Advertisement

ಒಲಿಂಪಿಕ್‌ ಟೆಸ್ಟ್‌ ಬಾಕ್ಸಿಂಗ್‌ ಕೂಟ: ಥಾಪ, ಪೂಜಾ, ಆಶಿಷ್‌ ಸ್ವರ್ಣ ನಿರೀಕ್ಷೆ

11:27 PM Oct 30, 2019 | Sriram |

ಟೋಕಿಯೊ: ನಾಲ್ಕು ಬಾರಿಯ ಏಶ್ಯನ್‌ ಪದಕ ವಿಜೇತ ಶಿವ ಥಾಪ, ಆಶಿಷ್‌ ಮತ್ತು ಪೂಜಾ ರಾಣಿ ಅವರು “ಒಲಿಂಪಿಕ್‌ ಟೆಸ್ಟ್‌ ಬಾಕ್ಸಿಂಗ್‌ ಟೂರ್ನಿ’ಯ ಫೈನಲ್‌ ಪ್ರವೇಶಿಸಿ ಸ್ವರ್ಣ ನಿರೀಕ್ಷೆ ಮೂಡಿಸಿದ್ದಾರೆ. ಉಳಿದಂತೆ ಭಾರತದ ನಾಲ್ವರು ಕಂಚಿನ ಪದಕದ ಸಾಧನೆಗೈದಿದ್ದಾರೆ.

Advertisement

ಮಾಜಿ ವನಿತಾ ಜೂನಿಯರ್‌ ವಿಶ್ವ ಚಾಂಪಿಯನ್‌ ನಿಖತ್‌ ಜರೀನ್‌ (51 ಕೆಜಿ), ಸಿಮ್ರನ್‌ಜಿàತ್‌ ಕೌರ್‌ (60 ಕೆಜಿ); ಪುರುಷರ ವಿಭಾಗ ಸ್ಪರ್ಧಿಗಳಾದ ಸುಮಿತ್‌ ಸಂಗ್ವಾನ್‌ (91 ಕೆಜಿ) ಮತ್ತು ವಹ್ಲಿಂಪಿಯ (75 ಕೆಜಿ) ಸೆಮಿಫೈನಲ್‌ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಬುಧವಾರ ನಡೆದ 63 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಶಿವ ಥಾಪ ಜಪಾನಿನ ಬಾಕ್ಸರ್‌ ದೈಸುಕೆ ನರಿಮಟ್ಸು ಅವರನ್ನು ಮಣಿಸಿದರು. 4 ಬಾರಿಯ ಏಶ್ಯನ್‌ ಪದಕ ವಿಜೇತ ಥಾಪ ಈ ತಿಂಗಳು ತಮ್ಮ 3ನೇ ರಾಷ್ಟ್ರೀಯ ಪ್ರಶಸ್ತಿಯನ್ನೂ ಜಯಿಸಿದ್ದರು. ಇದೀಗ ಮತ್ತೂಂದು ಪದಕ ಜಯಿಸುವ ಮೂಲಕ ಮುಂಬರುವ ಒಲಿಂಪಿಕ್ಸ್‌ನಲ್ಲಿ ಭಾರತದ ನಿರೀಕ್ಷೆಯನ್ನು ಹೆಚ್ಚಿಸುವಂತೆ ಮಾಡಿದ್ದಾರೆ.

ಬುಧವಾರ ಸಂಜೆ ನಡೆದ ಮುಖಾಮುಖೀಯಲ್ಲಿ ಆಶಿಷ್‌ (69 ಕೆಜಿ) ಜಪಾನಿನ ಹಿರೋಕಿ ಕಿಂಜೊ ಅವರನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇರಿಸಿದರು.

ಚಿನ್ನದ ನಿರೀಕ್ಷೆಯಲ್ಲಿ ರಾಣಿ
ಭಾರತದ ಸ್ಟಾರ್‌ ಮಹಿಳಾ ಬಾಕ್ಸರ್‌ಗಳಲ್ಲಿ ಒಬ್ಬರಾದ ಪೂಜಾ ರಾಣಿ 75 ಕೆಜಿ ವಿಭಾಗದಲ್ಲಿ ಬ್ರಝಿಲ್‌ನ ಬೀಟ್ರಿಜ್‌ ಸೋರೆಸ್‌ ಅವರನ್ನು ಮಣಿಸಿ ಚಿನ್ನದ ಪದಕದ ಭರವಸೆ ಮೂಡಿಸಿದ್ದಾರೆ. ಏಶ್ಯನ್‌ ಗೇಮ್ಸ್‌ ಕಂಚಿನ ಪದಕ ವಿಜೇತೆ ಪೂಜಾ ರಾಣಿ, ಈ ವರ್ಷದ ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು.

Advertisement

ಬುಧವಾರದ 51 ಕೆಜಿ ವನಿತಾ ವಿಭಾಗಲ್ಲಿ ನಿಖತ್‌ ಜರೀನ್‌ ಆತಿಥೇಯ ನಾಡಿನ ಸನಾ ಕವಾನೊ ವಿರುದ್ಧ ಸೋತು ಕಂಚಿನ ಪದಕಕ್ಕೆ ಸಮಾಧಾನಪಟ್ಟರು. ವಹ್ಲಿಂಪಿಯ (75 ಕೆಜಿ) ಜಪಾನಿನ ಯಿಟೊ ಮೊರಿವಾಕಿ ವಿರುದ್ಧ ಪರಾಭವಗೊಂಡರು.

ಸುಮಿತ್‌ ಸಂಗ್ವಾನ್‌ ಕಜಾಕ್‌ಸ್ಥಾನದ ಐಬೆಕ್‌ ಒರಲಾºಯ್‌ ವಿರುದ್ಧ, ಸಿಮ್ರನ್‌ಜಿàತ್‌ ಕೌರ್‌ ಮತ್ತೋರ್ವ ಕಜಾಕ್‌ ಎದುರಾಳಿ ರಿಮ್ಮಾ ವೊಲೊಸೆಂಕೊ ಎದುರು ಎಡವಿದರು.

Advertisement

Udayavani is now on Telegram. Click here to join our channel and stay updated with the latest news.

Next