೆಯಬೇಕು. ಆಗ ಮಾತ್ರ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನೀಡಲಾಗುತ್ತದೆ ಎಂಬ ನಿಯಮ ರೂಪಿಸಲು ದಿಲ್ಲಿ ಸರಕಾರ ಮುಂದಾಗಿದೆ.
ಮಹಾರಾಷ್ಟ್ರದಲ್ಲಿ ಲಸಿಕೆ ಕಡ್ಡಾಯಒಮಿಕ್ರಾನ್ ಆತಂಕದ ನಡುವೆಯೇ ಮಹಾರಾಷ್ಟ್ರ ಸರಕಾರ ಹೆಚ್ಚು ಕಡಿಮೆ ಎಲ್ಲ ನಾಗರಿಕರಿಗೂ ಲಸಿಕೆಯನ್ನು ಕಡ್ಡಾಯ ಮಾಡಿದೆ. ಅಂದರೆ ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಯಾವುದೇ ಸಾರ್ವಜನಿಕ ಸ್ಥಳಗಳಿಗೆ ಹೋಗಬೇಕಾದರೆ ಕಡ್ಡಾಯವಾಗಿ ಎರಡೂ ಡೋಸ್ ಲಸಿಕೆ ಪಡೆದಿರಲೇಬೇಕು. ಬಸ್, ಮೆಟ್ರೋ, ರೈಲು, ಮಾಲ್‌ಗಳು, ಶಾಪ್‌ಗಳು ಸೇರಿದಂತೆ ಎಲ್ಲ ರೀತಿಯ ಸಾರ್ವಜನಿಕ ಸ್ಥಳಗಳಿಗೂ ಲಸಿಕೆ ಕಡ್ಡಾಯವಾಗಿದೆ. ಈ ಸಂಬಂಧ ಜನರು ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ತೋರಿಸಲೇಬೇಕು. ಒಂದು ವೇಳೆ ವೈದ್ಯಕೀಯ ಕಾರಣಗಳಿಂದಾಗಿ ಲಸಿಕೆ ಪಡೆದಿಲ್ಲವಾದರೆ, ಇದಕ್ಕೂ ಸೂಕ್ತ ದಾಖಲೆ ಒದಗಿಸಬೇಕು. ಸರಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡದವರಿಗೆ 500 ರೂ.ಗಳಿಂದ 50 ಸಾವಿರ ರೂ.ಗಳ ವರೆಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ವ್ಯಕ್ತಿಗಳಿಗಾದರೆ 500 ರೂ. ಸಂಘ ಸಂಸ್ಥೆಗಳಿಗೆ 10 ಸಾವಿರದಿಂದ 50 ಸಾವಿರ ರೂ. ದಂಡ ಹಾಕಲಾಗುತ್ತದೆ. ಈ ಮಧ್ಯೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕ್ವಾರಂಟೈನ್ ಮಾಡುವ ಸಂಬಂಧ ಕೇಂದ್ರ ಮತ್ತು ಮಹಾರಾಷ್ಟ್ರ ನಡುವಿನ ತಿಕ್ಕಾಟ ಅಂತ್ಯಗೊಂಡಿದೆ. ಈ ಹಿಂದೆ ಹೊರಡಿಸಿದ್ದ ಮಾರ್ಗಸೂಚಿಗಳಿಗೆ ತಿದ್ದುಪಡಿ ಮಾಡಿರುವ ಮಹಾರಾಷ್ಟ್ರ ಸರಕಾರ, ಆರು ಹೈರಿಸ್ಕ್ ದೇಶಗಳಿಂದ ಬರುವವರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಕಡ್ಡಾಯ ಮತ್ತು ಕೇಂದ್ರ ಸರಕಾರದ ನಿಯಮಗಳಂತೆ ಕ್ವಾರಂಟೈನ್ ಆಗಬೇಕು ಎಂದಿದೆ. ಅಂದರೆ, ಏಳು ದಿನ ಸಾಂಸ್ಥಿಕ ಮತ್ತು ಏಳು ದಿನ ಹೋಂ ಐಸೋಲೇಶನ್‌ನಲ್ಲಿ ಇರಬೇಕು.