Advertisement
ಒಮಿಕ್ರಾನ್ ನಿಯಂತ್ರಣ ಕುರಿತು ಮುನ್ನೆಚ್ಚರಿಕಾ ಕ್ರಮಗಳ ಕುರಿತು ಗುರುವಾರ ಅಧಿಕಾರಿಗಳ ಸಭೆ ನಡೆಸಿದರು.ಮತ್ತೆ ಕ್ವಾರಂಟೈನ್, ಐಸೊಲೇಶನ್ 11 ದೇಶಗಳಲ್ಲಿ ಒಮಿಕ್ರಾನ್ ಹರಡಿದ್ದು, ಅಂತಹ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರನ್ನು ತಪ್ಪದೆ ಪರೀಕ್ಷೆಗೆ ಒಳಪಡಿಸ ಬೇಕು. ವರದಿ ನೆಗೆಟಿವ್ ಬಂದಲ್ಲಿ 7 ದಿನಗಳ ಹೋಂ ಕ್ವಾರಂಟೈನ್ ಮಾಡಬೇಕು. ಪಾಸಿಟಿವ್ ಬಂದಲ್ಲಿ 14 ದಿನಗಳ ಕಾಲ ಸಾಂಸ್ಥಿಕ ಐಸೊಲೇಶನ್/ಆಸ್ಪತ್ರೆಗೆ ದಾಖಲಿಸಬೇಕು. 15 ದಿನಗಳಿಂದ ಜಿಲ್ಲೆಗೆ ವಿದೇಶದಿಂದ ಬಂದವರ ಮಾಹಿತಿ ಪಡೆದು ಪರೀಕ್ಷೆಗೆ ಒಳಪಡಿಸಬೇಕು ಎಂದರು.
ಸೋಂಕು ಹೆಚ್ಚಾದಲ್ಲಿ ಅವುಗಳ ನಿರ್ವಹಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಕೋವಿಡ್ ಕೇರ್ ಸೆಂಟರ್ ತೆರೆಯಲು ಸ್ಥಳಗಳನ್ನು ಗುರುತಿಸಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಆಕ್ಸಿಜನ್ ಸಹಿತ/ ರಹಿತ, ಐಸಿಯು ಬೆಡ್‌ಗಳು ಹಾಗೂ ಅವುಗಳ ನಿರ್ವಹಣ ಮಾಹಿತಿಯನ್ನು ಸಂಬಂಧಿಸಿದ ಸಮಿತಿಯವರು ಸಂಗ್ರಹಿಸಿ ಟ್ಟುಕೊಳ್ಳಬೇಕು ಎಂದರು. ಜಿ.ಪಂ. ಸಿಇಒ ಡಾ| ನವೀನ್ ಭಟ್ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಮೊದಲನೇ ಮತ್ತು 2ನೇ ಅಲೆಯಲ್ಲಿ ಅಧಿಕಾರಿಗಳನ್ನು ಒಳಗೊಂಡ ಸಮಿತಿಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಿವೆ. ಮುಂಬರುವ ಅಲೆಯನ್ನು ಎದುರಿಸಲು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಲು ಸನ್ನದ್ಧರಾಗಿರುವಂತೆ ಸೂಚನೆ ನೀಡಿದರು.
Related Articles
Advertisement
ಕಂಟೈನ್ಮೆಂಟ್ ವಲಯ, ಸೀಲ್‌ಡೌನ್3 ಮತ್ತು 4ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣ ಕಂಡುಬಂದಲ್ಲಿ ಕೂಡಲೇ ಆ ಪ್ರದೇಶವನ್ನು ಮೈಕ್ರೋ ಕಂಟೈನ್ಮೆಂಟ್ ವಲಯ ಎಂದು ಘೋಷಿಸಬೇಕು. ಒಂದೇ ಕಡೆ ಕಂಡುಬಂದರೆ ಆ ಮನೆಯನ್ನು ಸೀಲ್‌ಡೌನ್ ಮಾಡಬೇಕು. ಕೆಪಿಎಂಇ ಅಡಿಯಲ್ಲಿ ನೊಂದಾಯಿಸಿರುವ ಕ್ಲಿನಿಕ್‌ನ ವೈದ್ಯರು ಹಾಗೂ ಎಲ್ಲ ಔಷಧ ಮಾರಾಟಗಾರರು ಶೀತ, ಕೆಮ್ಮು ಜ್ವರಕ್ಕೆ ಚಿಕಿತ್ಸೆ ಹಾಗೂ ಔಷಧಗಳನ್ನು ಖರೀದಿಸುವವರ ಮಾಹಿತಿ ಪಡೆಯಬೇಕು. ಮಾಹಿತಿ ನೀಡದ ಮಾರಾಟಗಾರರಿಗೆ ದಂಡ ವಿಧಿಸಬೇಕು. ಈ ಬಗ್ಗೆ ನಿರಂತರವಾಗಿ ಫಾಲೋ ಅಪ್ ನಡೆಸುವಂತೆ ನಿರ್ದೇಶಿಸಿದರು. ಶೀಘ್ರ ಪರೀಕ್ಷಾ ವರದಿ
ಕೋವಿಡ್ ಪರೀಕ್ಷಾ ನಿರ್ವಹಣ ಸಮಿತಿಯು ಪ್ರತೀ ದಿನ ಕೋವಿಡ್ ಪರೀಕ್ಷೆಯ ಸ್ವಾéಬ್ ಸಂಗ್ರಹವನ್ನು ಅದೇ ದಿನ ಮಧ್ಯಾಹ್ನ ಹಾಗೂ ಸಂಜೆ 2 ಪಾಳಿಯಲ್ಲಿ ಟೆಸ್ಟಿಂಗ್ ಸೆಂಟರ್‌ಗಳಿಗೆ ರವಾನಿಸಿ ಅಂದೇ ವರದಿ ನೀಡಬೇಕು. ಕೋವಿಡ್ ಕಂಟ್ರೋಲ್ ರೂಂ ಪುನಃ ಕಾರ್ಯಾರಂಭಿಸಿ, ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಜಟಿಲ ಸಮಸ್ಯೆಗಳು ಬಂದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಮಾರ್ಗದರ್ಶನ ಮಾಡಿದರು.