Advertisement
ಪುತ್ತೂರಿನ ಮಟ್ಟಿಗೆ ಈಜು ಕೊಳ ಸ್ಥಾಪನೆ ದೊಡ್ಡ ಇತಿಹಾಸವೇ ಹೌದು. ಇದಕ್ಕೆ ಮೊದಲು ನದಿ, ತೋಡುಗಳೇ ಈಜು ಕಲಿಕೆಯ ಸ್ಥಳಗಳು. ಆದರೆ ಇದೀಗ ಕಾಲ ಬದಲಾಗಿದೆ. ಪರಿಸ್ಥಿತಿಗೆ ತಕ್ಕಂತೆ ಬಾಲವನದಲ್ಲಿ ಈಜುಕೊಳ ಸ್ಥಾಪಿಸಲಾಯಿತು. ಇದರ ಉಸ್ತುವಾರಿ ಪಾರ್ಥ ವಾರಣಾಸಿ ಹೆಗಲಿಗೆ ಬೀಳುತ್ತಿದ್ದಂತೆ, ಈಜುಕೊಳದಲ್ಲಿ ಅನೇಕ ಪ್ರತಿಭೆಗಳ ಹುಟ್ಟಿಕೊಂಡವು. ಅಂತಹ ಪ್ರತಿಭೆಗಳ ಪೈಕಿ ಮೇರುಸ್ಥಾನದಲ್ಲಿರುವವರು ವೈಷ್ಣವ್ ಹೆಗ್ಡೆ.
2016ರ ನವಂಬರ್‌ನಲ್ಲಿ ನಡೆದ ಏಷ್ಯನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗಿ. ಶ್ರೀಲಂಕಾದಲ್ಲಿ ನಡೆದ ಸೌತ್ ಏಷ್ಯಾನ್ ಅಕ್ವೇಟಿಕ್ ಚಾಂಪಿಯನ್‌ಶಿಪ್‌ನಲ್ಲಿ 1 ಚಿನ್ನ, 1 ಕಂಚಿನ ಪದಕ. 2016ರ ಜುಲೈನಲ್ಲಿ ಜರಗಿದ ವರ್ಲ್ಡ್ ಸ್ಕೂಲ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದಾರೆ. ನವಂಬರ್‌ನಲ್ಲಿ ಜರಗಿದ ಏಷ್ಯನ್ ಸ್ಕೂಲ್ ಗೇಮ್ಸ್‌ನಲ್ಲಿ 8ನೇ ಸ್ಥಾನ ಪಡೆದಿದ್ದಾರೆ. ಇವರ ಈ ಸಾಧನೆಯನ್ನು ಗಮನಿಸಿ, ಅಮೆರಿಕಕ್ಕೆ ಕರೆಸಿಕೊಂಡು ತರಬೇತಿ ನೀಡಲು ಅಲ್ಲಿನ ಈಜು ತರಬೇತುದಾರರು ಆಸಕ್ತರಾಗಿದ್ದಾರೆ.
Related Articles
ಕೊಲ್ಕೊತಾದಲ್ಲಿ ನಡೆದ ನ್ಯಾಶನಲ್ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಏರ್ಪಡಿಸಿದ 61ನೇ ಎಸ್ ಜಿಎಫ್ ರಾಷ್ಟ್ರೀಯ ಈಜುಕೂಟದಲ್ಲಿ 50 ಮೀ. ಬ್ರೆಸ್ಟ್ ಸ್ಟ್ರೊಕ್‌ನಲ್ಲಿ 29.75 ಸೆಕೆಂಡ್‌ನಲ್ಲಿ ಗುರಿ ತಲುಪಿ, ಹೊಸ ದಾಖಲೆ ನಿರ್ಮಿಸಿದ್ದರು. 100 ಮೀ. ಬ್ರೆಸ್ಟ್ ಸ್ಟ್ರೊಕ್‌ನಲ್ಲಿ 1.7.12 ನಿಮಿಷಗಳಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಮೆಡ್ಲೇ ರಿಲೇಯಲ್ಲಿ ಚಿನ್ನ ಗೆದ್ದಿದ್ದಾರೆ. ಒಟ್ಟಿನಲ್ಲಿ ಇದು ದಕ್ಷಿಣ ಕನ್ನಡ ಜಿಲ್ಲೆಯ ಈಜು ಸ್ಪರ್ಧಿಯೊಬ್ಬರ ಪ್ರಥಮ ಸಾಧನೆಯೂ ಹೌದು.
Advertisement
ಒಲಿಂಪಿಕ್ ನ ಗುರಿಒಲಿಂಪಿಕ್ನಲ್ಲಿ ಪಾಲ್ಗೊಳ್ಳಬೇಕು ಎನ್ನುವುದು ನನ್ನ ಕನಸು. ಇದಕ್ಕಾಗಿ ಈಗಾಗಲೇ ತಯಾರಿ ನಡೆಸುತ್ತಿದ್ದೇನೆ. ಬೆಳಗ್ಗೆ- ಸಂಜೆ 2 ಗಂಟೆ ಅಭ್ಯಾಸ ನಡೆಸುತ್ತಿದ್ದೇನೆ. ದಿನಕ್ಕೆ 2 ಗಂಟೆ ಜಿಮ್‌ಗೆ ಹೋಗುತ್ತಿದ್ದೇನೆ. ಮುಂದೆ ಬೆಂಗಳೂರಿಗೆ ತೆರಳಿ, ತರಬೇತಿ ಪಡೆಯುವ ಆಕಾಂಕ್ಷೆ ಇದೆ.
ವೈಷ್ಣವ್ ಹೆಗ್ಡೆ, ಈಜುಪಟು ಗಣೇಶ್ ಎನ್. ಕಲ್ಲರ್ಪೆ