Advertisement

Paris Olympics: ಅಮೆರಿಕಕ್ಕೆ ಬಂತು ಒಲಿಂಪಿಕ್ಸ್‌  ಧ್ವಜ

12:19 AM Aug 14, 2024 | Team Udayavani |

ಲಾಸ್‌ ಏಂಜಲೀಸ್‌: ಪ್ಯಾರಿಸ್‌ನಲ್ಲಿ ಹಸ್ತಾಂತರಗೊಂಡ ಒಲಿಂ ಪಿಕ್ಸ್‌ ಧ್ವಜವೀಗ ಅಮೆರಿಕಕ್ಕೆ ಆಗಮಿಸಿದೆ. ಅಮೆರಿಕದ ಲಾಸ್‌ ಏಂಜ ಲೀಸ್‌ 2028ರ ಒಲಿಂಪಿಕ್ಸ್‌ ಆತಿಥ್ಯ ವಹಿಸಲಿದ್ದು, ಅಲ್ಲಿ ಈ ಧ್ವಜ ಹಾರಾಡಲಿದೆ.

Advertisement

ಅಮೆರಿಕದ ಕ್ರೀಡಾಪಟುಗಳು ಹಾಗೂ ಅಧಿಕಾರಿಗಳನ್ನು ಹೊತ್ತ ಡೆಲ್ಟಾ ಏರ್‌ಲೈನ್ಸ್‌ನಲ್ಲಿ ಈ ಧ್ವಜವನ್ನು ತರಲಾ ಯಿತು. ವಿಮಾನದ ಮೇಲೆ “ಲಾ28′ ಎಂದು ಆಕರ್ಷಕವಾಗಿ ಬರೆಯಲಾಗಿತ್ತು. ಇದರ ಆಚೀಚೆ ಪಾಮ್‌ ಟ್ರೀಗಳ ಚಿತ್ರವಿತ್ತು. ಈ ಸಂದರ್ಭದಲ್ಲಿ ಲಾಸ್‌ ಏಂಜಲೀಸ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟುಪಾಕ್‌ ಶಕುರ್‌ ಅವರ “ಕ್ಯಾಲಿಫೋರ್ನಿಯಾ ಲವ್‌’ ಹಾಡು ಮಾರ್ದನಿಸುತ್ತಿತ್ತು.

ಅಮೆರಿಕ ತಂಡದ ಕೆಂಪು  ‌ಟ್ರ್ಯಾಕ್‌ಸೂಟ್‌ನಲ್ಲಿದ್ದ ಲಾಸ್‌ ಏಂಜಲೀಸ್‌ ಮೇಯರ್‌ ಕರೆನ್‌ ಬಾಸ್‌ ಧ್ವಜವನ್ನು ಹಾರಾಡಿಸುತ್ತ ಮೊದಲಿಗರಾಗಿ ಕೆಳಗಿಳಿದರು. ಒಲಿಂಪಿಕ್‌ ಡೈವರ್‌ ಡೆಲಾನಿ ಶ್ನೆಲ್‌, ಸ್ಕೇಟ್‌ಬೋರ್ಡರ್‌ ಟೇಟ್‌ ಕಾರೂÂ ಮತ್ತು ಇತರ ಕ್ರೀಡಾ ಪಟುಗಳು ಇವರೊಂದಿಗಿದ್ದರು. ಕ್ಯಾಲಿಫೋರ್ನಿಯಾ ಗವರ್ನರ್‌ ಗೆವಿನ್‌ ನ್ಯೂಸಮ್‌, ಪ್ಯಾರಿಸ್‌ನಿಂದ ಆಗಮಿಸಿದ ಧ್ವಜ ಹಾಗೂ ತಂಡವನ್ನು ಬರಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next