ನವದೆಹಲಿ: ದೇಶದಲ್ಲಿನ ಪ್ರಸ್ತುತ ಕೋವಿಡ್ ಹೆಚ್ಚಳದ ಪರಿಸ್ಥಿತಿಯಲ್ಲಿ ಬೃಹತ್ ಚುನಾವಣಾ ರಾಲಿ ಹಾಗೂ ರೋಡ್ ಶೋ ನಡೆಸುವುದು ಸೂಕ್ತವಲ್ಲ ಎಂದು ನೀತಿ ಆಯೋಗದ ಸದಸ್ಯ, ಭಾರತದ ಕೋವಿಡ್ ಟಾಸ್ಕ್ ಫೋರ್ಟ್ ಮುಖ್ಯಸ್ಥ ಡಾ.ವಿ.ಕೆ.ಪೌಲ್ ಅವರು ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ:ಶ್ರೀರಂಗಪಟ್ಟಣ: ಮೊಬೈಲ್ ತಂದ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿ ಕೂಡಿ ಹಾಕಿದ ಶಿಕ್ಷಕಿ
ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಬೃಹತ್ ಚುನಾವಣಾ ರಾಲಿ ಮತ್ತು ರೋಡ್ ಶೋಗಳಿಗೆ ಚುನಾವಣಾ ಆಯೋಗ ಕಡಿವಾಣ ಹಾಕಲು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಉತ್ತರಪ್ರದೇಶ, ಉತ್ತರಾಖಂಡ್, ಗೋವಾ, ಪಂಜಾಬ್ ಮತ್ತು ಮಣಿಪುರ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಸಿದ್ಧತೆ ನಡೆಸುತ್ತಿರುವುದಾಗಿ ಈ ಮೊದಲು ಚುನಾವಣಾ ಆಯೋಗ ಹೇಳಿಕೆ ನೀಡಿತ್ತು. ಅಲ್ಲದೇ ಈ ನಿಟ್ಟಿನಲ್ಲಿ ಲಸಿಕೆ ನೀಡುವಿಕೆಯನ್ನು ಹೆಚ್ಚಳ ಮಾಡಬೇಕೆಂದು ಸೂಚಿಸಿತ್ತು.
ಆದರೆ ಕೋವಿಡ್ ನ ನೂತನ ರೂಪಾಂತರ ತಳಿ ಒಮಿಕ್ರಾನ್ ಕ್ರಿಪ್ರವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಕಳವಳಕ್ಕೆ ಎಡೆಮಾಡಿಕೊಟ್ಟಿದೆ. ಏತನ್ಮಧ್ಯೆ ಆಯೋಗ ಸಿಬಂದಿಗಳ ಹೆಚ್ಚಳ, ಚುನಾವಣಾಧಿಕಾರಿಗಳಿಗೆ ಲಸಿಕೆ ನೀಡುವಿಕೆ ಹಾಗೂ ಮತಗಟ್ಟೆಗಳ ಹೆಚ್ಚಳ ಮಾಡುವ ಬಗ್ಗೆ ಆಯೋಗ ಚರ್ಚೆ ನಡೆಸಿತ್ತು.
ಉತ್ತರಪ್ರದೇಶ, ಪಂಜಾಬ್ ಮತ್ತು ಮಣಿಪುರದಲ್ಲಿ ಕೋವಿಡ್ ಮೊದಲ ಡೋಸ್ ನೀಡಿರುವ ಪ್ರಮಾಣ ಭಾರೀ ಕಡಿಮೆ ಸಂಖ್ಯೆಯಲ್ಲಿದೆ. ಉತ್ತರಾಖಂಡ್ ಮತ್ತು ಗೋವಾದಲ್ಲಿ ಶೇ.90ರಷ್ಟು ಪ್ರಗತಿ ಸಾಧಿಸಿದೆ ಎಂದು ವರದಿ ವಿವರಿಸಿದೆ.