Advertisement
ಮನ್‌ಪ್ರೀತ್ ಸಿಂಗ್ ಅನು ಪಸ್ಥಿತಿಯಲ್ಲಿ ಹರ್ಮನ್‌ಪ್ರೀತ್ ಸಿಂಗ್ ಭಾರತ ತಂಡವನ್ನು ಮುನ್ನಡೆ ಸಲಿದ್ದಾರೆ. ಮನ್‌ದೀಪ್ ಸಿಂಗ್ ಅವರಿಗೆ ಉಪ ನಾಯಕತ್ವ ನೀಡಲಾಗಿದೆ. ರೂಪಿಂ ದರ್ ಪಾಲ್ ಸಿಂಗ್, ಬೀರೇಂದ್ರ ಲಾಕ್ರಾ, ಆಕಾಶ್‌ದೀಪ್ ಸಿಂಗ್ ವಿಶ್ರಾಂತಿ ಪಡೆದ ಇತರರು. ಈ ಪಂದ್ಯಾವಳಿ ಆಗಸ್ಟ್ 17ರಿಂದ 21ರ ವರೆಗೆ ನಡೆಯಲಿದೆ.
ಕರ್ನಾಟಕದ ಅನುಭವಿ ಸ್ಟ್ರೈಕರ್ ಎಸ್.ವಿ. ಸುನೀಲ್ ತಮ್ಮ ಮೊಣಕಾಲಿನ ಸಮಸ್ಯೆಯಿಂದ ಸಂಪೂರ್ಣ ಗುಣಮು ಖರಾಗಿದ್ದು, ಮತ್ತೆ ತಂಡವನ್ನು ಸೇರಿ ಕೊಂಡಿದ್ದಾರೆ. ಗೋಲ್ ಕೀಪರ್ ಶ್ರೀಜೇಶ್ ಸ್ಥಾನಕ್ಕೆ ಯುವ ಆಟಗಾ ರರಾದ ಕೃಷ್ಣ ಬಹಾದ್ದೂರ್ ಪಾಠಕ್ ಮತ್ತು ಸೂರಜ್ ಕರ್ಕೆರ ಅವರನ್ನು ಆಯ್ಕೆ ಮಾಡಲಾಗಿದೆ. ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ತೋರಲು ಇದೊಂದು ಉತ್ತಮ ಅವಕಾಶ ಎಂಬುದು ರೀಡ್ ಅಭಿಪ್ರಾಯ. ಆಶಿಷ್ ಟೋಪ್ನೊ, ಶಮ್ಶೆàರ್ ಸಿಂಗ್ ಇದೇ ಮೊದಲ ಸಲ ಭಾರತ ತಂಡವನ್ನು ಪ್ರವೇಶಿಸಿದ್ದಾರೆ.
Related Articles
ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಕೃಷ್ಣ ಬಹಾದ್ದೂರ್ ಪಾಠಕ್, ಸೂರಜ್ ಕರ್ಕೆರ, ಗುರ್ಜಿಂದರ್ ಸಿಂಗ್, ಕೊಥಜಿತ್ ಸಿಂಗ್, ಹಾರ್ದಿಕ್ ಸಿಂಗ್, ನೀಲಕಂಠ ಶರ್ಮ, ವಿವೇಕ್ ಸಾಗರ್ ಪ್ರಕಾಶ್, ಜಸ್ಕರಣ್ ಸಿಂಗ್, ಮನ್‌ದೀಪ್ ಸಿಂಗ್, ಗುರುಸಾಹಿಬ್‌ಜೀತ್ ಸಿಂಗ್, ನೀಲಂ ಸಂಜೀಪ್, ಜರ್ಮನ್‌ಪ್ರೀತ್ ಸಿಂಗ್, ವರುಣ್ ಕುಮಾರ್, ಆಶಿಷ್ ಟೋಪ್ನೊ, ಎಸ್.ವಿ. ಸುನೀಲ್, ಗುರ್ಜಂತ್ ಸಿಂಗ್, ಶಮ್ಶೆàರ್ ಸಿಂಗ್.
Advertisement