Advertisement

ಒಲಿಂಪಿಕ್ಸ್‌ ಹಾಕಿಗೆ ನೂತನ ನಿಯಮ : ಸೆಮಿಫೈನಲ್‌ ಸೋತರೂ ಚಿನ್ನ ಗೆಲ್ಲುವ ಯೋಗ!

10:35 PM Jul 11, 2021 | Team Udayavani |

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹಾಕಿಗೆ ನೂತನ ನಿಯಮವೊಂದನ್ನು ಜಾರಿಗೊಳಿಸಲಾಗಿದೆ. ಇದರಿಂದ ಸೆಮಿಫೈನಲ್‌ನಲ್ಲಿ ಸೋತ ಹಾಕಿ ತಂಡಕ್ಕೂ ಚಿನ್ನದ ಪದಕ ಗೆಲ್ಲುವ ಅವಕಾಶವೊಂದು ತೆರೆಯಲಿದೆ!

Advertisement

ಹೌದು, ಇದು ಕೊರೊನಾ ಕಾರಣಕ್ಕಾಗಿ ರೂಪಿಸಲಾದ ನೂತನ ನಿಯಮ. ಅಕಸ್ಮಾತ್‌ ತಂಡವೊಂದು ಕೊರೊನಾ ಕೇಸ್‌ನಿಂದಾಗಿ ಫೈನಲ್‌ ನಿಂದ ಹಿಂದೆ ಸರಿದರೆ ಆಗ ಕಂಚಿನ ಪದಕದ ಪ್ರತ್ಯೇಕ ಸ್ಪರ್ಧೆ ಇರುವುದಿಲ್ಲ. ಬದಲಾಗಿ, ಫೈನಲ್‌ನಿಂದ ಹಿಂದೆ ಸರಿದ ತಂಡದ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತ ತಂಡಕ್ಕೆ ಪ್ರಶಸ್ತಿ ಸಮರದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನೀಡಲಾಗುವುದು. ಗೆದ್ದರೆ ಚಿನ್ನ ಒಲಿಯಲಿದೆ. ಸೆಮಿ ಫೈನಲ್‌ನಲ್ಲಿ ಸೋತ ಇನ್ನೊಂದು ತಂಡಕ್ಕೆ ಕಂಚಿನ ಪದಕ ಲಭಿಸಲಿದೆ.ಇದು ಕುಸ್ತಿಗೂ ಅನ್ವಯಿಸುತ್ತದೆ.

ರವಿವಾರ ಕೂಟದ “ನ್ಪೋರ್ಟ್‌ -ಸ್ಪೆಸಿಫಿಕ್‌ ರೆಗ್ಯುಲೇಶನ್ಸ್‌’ (ಎಸ್‌.ಎಸ್‌.ಆರ್‌.) ಈ ನಿಯಮವನ್ನು ಜಾರಿಗೊಳಿಸಿದೆ. ಕೊರೊನಾದಿಂದಾಗಿ ಹಾಕಿ ತಂಡವೊಂದಕ್ಕೆ ಸ್ಪರ್ಧಿಸಲು ಸಾಧ್ಯವಾಗದೇ ಹೋದರೆ ಆ ತಂಡವನ್ನು ಅನರ್ಹಗೊಳಿಸುವುದಿಲ್ಲ. ಬದಲಾಗಿ “ಡಿಟ್‌ ನಾಟ್‌ ಸ್ಟಾರ್ಟ್‌’ (ಡಿ.ಎನ್‌.ಎಸ್‌.) ಎಂದು ಗುರುತಿಸಿ ಇಡಲಾಗುವುದು. ನಾಕೌಟ್‌ ಹಂತದಲ್ಲಿ ತಂಡಕ್ಕೆ ಆಡಲು ಅಸಾಧ್ಯವಾದರೆ ಎದುರಾಳಿಗೆ ಮುನ್ನಡೆ ಲಭಿಸಲಿದೆ.

ಅಕಸ್ಮಾತ್‌ ಕೊರೊನಾದಿಂದಾಗಿ ಎರಡೂ ಫೈನಲಿಸ್ಟ್‌ ತಂಡಗಳಿಗೆ ಆಡಲು ಸಾಧ್ಯವಾಗದಿದ್ದರೆ ಆಗ ಏನು ಮಾಡಲಾಗುವುದು ಎಂಬು ದರ ಉಲ್ಲೇಖ ಈ ನಿಯಮಾ ವಳಿಯಲ್ಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next