Advertisement
ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಭಾರತದ 15 ಸದಸ್ಯರ ಶೂಟಿಂಗ್ ತಂಡ ಕ್ರೊವೇಶಿಯಾಕ್ಕೆ ತೆರಳಿದ ಬಳಿಕ ಝಾಗ್ರೆಬ್‌ನಲ್ಲಿ 7 ದಿನಗಳ ಕ್ವಾರಂಟೈನ್‌ಗೆ ಒಳಗಾಗಲಿದೆ. ಬಳಿಕ ಮೇ 20ರಿಂದ ಒಸಿಜೆಕ್‌ನಲ್ಲಿ ನಡೆಯಲಿರುವ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದೆ. ಜೂ. 22ರಿಂದ ಇಲ್ಲಿಯೇ ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ ಶೂಟಿಂಗ್ ನಡೆಯಲಿದೆ. ಅನಂತರದ ಇಲ್ಲಿಂದಲೇ ಟೋಕಿಯೊ ಒಲಿಂಪಿಕ್ಸ್‌ಗೆ ಪಯಣಿಸಲಿದೆ.
ತರಬೇತಿ ಅಥವಾ ಸ್ಪರ್ಧೆಗಾಗಿ ತೆರಳಿದಾಗ ವಿದೇಶಗಳ ಕೋವಿಡ್-19 ಮಾರ್ಗಸೂಚಿಯನ್ನು ಯಾವುದೇ ಕಾರಣಕ್ಕೂ ಉಲ್ಲಂ ಸಬೇಡಿ ಎಂದು ಭಾರತೀಯ ಕ್ರೀಡಾಪಟುಗಳಿಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಎಚ್ಚರಿಕೆ ನೀಡಿದ್ದಾರೆ. ಕ್ರೊವೇಶಿಯಾಕ್ಕೆ ಅಭ್ಯಾಸಕ್ಕೆ ತೆರಳುತ್ತಿರುವ ಶೂಟರ್‌ಗಳಿಗೆ ಶುಭ ಕೋರಿರುವ ಕಿರಣ್ ರಿಜಿಜು, “ಪ್ರಯಾಣ ಸುರಕ್ಷಿತವಾಗಿರಲಿ. ಇತರ ದೇಶಗಳ ಕೋವಿಡ್-19 ಮಾರ್ಗಸೂಚಿಯನ್ನು ಎಂದಿಗೂ ಉಲ್ಲಂ ಸಬೇಡಿ. ತರಬೇತಿಯತ್ತ ಗಮನಹರಿಸಿ, ಕಾಳಜಿ ವಹಿಸಿ ಮತ್ತು ಸುರಕ್ಷಿತವಾಗಿರಿ. ನಮ್ಮ ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಲಾಗುವುದು. “ಆಲ್ ದಿ ಬೆಸ್ಟ್’ ಎಂದು ಟ್ವೀಟ್ ಮಾಡಿದ್ದಾರೆ.