Advertisement

ಶ್ರೀನಗರ –ಜಮ್ಮು ಹೆದ್ದಾರಿ ನಿಷೇಧಕ್ಕೆ ಉಮರ್‌ ಅಬ್ದುಲ್ಲ ಪ್ರತಿಭಟನೆ, ಧರಣಿ

09:19 AM Apr 11, 2019 | Sathish malya |

ಶ್ರೀನಗರ : ಶ್ರೀನಗರ – ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ವಾರಕ್ಕೆ ಎರಡು ದಿನ ನಾಗರಿಕರ ವಾಹನ ಬಳಕೆಗೆ ನಿಷೇಧಿಸಿ ರಾಜ್ಯ ಆಡಳಿತೆಯು ಹೊರಡಿಸಿರುವ ಆದೇಶವನ್ನು ಪ್ರತಿಭಟಿಸಿ ನ್ಯಾಶನಲ್‌ ಕಾನ್ಫರೆನ್ಸ್‌ ಉಪಾಧ್ಯಕ್ಷ ಉಮರ್‌ ಅಬ್ದುಲ್ಲ ಅವರು ಇಂದು ಬುಧವಾರ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದರು.

Advertisement

ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಪಂಥ ಚೌಕ್‌ ಸಮೀಪ ಅಬ್ದುಲ್ಲ ಅವರು ತಮ್ಮ ಪಕ್ಷದ ನಾಯಕರು, ಕಾರ್ಯಕರ್ತರೊಡಗೂಡಿ ಧರಣಿ ಕುಳಿತು ಆದೇಶದ ತೆರವಿಗೆ ಆಗ್ರಹಿಸಿದರು.

ಈ ತುಘಲಕ್‌ ಫ‌ರ್ಮಾನ್‌ ಹೊರಡಿಸಲಾದ ದಿನದಿಂದಲೇ ನಾವು ನಿರಂತರವಾಗಿ ಈ ಆದೇಶದ ಬಗ್ಗೆ ಮರು ಚಿಂತನೆ ನಡೆಸುವಂತೆ ಆಗ್ರಹಿಸುತ್ತಾ ಬಂದಿದ್ದೇವೆ; ಈ ರೀತಿಯ ನಿಷೇಧದ ಅಗತ್ಯವೇ ಇಲ್ಲ ಎಂದು ಉಮರ್‌ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next