Advertisement

70 ಸಾವಿರ ಕೋಟಿ ರೂ.ನ ಚಳಿಗಾಲದ ಒಲಿಂಪಿಕ್ಸ್‌ಗೆ ತೆರೆ!

06:30 AM Feb 26, 2018 | Team Udayavani |

ಪಿಯಾಂಗ್‌ಚಾಂಗ್‌ (ದ.ಕೊರಿಯಾ): 23ನೇ ಚಳಿಗಾಲದ ಒಲಿಂಪಿಕ್ಸ್‌ಗೆ ಭರ್ಜರಿ ತೆರೆ ಬಿದ್ದಿದೆ. ಅಂದಾಜು 70 ಸಾವಿರ ಕೋಟಿ ರೂ. ಮೊತ್ತದಲ್ಲಿ ನಡೆದಿರುವ ಈ ಕೂಟ ಎಲ್ಲ ಅಡೆತಡೆಗಳನ್ನು ಮೀರಿ ನೆಮ್ಮದಿಯ ನಿಟ್ಟುಸಿರಿಗೆ ಕಾರಣವಾಗಿದೆ.  ಕಡೆಯ ಪಕ್ಷ ಕ್ರೀಡಾಕೂಟದ ಸಂಘಟಕರ ಪಾಲಿಗಂತೂ! ಚಳಿಗಾಲದ ಒಲಿಂಪಿಕ್ಸ್‌ ಆಯೋಜನೆ ಬಹಳ ಸವಾಲಿನ ಕೆಲಸ ಎನ್ನುವುದೇ ಇದಕ್ಕೆ ಕಾರಣ.

Advertisement

ಪ್ರತಿಬಾರಿ ಕ್ರೀಡಾಕೂಟ ನಡೆದಾಗ ಪ್ರತಿಕೂಲ ಹವಾಮಾನ ದೊಡ್ಡ ಸವಾಲಾಗಿರುತ್ತದೆ. ಈ ಬಾರಿಯೂ ಅದಕ್ಕೆ ಹೊರತಾಗಿರಲಿಲ್ಲ. ಒಮ್ಮೆ ಕ್ರೀಡಾಕೂಟದ ಸಮೀಪ ಭೂಕಂಪ ಸಮೀಪಿಸಿ ಕೆಲವು ದಿನಗಳ ಮಟ್ಟಿಗೆ ಕೆಲಸ್ಪರ್ಧೆಗಳನ್ನು ಮುಂದೂಡಲಾಗಿತ್ತು. ಇನ್ನೊಮ್ಮೆ ಬೀಸಿದ ಬಿರುಗಾಳಿ ಪರಿಣಾಮ ಕ್ರೀಡಾಗ್ರಾಮದ ಪರಿಸ್ಥಿತಿಯೇ ಸಂಕಷ್ಟಕ್ಕೆ ಸಿಲುಕಿತ್ತು. ಇದ್ಕೆಕ್ಕೆಲ್ಲ ಮೊದಲೇ ಸಂಘಟಕರು ಸಜ್ಜಾಗಿದ್ದರಿಂದ ಯಾವುದೇ ವಿಪರೀತದ ಬೆಳವಣಿಗೆ ನಡೆಯದೇ ಕ್ರೀಡಾಕೂಟ ಸಂತೋಷವಾಗಿ ಮುಗಿದಿದೆ. ಇದಕ್ಕಾಗಿ ಸಂಘಟಕರಿಗೆ ಅಭಿನಂದನೆ ಸಲ್ಲಿಸಲೇಬೇಕು. ಕ್ರೀಡಾಕೂಟದ ಮುಕ್ತಾಯ ಸಮಾರಂಭಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುತ್ರಿ ಆಗಮಿಸಿದ್ದು ಮುಖ್ಯಾಂಶಗಳಲ್ಲೊಂದು.

14 ಚಿನ್ನ ಸಹಿತ ಒಟ್ಟು 39 ಪದಕ ನಾರ್ವೆ ಪದಕ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆಯಿತು. 14 ಚಿನ್ನ ಗೆದ್ದರೂ ಒಟ್ಟಾರೆ ಪದಕ ಕಡಿಮೆಯಿದ್ದಿದ್ದರಿಂದ ಜರ್ಮನಿ 2ನೇ ಸ್ಥಾನಕ್ಕೆ ಕುಸಿಯಿತು.

Advertisement

Udayavani is now on Telegram. Click here to join our channel and stay updated with the latest news.

Next