ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಮಂತ್ರಿ ಬೇಕು ಎಂದು ಹೇಳಿರುವ ಎನ್‌ಸಿ ನಾಯಕ ಒಮರ್ ಅಬ್ದುಲ್ಲಾ ವಿರುದ್ಧ ಬಿಜೆಪಿ ನಾಯಕ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕಿಡಿಕಾರಿದ್ದಾರೆ. “ಜಮ್ಮು-ಕಾಶ್ಮೀರದ ಮಾಜಿ ಸಿಎಂ ಅಬ್ದುಲ್ಲಾಗೆ ಸರಿಯಾದ ನಿದ್ರೆ ಮತ್ತು ಸ್ಟ್ರಾಂಗ್ ಕಾಫಿಯ ಅಗತ್ಯವಿದೆ. ಅದಾದ ಬಳಿಕವೂ ಅವರಿಗೆ ಅರ್ಥವಾಗ ದಿದ್ದರೆ, ಹಸಿರು ಬಣ್ಣದ ಪಾಕಿಸ್ತಾನಿ ಪಾಸ್‌ಪೋರ್ಟ್‌ನ ಅಗತ್ಯಬರುತ್ತದೆ’ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಬ್ದುಲ್ಲಾ, “ಗೌತಮ್ ಅವರೇ, ನನಗೆ ಕ್ರಿಕೆಟ್ ಆಡಲು ಗೊತ್ತಿಲ್ಲ. ಹಾಗೆಯೇ ನಿಮಗೆ ಜಮ್ಮು-ಕಾಶ್ಮೀರದ ಬಗ್ಗೆ, ಅದರ ಇತಿಹಾಸದ ಬಗ್ಗೆ ಅಥವಾ ಆ ಇತಿಹಾಸ ನಿರ್ಮಿಸುವಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನ ಪಾತ್ರದ ಬಗ್ಗೆ ಗೊತ್ತಿಲ್ಲ. ನಿಮ್ಮ ಅರಿವಿನ ಕೊರತೆಯನ್ನು ಬಹಿರಂಗಪಡಿಸುವಂತೆ ನೀವೇ ಮಾಡಿದಿರಿ. ನಿಮಗೇನು ಗೊತ್ತೋ ಅದರ ಬಗ್ಗೆ ಮಾತ್ರ ಮಾತನಾಡಿ. ಐಪಿಎಲ್ ಪಂದ್ಯದ ಬಗ್ಗೆ ಟ್ವೀಟ್ ಮಾಡಿ’ ಎಂದು ಹೇಳಿದ್ದಾರೆ.
***