Advertisement

ಒಲಿಂಪಿಕ್ಸ್‌ ಇನ್ನು ಮುಂದೂಡಲ್ಪಡದು: ಮೊರಿ

11:27 AM Apr 24, 2020 | Sriram |

ಟೋಕಿಯೊ: ಕೋವಿಡ್ 19 ವೈರಸ್‌ ಕಾರಣದಿಂದ ಈಗಾಗಲೇ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್‌ ಪಂದ್ಯಾವಳಿ ಇನ್ನು ಯಾವುದೇ ಕಾರಣಕ್ಕೂ ಮುಂದೂಡಲ್ಪಡದು ಎಂದು ಸಂಘಟನಾ ಸಮಿತಿಯ ಅಧ್ಯಕ್ಷ ಯೊಶಿರೊ ಮೊರಿ ಸ್ಪಷ್ಟಪಡಿಸಿದ್ದಾರೆ. ಗುರುವಾರ ಅವರು “ಕೊÂಡೊ ನ್ಯೂಸ್‌’ ಜತೆ ಮಾತಾಡುತ್ತ ಈ ವಿಷಯ ತಿಳಿಸಿದರು.

Advertisement

2021ರಲ್ಲೂ ಟೋಕಿಯೊ ಒಲಿಂಪಿಕ್ಸ್‌ ನಡೆಯುವುದು ಅನುಮಾನ ಎಂಬ ಸುದ್ದಿ ಕೆಲವು ಮಾಧ್ಯಮಗಳಲ್ಲಿ ಪ್ರಕಟಗೊಂಡ ಕಾರಣಕ್ಕಾಗಿ ಮೊರಿ ಈ ಹೇಳಿಕೆ ನೀಡಿದ್ದಾರೆ.”ಈಗಾಗಲೇ ಒಂದು ಹಂತದ ಸಮಸ್ಯೆ ಪರಿಹಾರ ಗೊಂಡಿದೆ. ಒಲಿಂಪಿಕ್ಸ್‌ ಅಧಿಕೃತವಾಗಿ 2021ಕ್ಕೆ ಮುಂದೂಡ ಲ್ಪಟ್ಟಿದೆ. ಸಂಘಟಕರು, ಕ್ರೀಡಾಳುಗಳು ನಿರಾಳರಾಗಿದ್ದಾರೆ. ಆದರೆ ಇದನ್ನು ಎರಡು ವರ್ಷಗಳಿಗೆ ಮುಂದೂಡುವುದು ತಾಂತ್ರಿಕವಾಗಿ ಅಸಾಧ್ಯ’ ಎಂದು ಮೊರಿ ಸ್ಪಷ್ಟಪಡಿಸಿದರು.

“ಪ್ರಧಾನಿ ಶಿಂಜೊ ಅಬೆ ಅವರೊಂದಿಗೆ ನಡೆದ ಸಭೆಯಲ್ಲಿ ಒಲಿಂಪಿಕ್ಸ್‌ ಕೂಟವನ್ನು ಎರಡು ವರ್ಷಗಳ ಮಟ್ಟಿಗೆ ಮುಂದೂಡುವ ಪ್ರಸ್ತಾವ ಎದುರಾದದ್ದು ನಿಜ. ಆದರೆ ಅವರು ಈ ಕೂಟವನ್ನು 2021ರಲ್ಲೇ ನಡೆಸುವ ತೀರ್ಮಾನಕ್ಕೆ ಬಂದರು’ ಎಂದು ಮೊರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next