Advertisement

ಒಮನ್‌-ಸ್ಕಾಟ್ಲೆಂಡ್‌ ಏಕದಿನ ಸರಣಿ: 24 ರನ್ನಿಗೆ ಒಮನ್‌ ಅಲೌಟ್‌

04:43 AM Feb 20, 2019 | Team Udayavani |

ಅಲ್‌ ಅಮೆರತ್‌: ಸ್ಕಾಟ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ  ಕೇವಲ 24 ರನ್ನಿಗೆ ಅಲೌಟಾಗುವ ಮೂಲಕ ಆತಿಥೇಯ ಒಮನ್‌ ಎ-ಲಿಸ್ಟ್‌ ಕ್ರಿಕೆಟಿನಲ್ಲಿ ಅತಿ ಕಡಿಮೆ ರನ್‌ ಗಳಿಸಿದ 4ನೇ ತಂಡವೆನಿಸಿಕೊಂಡಿದೆ. 

Advertisement

3 ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನಾಡಿದ ಒಮನ್‌ 18 ಓವರ್‌ಗಳಾಗುವಷ್ಟರಲ್ಲಿ ತನ್ನೆಲ್ಲ ವಿಕೆಟ್‌ ಕಳೆದು ಕೊಂಡಿದೆ. ಒಮನ್‌ನ 6 ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಪೆವೆಲಿಯನ್‌ ಸೇರಿದ್ದರು. 3ನೇ ಕ್ರಮಾಂಕದಲ್ಲಿ ಆಡಿದ ಖವಾರ್‌ ಅಲಿ ಒಮನ್‌ನ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ (15) ಆಗಿದ್ದಾರೆ. ಸ್ಕಾಟ್ಲೆಂಡ್‌ನ‌ ಆಡ್ರಿಯನ್‌ ನೀಲ್‌ ಮತ್ತು ರೌಯಿಧ್ರಿ ಸ್ಮಿತ್‌ ತಲಾ 4 ವಿಕೆಟ್‌ ಕಿತ್ತರು. 

ಇದಕ್ಕುತ್ತರವಾಗಿ ಸ್ಕಾಟ್ಲೆಂಡ್‌ ಕೇವಲ 4 ಓವರ್‌ಗಳಲ್ಲಿ ಗುರಿ ತಲುಪಿ ಭರ್ಜರಿ ಗೆಲುವು ದಾಖಲಿಸಿದೆ. ಸ್ಕಾಟ್ಲೆಂಡ್‌ 3.2 ಓವರ್‌ ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 26 ಗಳಿಸಿ ಜಯಭೇರಿ ಬಾರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next