Advertisement

OMG2: ಅಕ್ಷಯ್‌ ಕುಮಾರ್‌ ʼಓ ಮೈ ಗಾಡ್‌ -2ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

11:12 AM Oct 03, 2023 | Team Udayavani |

ಮುಂಬಯಿ: ಅಕ್ಷಯ್‌ ಕುಮಾರ್‌ ಅವರಿಗೆ ಹಿಟ್‌ ತಂದುಕೊಟ್ಟ ʼಓ ಮೈ ಗಾಡ್-2‌ʼ ಸಿನಿಮಾ ಥಿಯೇಟರ್‌ ನಲ್ಲಿ ಯಶಸ್ವಿ ಪ್ರದರ್ಶನ ಕಂಡ ಬಳಿಕ ಇದೀಗ ಓಟಿಟಿ ರಿಲೀಸ್‌ ಗೆ ರೆಡಿಯಾಗಿದೆ.

Advertisement

ಆಗಸ್ಟ್‌ 11 ರಂದು ಥಿಯೇಟರ್‌ ನಲ್ಲಿ ತೆರೆಕಂಡ ʼಓಮೈಗಾಡ್-2‌ʼ ಪ್ರೇಕ್ಷಕರ ಮನಗೆದ್ದಿತ್ತು. ರಿಲೀಸ್‌ ಮೊದಲು ಸಾಕಷ್ಟು ಸುದ್ದಿಯಲ್ಲಿದ್ದ ಸಿನಿಮಾ ರಿಲೀಸ್‌ ಬಳಿಕ 100 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ಬಾಕ್ಸ್‌ ಆಫೀಸ್‌ ನಲ್ಲಿ ಉತ್ತಮ ಕಮಾಯಿ ಮಾಡಿತ್ತು. ಇದರ ಜೊತೆ ಅಕ್ಷಯ್‌ ಕುಮಾರ್‌ ಅವರಿಗೆ ಒಂದು ಹಿಟ್‌ ತಂದುಕೊಟ್ಟಿತು.

ಅಮಿತ್ ರೈ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಶಿವನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.  ಲೈಂಗಿಕ ಶಿಕ್ಷಣದ ಕಥಾಹಂದರವನ್ನು‌ ಸಿನಿಮಾ ಒಳಗೊಂಡಿದೆ.

ಇದೀಗ ಸಿನಿಮಾ ಓಟಿಟಿ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಇದೇ ತಿಂಗಳ ಅಂದರೆ ಅಕ್ಟೋಬರ್‌ 8 ರಂದು ಸಿನಿಮಾ ನೆಟ್‌ ಫ್ಲಿಕ್ಸ್‌ ನಲ್ಲಿ ಸ್ಟ್ರೀಮ್‌ ಆಗಲಿದೆ ಎಂದು ಚಿತ್ರತಂಡ ಹೇಳಿದೆ.

‘OMG 2’ ನಲ್ಲಿ ಯಾಮಿ ಗೌತಮ್, ಪಂಕಜ್ ತ್ರಿಪಾಠಿ ಮತ್ತು ರಾಮಾಯಣ ಖ್ಯಾತಿಯ ಅರುಣ್ ಗೋವಿಲ್ ಕೂಡ ಕಾಣಿಸಿಕೊಂಡಿದ್ದಾರೆ.

Advertisement

ʼಓಮೈಗಾಡ್‌ -2 ಸಿನಿಮಾ ಸನ್ನಿ ಡಿಯೋಲ್‌ ಅವರ ʼಗದರ್-2‌ʼ ಯೊಂದಿಗೆ ಪೈಪೋಟಿ ಆಗಿ ರಿಲೀಸ್‌ ಆಗಿತ್ತು. ಎರಡೂ ಸಿನಿಮಾ ಕೂಡ ಈ ವರ್ಷ ಬಿಟೌನ್‌ ಹಿಟ್‌ ಲಿಸ್ಟ್‌ ಗೆ ಸೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next