Advertisement
ಮುಂದೆ ಇನ್ನೂ ದೊಡ್ಡ ಸವಾಲು ಗಳಿವೆ ಅಲ್ಲವೇ?ಹೌದು. ಏಷ್ಯನ್ ಗೇಮ್ಸ್, ಪ್ಯಾರಿಸ್ ಒಲಿಂಪಿಕ್ಸ್ ಇದೆ. ಮೊದಲು ಇದಕ್ಕೆಲ್ಲ ಅರ್ಹತಾ ಸುತ್ತುಗಳಿವೆ. ಇದನ್ನು ದಾಟಿ ಬರಬೇಕು. ಪೋಡಿಯಂ ಮೇಲೆ ಇನ್ನೂ ಮೇಲೇರಬೇಕೆಂಬುದೇ ಗುರಿ. ಮೊದಲು ಏಷ್ಯಾಡ್ ಬರಲಿದೆ. ಇದು ಕಾಮನ್ವೆಲ್ತ್ ಗೇಮ್ಸ್‌ಗಿಂತ ಮಿಗಿಲಾದ ಸವಾಲು. ಆದರೆ ಆತ್ಮವಿಶ್ವಾಸ, ಕಠಿನ ಅಭ್ಯಾಸ ನಡೆಸಿದರೆ ಅ ಗುರಿ ತಲುಪುವುದೂ ಅಸಾಧ್ಯವಲ್ಲ. ಏಷ್ಯಾಡ್‌ನಲ್ಲಿ ಉತ್ತಮ ಸಾಧನೆ ಮಾಡುವುದು ನನ್ನ ಮುಂದಿನ ಗುರಿ. ಇದು ಒಲಿಂಪಿಕ್ಸ್ ಗೆ ಪ್ರೇರಣೆ ಆಗಲಿದೆ. ಆದರೆ ಒಲಿಂಪಿಕ್ಸ್ ಅರ್ಹತೆ ಅಷ್ಟು ಸುಲಭವಲ್ಲ. ಹಾಗೆಂದು ಪ್ರಯತ್ನ ನಿಲ್ಲಿಸುವುದಿಲ್ಲ.
ಕ್ರೀಡಾಳುಗಳಿಗೆ ಮೂಲ ಸೌಕರ್ಯ ಒದಗಿಸಲು ರಾಜ್ಯದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಿದೆ. ನಗರ ಪ್ರದೇಶ
ಮಾತ್ರವಲ್ಲದೆ, ಪ್ರತೀ ಜಿಲ್ಲೆ, ತಾಲೂಕು ಮಟ್ಟದಲ್ಲೂ ಕ್ರೀಡೆಗಳಿಗೆ ಬೇಕಾದ ಅಗತ್ಯ ಸೌಲಭ್ಯ, ಸವಲತ್ತುಗಳನ್ನು ಒದ ಗಿಸಿಕೊಡಬೇಕು. ನನಗೆ ತಿಂಗಳಿಗೆ 30 ಸಾವಿರ ರೂ. ತರಬೇತಿಗೆ ಖರ್ಚಾಗು ತ್ತದೆ. ಹರಿಯಾಣದಲ್ಲಿ ಚಿನ್ನದ ಪದಕ ಗೆದ್ದವರಿಗೆ 1.50 ಕೋ.ರೂ. ನಗದು ಪುರಸ್ಕಾರ ನೀಡುತ್ತಿದ್ದಾರೆ. ಬೆಳ್ಳಿ, ಕಂಚಿನ ಪದಕ ಗೆದ್ದವರಿಗೂ ಉತ್ತಮ ನಗದು ಪುರಸ್ಕಾರ ಘೋಷಣೆಯಾಗಿದೆ. ಅದಕ್ಕೆ ಆ ರಾಜ್ಯದಲ್ಲಿ ಪದಕ ಗೆದ್ದವರ ಪಟ್ಟಿ ದೊಡ್ಡದಿದೆ. ಕರ್ನಾಟಕದಲ್ಲಿ ಪದಕ ಗೆದ್ದವರಿಗೆ ಕನಿಷ್ಠ ನಗದು ಪುರ ಸ್ಕಾರ ನೀಡುತ್ತಿರುವುದು ಸೂಕ್ತವಲ್ಲ. ಮುಖ್ಯಮಂತ್ರಿಗಳ ಜತೆ ಮಾತನಾಡಲು ಅವಕಾಶ ಸಿಕ್ಕಿದರೆ ಅವರಲ್ಲಿ ಹೇಳುವೆ. ಗ್ರಾಮೀಣ ಭಾಗದಿಂದ ಬಂದು, ವಿಶ್ವ ಮಟ್ಟ ದಲ್ಲಿ ದೇಶಕ್ಕೆ ಪದಕ ತರುವ ಸಾಧನೆಯ ಬಗ್ಗೆ ಏನನ್ನಿಸುತ್ತದೆ?
ಒಮ್ಮೆ ಹಿಂದಿರುಗಿ ನೋಡಿದರೆ ಅಚ್ಚರಿ. ಕುಂದಾಪುರದ ಚಿತ್ತೂರಿನಂತಹ ಸಣ್ಣ ಹಳ್ಳಿಯಿಂದ ಬಂದು, ಈ ಮಟ್ಟಕ್ಕೆ ಸಾಧನೆ ಮಾಡಲು ತರಬೇತಿ, ನಿತ್ಯವೂ ಅಭ್ಯಾಸ ಎಲ್ಲವೂ ಸವಾಲೇ ಆಗಿತ್ತು. ಊರಲ್ಲಿದ್ದಾಗ ಜಿಮ್‌ನಲ್ಲಿ ವಕೌìಟ್ ಮಾಡಲು ದೂರದ ಕುಂದಾಪುರಕ್ಕೆ ಬರಬೇಕು. ಪ್ರಯಾಣವೇ 3-4 ಗಂಟೆ ಆಗುತ್ತದೆ. ಆರಂಭದಲ್ಲಿ ಟ್ರಕ್ ಚಾಲಕ ರಾಗಿದ್ದ ಅಪ್ಪನ ದುಡಿಮೆ ಪೂರ್ತಿ ನನ್ನ ತರಬೇತಿಗೆ ತಗಲುತ್ತಿತ್ತು. ಆ ಬಳಿಕ ಸ್ಕಾಲರ್‌ಶಿಪ್‌ನಿಂದ ಸ್ವಲ್ಪ ಪ್ರಯೋ ಜನವಾಗಿದೆ. ಕಾಲೇಜು ದಿನಗಳಲ್ಲಿ ಸ್ನೇಹಿತರು, ಸೀನಿಯರ್ನಿಂದಲೂ ಸಹಾಯ ಪಡೆದದ್ದಿದೆ.
Related Articles
ಖಂಡಿತವಾಗಿಯೂ ಉತ್ತಮ ಮಟ್ಟ ದಲ್ಲಿದೆ. ಮೊದಲು ಕ್ರೀಡಾಪ್ರತಿಭೆಗಳನ್ನು ಗುರುತಿಸುವುದು ಮುಖ್ಯ. ಈ ಕೆಲಸ ನಮ್ಮಲ್ಲಿ ಉತ್ತಮ ಮಟ್ಟದಲ್ಲಿ ಆಗುತ್ತಿದೆ. ಇದರಿಂದ ನಾವು ಒಂದೊಂದೇ ಹೆಜ್ಜೆ ಮೇಲೇರುತ್ತೇವೆ. ಸರಕಾರದಿಂದ ಹೆಚ್ಚಿನ ನೆರವು ಪಡೆಯಲು ಮಾಧ್ಯಮಗಳ ಈ ಗುರುತಿಸುವಿಕೆ ನೆರವಿಗೆ ಬರುತ್ತದೆ.
Advertisement