Advertisement
ಗೋವಾದ ಪೊಂಡಾದ ಶ್ರೀ ರಾಮನಾಥಿಯಲ್ಲಿ ನಡೆಯುತ್ತಿರುವ ವೈಶ್ವಿಕ ಹಿಂದು ರಾಷ್ಟ್ರ ಅಧಿವೇಶನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ’ ಇಂದು ಎಲ್ಲೆಡೆಯ ಚಿತ್ರವನ್ನು ನೋಡಿದರೆ ಥೂಕ ಜಿಹಾದ್,(ಉಗುಳು ಜಿಹಾದ್) ಆಕಳ ಚರ್ಮದಿಂದ ತಯಾರಿಸಿದ ತುಪ್ಪದಿಂದ ಹಿಡಿದು ಪದಾರ್ಥಗಳು, ಖವಾ, ಪೇಢೆ ಇವುಗಳನ್ನು ಪ್ರಸಾದವೆಂದು ಬಹಿರಂಗವಾಗಿ ವಿತರಿಸಲಾಗುತ್ತಿದೆ. ಭಕ್ತರು ಭಕ್ತಿಭಾವದಿಂದ ದೇವರಿಗೆ ಅದನ್ನು ಅರ್ಪಿಸುತ್ತಾರೆ. ಇದು ಒಂದು ರೀತಿಯಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ದೊಡ್ಡ ಪೆಟ್ಟಾಗಿದೆ. ಇಂದು ಅನೇಕ ತೀರ್ಥಕ್ಷೇತ್ರಗಳ ಸ್ಥಳಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದುಯೇತರ ಅಂಗಡಿಕಾರರ ಪ್ರಸಾದದ, ಪೂಜಾಸಾಹಿತ್ಯಗಳ ಅಂಗಡಿಗಳು ಇರುತ್ತವೆ. ಅವರ ಬಳಿ ಇರುವ ಪ್ರಸಾದ ಮತ್ತು ಸಾಹಿತ್ಯಗಳೂ ಶುದ್ಧ ಮತ್ತು ಪವಿತ್ರ ಇರುತ್ತವೆ ಎಂದು ಹೇಳಲು ಬರುವುದಿಲ್ಲ. ಹೊರ ಊರಿನಿಂದ ಬಂದ ಭಕ್ತರಿಗೆ ಶುದ್ಧ ಪ್ರಸಾದ ಎಲ್ಲಿ ಸಿಗುತ್ತದೆ, ಎಂದು ಗೊತ್ತಿರುವುದಿಲ್ಲ. ಆದುದರಿಂದ ಸದ್ಯ ಕೇವಲ ಹಿಂದು ಅಂಗಡಿಕಾರರಿಗೆ ಪ್ರಸಾದ ಶುದ್ಧಿಗಾಗಿ ಓಂ ಪ್ರಮಾಣಪತ್ರವನ್ನು ವಿತರಿಸಲು ಆರಂಭಿಸಲಾಗಿದೆ. ಹಿಂದು ಅಂಗಡಿಕಾರರಿಗೆ ಓಂ ಪ್ರಮಾಣಪತ್ರವನ್ನು ಉಚಿತವಾಗಿ ನೀಡಲಾಗುತ್ತದೆ’ ಎಂದರು.
Related Articles
ನ್ಯಾಯವಾದಿ ವಿಷ್ಣು ಜೈನ್ ಮಾತನಾಡಿ, ಹಿಂದೂಗಳ ಅನೇಕ ಪ್ರಾಚೀನ ದೇವಸ್ಥಾನಗಳು ಭಾರತೀಯ ಪುರಾತತ್ತ್ವ ಇಲಾಖೆ ನಿಯಂತ್ರಣದಲ್ಲಿವೆ; ಆದರೆ ಪುರಾತತ್ತ್ವ ಇಲಾಖೆಯ ದುರ್ಲಕ್ಷದಿಂದಾಗಿ ಈ ದೇವಸ್ಥಾನಗಳು ಜೀರ್ಣಗೊಂಡಿವೆ. ಆ ದೇವಸ್ಥಾನಗಳು ಜೀರ್ಣೋದ್ಧಾರವಾಗದೇ ಕೊನೆಯ ಹಂತದಲ್ಲಿವೆ. ವಾಸ್ತವದಲ್ಲಿ ಈ ದೇವಸ್ಥಾನಗಳು ಹಿಂದೂಗಳು ಅಮೂಲ್ಯ ಸಂಪತ್ತು ಆಗಿರುವುದರಿಂದ ಕೇಂದ್ರ ಸರಕಾರವು ಅವುಗಳ ಸಂರಕ್ಷಣೆ ಮತ್ತು ಜೀರ್ಣೋದ್ಧಾರವನ್ನು ಮಾಡಬೇಕು, ಎಂದು ನಮ್ಮ ಬೇಡಿಕೆ ಇದೆ ಎಂದರು.
Advertisement
ದೇಶದ ವಿಭಜನೆಯಾದ ನಂತರ ಭಾರತದ ಅನೇಕ ಮುಸಲ್ಮಾನರು ತಮ್ಮ ಸಾವಿರಾರು ಎಕರೆ ಭೂಮಿ ಮತ್ತು ಸಂಪತ್ತು ಬಿಟ್ಟು ಪಾಕಿಸ್ಥಾನಕ್ಕೆ ಹೋದರು. ಅವರ ಈ ಸಂಪತ್ತನ್ನು ಇವ್ಹ್ಯಕ್ಯು ಪ್ರಾಪರ್ಟಿ ಆಕ್ಟ್, 1950 ಕ್ಕನುಸಾರ ಕೇಂದ್ರ ಸರಕಾರವು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗಿತ್ತು; ಆದರೆ ಆಗಿನ ಕಾಂಗ್ರೆಸ್ ಸರಕಾರವು ಈ ಎಲ್ಲ ಸಂಪತ್ತನ್ನು ವಕ್ಫ್ ಗೆ ನೀಡಿ ಅವರ ವಕ್ರ್ಪ ಬೊರ್ಡ್ ಸ್ಥಾಪಿಸಿತು. ಆದುದರಿಂದ ಅವರ ಈ ಕೃತಿ ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ವಾಸ್ತವದಲ್ಲಿ ಆ ಭೂತಿ ಪಾಕಿಸ್ತಾನದಲ್ಲಿ ತಮ್ಮ ಸಂಪತ್ತನ್ನು ಬಿಟ್ಟು ಬಂದ ಹಿಂದೂಗಳಿಗೆ ನೀಡುವುದು ಆವಶ್ಯಕವಾಗಿತ್ತು. ಆದರೆ ಈಗ ವಕ್ಫ್ ಬೊರ್ಡ್ ಪ್ರಸ್ತುತ ಭೂಮತಿಯನ್ನು ಸರಕಾರ ಮತ್ತು ಖಾಸಗಿ ಜನರಿಗೆ ಬಾಡಿಗೆಯ ಕರಾರಿನ ಮೇಲೆ ನೀಡಿ ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಿದೆ, ಇದು ತಪ್ಪಾಗಿದೆ. ಸರಕಾರದ ಜಾಗವನ್ನು ಪಡೆದು ಅದೇ ಜಾಗಕ್ಕಾಗಿ ಸರಕಾರದಿಂದ ಬಾಡಿಗೆ ಪಡೆಯುವುದು ಇದು ಕಾನೂನು ಬಾಹಿರವಾಗಿದೆ. ಆದುದರಿಮದ ಈ ವಕ್ಫ್ ಬೋರ್ಡ್ ವಿಸರ್ಜಿಸಬೇಕು ಎಂದರು.
ಈ ಸಮಯದಲ್ಲಿ ಗೋಮಂತಕ ಮಂದಿರ ಮಹಾಸಂಘದ ಜಯೇಶ ಥಳಿ ಮಾತನಾಡಿ,’ ನಾವು ಮಂದಿರ ಮಹಾಸಂಘದ ವತಿಯಿಂದ ಗೋವಾದ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಫಾಸ್ಟಫುಡ್ ಮತ್ತು ಪ್ಲಾಸ್ಟಿಕ್ ಚೀಲಗಳ ವಿರುದ್ಧ ಅಭಿಯಾನವನ್ನು ನಡೆಸಿದ್ದೇವೆ. ಅದಕ್ಕೆ ಒಳ್ಳೆಯ ಬೆಂಬಲ ಸಿಕ್ಕಿದೆ. ಈಗ ನಾವು ಗೋವಾದಲ್ಲಿನ ಎಲ್ಲ ಮಂದಿರಗಳ ಪರಿಸರದಲ್ಲಿ ಹಿಂದು ಅಂಗಡಿಕಾರರಿಗೆ ಓಂ ಸರ್ಟಿಫಿಕೆಟ್ ಆರಂಭಿಸುವ ಬಗ್ಗೆ ಹೇಳಲಿದ್ದೇವೆ. ಇದರಿಂದ ಬರುವ ಭಕ್ತರಿಗೆ ಶುದ್ಧ ಸಾತ್ತ್ವಿಕ ಪ್ರಸಾದ ದೊರಕುಲಿದೆ ಎಂದರು.